ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ರೂಲ್ಸ್‌ಗಳು ಲ್ಯಾಪ್ಸ್ ಆಗಬಾರದು

12:18 PM Jan 20, 2025 IST | Samyukta Karnataka

ATMಗೆ ಹಣ ತುಂಬುವಾಗ ಕಡ್ಡಾಯವಾಗಿ ಆರ್ಮ್ ಕಾರ್ಡ್ ಇರಬೇಕು

ಬೆಂಗಳೂರು: ದರೋಡೆ ಪ್ರಕರಣದ ಆರೋಪಿಗಳ ಬಗ್ಗೆ ಮಾಹಿತಿ ಕಲೆಗಳನ್ನು ಹಾಕಿದ್ದು, ಶೀಘ್ರವೇ ಆರೋಪಿಗಳ ಬಂಧನ ಮಾಡುವದಾಗಿ ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿರುವ ಅವರು ಮಂಗಳೂರು ಕೋಟೆಕಾರ್ ಬ್ಯಾಂಕ್ ದರೋಡೆ ಮತ್ತು ಬೀದರ್​ನಲ್ಲಿ ಎಟಿಎಂಗೆ ಕ್ಯಾಶ್ ತುಂಬುವ ವ್ಯಾನ್ ದರೋಡೆ ಮತ್ತು ಇಬ್ಬರು ಗಾರ್ಡ್​ಗಳ ಕೊಲೆಗೆ ಸಂಬಂಧಿಸಿದಂತೆ ಖಚಿತವಾದ ಮಾಹಿತಿ ಲಭ್ಯವಾಗಿದೆ, ಅದನ್ನು ರಿವಿಲ್‌ ಮಾಡಲು ಆಗುವುದಿಲ್ಲ ಆದರೆ ಆದಷ್ಟು ಬೇಗ ಅಪರಾಧಿಗಳನ್ನು ವಶಕ್ಕೆ ಪಡೆಯುತ್ತೇವೆ, ದರೋಡೆಕೋರರು ಬೇರೆ ರಾಜ್ಯದವರು ಎಂಬ ಪೂರ್ವಭಾವಿ ಮಾಹಿತಿ ಇದೆ, ಅಪರಾಧಿಗಳನ್ನು ಬಂಧಿಸಲು ಎರಡೂ ತಂಡಗಳ ಹಿಂದೆ 4-6 ಪೊಲೀಸ್ ತಂಡಗಳು ತೆರಳಿವೆ, ಇಲಾಖೆಯಿಂದ ಬ್ಯಾಂಕ್ ಮತ್ತು ATM ಗಳಿಗೆ ಯಾವ ರೀತಿ ಭದ್ರತೆ ಇರಬೇಕು ಅಂತ ರೂಲ್ಸ್ ಕೊಟ್ಡಿದ್ದೇವೆ. ಎಲ್ಲಾ ATM, ಬ್ಯಾಂಕ್ ಗಳಿಗೆ ಸೂಚನೆ ಹೋಗುತ್ತದೆ. ATMಗೆ ಹಣ ಹಾಕೋಕೆ ಬ್ಯಾಂಕ್ ನವರು ಕಾಂಟ್ರಾಕ್ಟ್ ಅವರಿಗೆ ಕೊಟ್ಟಿರುತ್ತಾರೆ. ATMಗೆ ಹಣ ತುಂಬುವಾಗ ಕಡ್ಡಾಯವಾಗಿ ಆರ್ಮ್ ಕಾರ್ಡ್ ಇರಬೇಕು ಅಂತ ನಿಯಮ ಈಗಾಗಲೇ ಇದೆ. ಬೀದರ್ ಘಟನೆ ಆದಾಗ ಆರ್ಮ್‌ ಗಾರ್ಡ್ ಇರಲಿಲ್ಲ. ಹೀಗಾಗಿ ಘಟನೆ ಆಗಿದೆ. ಮಂಗಳೂರು ಬ್ಯಾಂಕ್ ದರೋಡೆಯಾದಾಗಲು ಕೂಡಾ ಗಾರ್ಡ್ ಇರಲಿಲ್ಲ ಅಂತ ಮಾಹಿತಿ ಇದೆ. ಹೀಗಾಗಿ ಇಲಾಖೆ ಕೊಟ್ಟ ರೂಲ್ಸ್‌ಗಳು ಲ್ಯಾಪ್ಸ್ ಆಗಬಾರದು. ಇಂತಹ ಅವಕಾಶಗಳಿಗೆ ಅಕ್ರಮ ಮಾಡೋರು ಕಾಯುತ್ತಿರುತ್ತಾರೆ. ಹೀಗಾಗಿ ಬ್ಯಾಂಕ್‌ನವರು ನಮ್ಮ ಜೊತೆ ಸಹಕಾರ ಕೊಡಬೇಕು ಎಂದು ತಿಳಿಸಿದರು.

Tags :
#ಜಿಪರಮೇಶ್ವರ#ದರೋಡೆ#ಬಂಧನ#ಬ್ಯಾಂಕ್‌
Next Article