ಯುದ್ಧ ವಿಮಾನ ತಯಾರಿಕ ಘಟಕ ಉದ್ಘಾಟಿಸಿದ ಮೋದಿ
ಗುಜರಾತ್ : ವಡೋದರದ ವಿಮಾನ ತಯಾರಿಕೆಯ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಪೇನ್ ಪ್ರಧಾನಿ ಪೆಡ್ರೊ ಸಾಂಚೇಜ್ ಅವರು ಉದ್ಘಾಟಿಸಿದರು.
ಉದ್ಘಾಟನೆಗೆ ಮುನ್ನ ವಡೋದರದ ರಸ್ತೆಗಳಲ್ಲಿ ಪ್ರಧಾನಿ ಮೋದಿ, ಸ್ಪೇನ್ ಅಧ್ಯಕ್ಷನ ಜೊತೆಗೆ ರೋಡ್ ಶೋ ನಡೆಸಿದರು.
ಭಾರತದ ಮೊದಲ ಖಾಸಗಿ ಯುದ್ಧವಿಮಾನ ತಯಾರಿಕೆಯ ಘಟಕ ಗುಜರಾತ್ನ ವಡೋದರಾದಲ್ಲಿ ಚಾಲನೆಗೊಂಡಿದ್ದು. ಟಾಟಾ ಏರ್ಕ್ರಾಫ್ಟ್ ಕಾಂಪ್ಲೆಕ್ಸ್ನಲ್ಲಿ ಸಿ-295 ವಿಮಾನ ತಯಾರಿಕೆಯ ಘಟಕ ಇದಾಗಿದೆ. ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ನ ಕ್ಯಾಂಪಸ್ನಲ್ಲಿರುವ ಈ ಘಟಕದಲ್ಲಿ ಸ್ಪೇನ್ ಮೂಲದ ವಿಮಾನ ತಯಾರಿಕೆಯ ಸಂಸ್ಥೆ ಏರ್ಬಸ್ ಸಹಯೋಗದಲ್ಲಿ ಸಿ-295 ಮಿಲಿಟರಿ ವಿಮಾನಗಳನ್ನು ತಯಾರಿಸಲಾಗುತ್ತದೆ. ಒಟ್ಟಾರೆ ಈ ಯೋಜನೆಯಲ್ಲಿ 56 ವಿಮಾನಗಳ ತಯಾರಿಕೆಗೆ ಒಪ್ಪಂದವಾಗಿದೆ. ಏರ್ಬಸ್ ಸಂಸ್ಥೆ ತನ್ನ ದೇಶದಲ್ಲಿರುವ ತಯಾರಿಕಾ ಘಟಕದಿಂದ 16 ವಿಮಾನಗಳನ್ನು ತಯಾರಿಸಿ ಅಲ್ಲಿಂದಲೇ ನೇರವಾಗಿ ಭಾರತಕ್ಕೆ ಕಳುಹಿಸಲಿದೆ. ಇನ್ನುಳಿದ 40 ವಿಮಾನಗಳನ್ನು ಟಾಟಾ ಸಂಸ್ಥೆಯ ವಡೋದರಾ ಫ್ಯಾಕ್ಟರಿಯಲ್ಲಿ ತಯಾರಿಸಲಾಗುತ್ತದೆ.