ರಾಜ್ಯ ಪೊಲೀಸ್ ನೇಮಕಾತಿ ಪರೀಕ್ಷೆ: ಹೆಚ್ಚುವರಿ ಬೋಗಿ ಜೋಡಣೆ
ಹುಬ್ಬಳ್ಳಿ: ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ಪರೀಕ್ಷೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಕರ್ನಾಟಕ ರಾಜ್ಯದೊಳಗೆ ಸಂಚರಿಸುವ ವಿವಿಧ ರೈಲುಗಳಲ್ಲಿ ಒಂದು ಹೆಚ್ಚುವರಿ ಬೋಗಿಗಳನ್ನು ತಾತ್ಕಾಲಿಕ ಆಧಾರದ ಮೇಲೆ ಜೋಡಿಸಲು ನೈಋತ್ಯ ರೈಲ್ವೆ ವಲಯವು ನಿರ್ಧರಿಸಿದೆ.
ಬೋಗಿಗಳ ವಿಧ ಮತ್ತು ವರ್ಧನೆಯ ದಿನಾಂಕಗಳ ವಿವರ:
ಮೈಸೂರು -ಬೆಳಗಾವಿ ( ೧೭೩೦೧) ಫೆ. ೨೪ರಿಂದ ೨೫ರವರೆಗೆ, ಬೆಳಗಾವಿ -ಮೈಸೂರು (೧೭೩೦೨) ಫೆ. ೨೩ರಿಂದ ೨೫ರವರೆಗೆ ಮೈಸೂರು-ಬಾಗಲಕೋಟ (೧೭೩೦೭) ಫೆ. ೨೩ ರಿಂದ ೨೫ರವರೆಗೆ, ಬಾಗಲಕೋಟೆ -ಮೈಸೂರು (೧೭೩೦೮) ಫೆ ೨೪ರಿಂದ ೨೬ರವರೆಗೆ, ಮೈಸೂರು- ತಾಳಗುಪ್ಪ ಫೆ. ೨೩ರಿಂದ ೨೫ರವರೆಗೆ ( ೧೬೨೨೭), ತಾಳಗುಪ್ಪ ಮೈಸೂರು ( ೧೬೨೨೮) ಫೆ. ೨೪ರಿಂದ ೨೬ರವರೆಗೆ. ಈ ಎಲ್ಲ ರೈಲುಗಳಿಗೆ ನಿಗದಿತ ದಿನಾಂಕಗಳAದು ಒಂದು ಸಾಮಾನ್ಯ ದ್ವಿತೀಯ ದರ್ಜೆ ಹೆಚ್ಚುವರಿ ಬೋಗಿ ಜೋಡಿಸಲಾಗುತ್ತಿದೆ.
ಕೆಎಸ್‌ಆರ್ ಬೆಂಗಳೂರು - ಹುಬ್ಬಳ್ಳಿ ( ೧೭೩೯೧) ಫೆ ೨೫ರಿಂದ ೨೭ರವರೆಗೆ, ಹುಬ್ಬಳ್ಳಿ- ಕೆಎಸ್‌ಆರ್ ಬೆಂಗಳೂರು ( ೧೭೩೯೨) ಫೆ. ೨೨ರಿಂದ ೨೫ರವರೆಗೆ, ಕೆಎಸ್‌ಆರ್ ಬೆಂಗಳೂರು- ಹೊಸಪೇಟೆ (೦೫೨೪೩) ಫೆ. ೨೩ರಿಂದ ೨೫ರವರೆಗೆ, ಹೊಸಪೇಟೆ- ಕೆಎಸ್‌ಆರ್ ಬೆಂಗಳೂರಿಗೆ ಫೆ.೨೪ರಿಂದ ೨೬ರವರೆಗೆ, ಹೊಸಪೇಟೆ- ಹರಿಹರ (೦೬೨೪೫) ಫೆ. ೨೩ರಿಂದ ೨೫ರವರೆಗೆ, ಹರಿಹರ-ಹೊಸಪೇಟೆ (೦೬೨೪೬) ಫೆ. ೨೪ರಿಂದ ೨೫ರವರೆಗೆ, ಕೆಎಸ್‌ಆರ್ ಬೆಂಗಳೂರು- ಮಿರಜ್ ( ೧೬೫೮೯) ಫೆ ೨೩ರಿಂದ ೨೫ರವರೆಗೆ, ಮಿರಜ್ -ಕೆಎಸ್‌ಆರ್ ಬೆಂಗಳೂರಿಗೆ (೧೬೫೯೦), ಫೆ.೨೪ರಿಂದ ಫೆ. ೨೬ರವರೆಗೆ, ಕೆಎಸ್‌ಆರ್ ಬೆಂಗಳೂರು-ಬೆಳಗಾವಿ ( ೨೦೬೫೩) ಫೆ.೨೩ರಿಂದ ೨೫ರವರೆಗೆ, ಬೆಳಗಾವಿ- ಕೆಎಸ್‌ಆರ್ ಬೆಂಗಳೂರಿಗೆ (೨೦೬೫೪) ಫೆ. ೨೪ರಿಂದ ೨೬ರವರೆಗೆ. ಈ ರೈಲುಗಳಿಗೆ ಒಂದು ಸಾಮಾನ್ಯ ದ್ವಿತೀಯ ದರ್ಜೆ ಅಂತ್ಯೋದಯ ರೈಲು ಬೋಗಿ ಜೋಡಿಸಲಾಗುತ್ತಿದೆ.
ಯಶವಂತಪುರ- ವಿಜಯಪುರ (೦೬೫೪೫) ಫೆ. ೨೩ರಿಂದ ಫೆ ೨೫ರವರೆಗೆ, ವಿಜಯಪುರ-ಯಶವಂತಪುರ (೦೬೫೪೬) ಫೆ. ೨೪ರಿಂದ ೨೬ರವರೆಗೆ, ಎಸ್‌ಎಂವಿಟಿ ಬೆಂಗಳೂರು-ಮುರ್ಡೇಶ್ವರ (೧೬೫೮೫) ಫೆ. ೨೩ರಿಂದ ೨೫ರವರೆಗೆ, ಮುರ್ಡೇಶ್ವರ-ಎಸ್‌ಎಂವಿಟಿ ಬೆಂಗಳೂರು (೧೬೫೮೬) ಫೆ.೨೪ರಿಂದ ೨೬ರವರೆಗೆ. ಈ ರೈಲುಗಳಿಗೆ ೧ ಸಾಮಾನ್ಯ ದ್ವಿತೀಯ ದರ್ಜೆ ಬೋಗಿ ಜೋಡಿಸಲಾಗುತ್ತಿದೆ.
ಅದೇ ರೀತಿ ಕೆಎಸ್‌ಆರ್ ಬೆಂಗಳೂರು -ನಾಂದೇಡ್ (೧೬೫೯೩) ಫೆ.೨೩ರಿಂದ ೨೫ರವರೆಗೆ, ನಾಂದೇಡ್ -ಕೆಎಸ್‌ಆರ್ ಬೆಂಗಳೂರು (೧೬೫೯೪) ಫೆ. ೨೫ರಿಂದ ೨೭ರವರೆಗೆ. ಈ ರೈಲಿಗೆ ೧ ಸಾಮಾನ್ಯ ದ್ವಿತೀಯ ದರ್ಜೆ ಅಂತ್ಯೋದಯ ಬೋಗಿ ಜೋಡಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.