ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ರಾಜಕೀಯ ನಾಯಕರಲ್ಲಿ ಒಳ್ಳೆತನ ಕಡಿಮೆ

08:43 PM Dec 26, 2023 IST | Samyukta Karnataka

ಕೊಪ್ಪಳ: ರಾಜಕೀಯ ನಾಯಕರಲ್ಲಿಯೂ ಒಳ್ಳೆತನ ಕಡಿಮೆಯಾಗಿದೆ ಎಂದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ನಾಯಕರ ಮೇಲೆ ಮೊದಲಿದ್ದ ಘನತೆ, ಗೌರವ ಕಡಿಮೆಯಾಗಿದೆ. ಆದರು ಬದಲಾದ ಸನ್ನಿವೇಶದಲ್ಲಿ ಕೂಡಾ ನಾವು ಜನರ ಕೆಲಸ ಮಾಡಬೇಕು ಎಂದರು.
ಸದ್ಯ ರಾಜ್ಯದಲ್ಲಿ ಹೊಸ ತಾಲೂಕು, ಹೋಬಳಿಗಳ ಘೋಷಣೆ ಇಲ್ಲ. ಕೆಲವೆಡೆ ಅನಿವಾರ್ಯತೆ ಇಲ್ಲದಿದ್ದರೂ ಪ್ರತಿಷ್ಠೆಗಾಗಿ ಹೊಸ ತಾಲೂಕು ರಚನೆಗೆ ಬೇಡಿಕೆ ಇಟ್ಟಿದ್ದಾರೆ. ಆದರೆ ಸದ್ಯ ರಾಜ್ಯದಲ್ಲಿ ಹೊಸ ತಾಲೂಕು ರಚನೆ ಸಾಧ್ಯವಿಲ್ಲ. ರಾಜ್ಯದಲ್ಲಿ ಹಿಂದಿನ ಸರ್ಕಾರ ೬೩ ಹೊಸ ತಾಲೂಕುಗಳನ್ನು ಘೋಷಣೆ ಮಾಡಿತ್ತು. ಆದರೆ ಇಂದಿಗೂ ೪೦ ತಾಲೂಕಿಗೆ ಮೂಲಭೂತ ಸೌಕರ್ಯಗಳೇ ಕಲ್ಪಿಸಲಿಲ್ಲ. ಹೀಗಾಗಿ ಮುಂದಿನ ಎರಡ್ಮೂರು ವರ್ಷ ಹೊಸ ತಾಲೂಕುಗಳಿಗೆ ಮೂಲಸೌಕರ್ಯ ಕೊಡುವ ಕೆಲಸವನ್ನು ನಾವು ಮಾಡುತ್ತೇವೆ. ವಿಜಯನಗರ ಜಿಲ್ಲೆ ಘೋಷಣೆ ಮಾಡಿದರು. ಆದರೆ ಕಚೇರಿಯೂ ಇಲ್ಲ, ಸಿಬ್ಬಂದಿಯನ್ನೂ ಕೊಡದೇ ಹೋದರು. ಹಿಂದಿನವರು ೬೦೦ ಕೋಟಿ ರೂ. ಹಣವನ್ನು ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡಿ, ಹೋಗಿದ್ದಾರೆ. ಆದರೆ ಇಲಾಖೆಗೆ ಪ್ರತಿವರ್ಷಕ್ಕೆ ಕಟ್ಟಡ ಕಟ್ಟಲು ಕೇವಲ ೧೨೦ ಕೋಟಿ ರೂ. ಮಾತ್ರ ಅನುದಾನ ಇದೆ ಎಂದರು.

Next Article