ರಾಮಜನ್ಮಭೂಮಿ ಹೋರಾಟಗಾರನ ಬಂಧನ: ಹಿಂದೂ ಸಂಘಟನೆಗಳ ಆಕ್ರೋಶ, ಠಾಣೆಗೆ ಮುತ್ತಿಗೆ
09:40 PM Jan 01, 2024 IST
|
Samyukta Karnataka
ಹುಬ್ಬಳ್ಳಿ: ೩೧ ವರ್ಷದ ಬಳಿಕ ರಾಮಜನ್ಮಭೂಮಿ ಹೋರಾಟದ ಪ್ರಕರಣದ ೩ನೇ ಆರೋಪಿ ಎನ್ನಲಾದ ನಗರದ ನಾರಾಯಣ ಸೋಫಾ ಗಟ್ಟಿಯ ಶ್ರೀಕಾಂತ್ ಪೂಜಾರಿ ಅವರನ್ನು ಪೊಲೀಸರು ಬಂಧಿಸಿರುವುದು ಹಿಂದೂ ಸಂಘಟನೆಗಳ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಶ್ರೀಕಾಂತ್ ಅವರನ್ನು ಬಂಧಿಸಿದ ಶಹರ ಠಾಣೆಗೆ ಹಿಂದೂ ಸಂಘಟನೆ ಮುಖಂಡ ಸಂಜೀವ ಬಡಾಸ್ಕರ್ ನೇತೃತ್ವದಲ್ಲಿ ಕಾರ್ಯಕರ್ತರು ಮುತ್ತಿಗೆ ಹಾಕಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಮಹೇಶ ಟೆಂಗಿನಕಾಯಿ ಅವರು ಶ್ರೀಕಾಂತ್ ಅವರ ಬಂಧನಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. ಬಂಧನ ಸುದ್ದಿ ತಿಳಿಯುತ್ತಿದ್ದಂತೆಯೇ ನಾರಾಯಣ ಸೋಫಾ ಬಡಾವಣೆಯಲ್ಲಿನ ಶ್ರೀಕಾಂತ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ಹೇಳಿದರು. ಯಾವುದೇ ರೀತಿ ಧೃತಿಗೆಡಬಾರದು. ನಿಮ್ಮ ಕುಟುಂಬದೊಂದಿಗೆ ನಾವೆಲ್ಲ ಇದ್ದೇವೆ. ಇದು ಉದ್ದೇಶಪೂರ್ವಕ ಬಂಧನವಾಗಿದೆ. ಅವರ ಬಿಡುಗಡೆಗೆ ಹೋರಾಟ ಮಾಡುತ್ತೇವೆ ಎಂದು ಸಮಾಧಾನ ಮಾಡಿದರು.
Next Article