ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಲಂಕೆಯಲ್ಲಿ ಯುದ್ಧ ಆರಂಭ….

02:00 AM Mar 14, 2024 IST | Samyukta Karnataka

ಲಂಕಾ ಪಟ್ಟಣವನ್ನು ಪ್ರವೇಶಿಸಿದ ಕೂಡಲೇ ಶ್ರೀರಾಮಚಂದ್ರನು ಅಂಗದನನ್ನು ರಾಯಭಾರಿಯನ್ನಾಗಿ ರಾವಣನ ಬಳಿ ಕಳುಹಿಸಿದನು. ಆದರೆ ಮದೋನ್ಮತ್ತನಾದ ರಾವಣನು ಅಂಗದನ ಮಾತಿಗೆ ಬೆಲೆ ಕೊಡದೆ ಯುದ್ಧಕ್ಕೆ ಸಿದ್ಧನಾದನು. ಇದನ್ನು ತಿಳಿದ ಶ್ರೀರಾಮಚಂದ್ರನು ಲಂಕೆಯ ನಾಲ್ಕು ದ್ವಾರಗಳಿಗೆ ಕಪಿಸೈನ್ಯಗಳನ್ನು ಕಳುಹಿಸಿ ಮುತ್ತಿಗೆ ಹಾಕಿಸಿದನು.
ರಾವಣನು ಪಶ್ಚಿಮ ದಿಕ್ಕಿಗೆ ಇಂದ್ರಜಿತ್ತನ್ನೂ ಪೂರ್ವದಿಕ್ಕಿಗೆ ಪ್ರಹಸ್ತನನ್ನೂ ದಕ್ಷಿಣದಿಕ್ಕಿಗೆ ವಜ್ರದಂಷ್ಟ್ರನನ್ನು ಯುದ್ಧಮಾಡಲು ಕಳುಹಿಸಿ, ಉತ್ತರ ದಿಕ್ಕಿಗೆ ತಾನೇ ಹೊರಟನು. ಶ್ರೀರಾಮಚಂದ್ರನು ಇಂದ್ರಜಿತ್ತಿನ ಜೊತೆಗೆ ಯುದ್ಧಮಾಡಲು ಹನುಮಂತನನ್ನು ಕಳುಹಿಸಿದನು. ಪ್ರಹಸ್ತನನ್ನು ಎದುರಿಸಲು ನೀಲನನ್ನು ವಜ್ರದಂಷ್ಟನನ್ನು ಎದುರಿಸಲು ಅಂಗದನನ್ನು ನಿಯೋಜನೆ ಮಾಡಿದನು.
ರಾವಣನ ಎದುರು ಯುದ್ಧಮಾಡಲು ಸುಗ್ರೀವನ ಜೊತೆ ತಾನೇ ಹೊರಟನು. ನೀಲ ಹಾಗೂ ವಿಭೀಷಣರು ಪ್ರಹಸ್ತನನ್ನು ಸಂಹಾರ ಮಾಡಿದರು. ಅಂಗದನು ವಜ್ರದಂಷ್ಟನನ್ನು ಬೀಳಿಸಿದನು.
ಶಿವ ವರದಿಂದ ಅವಧ್ಯರಾದ ಧೂಮ್ರನೇತ್ರ ಹಾಗೂ ಅಕಂಪನರೆಂಬ ರಾಕ್ಷಸರು ಹನುಮಂತನಿಂದ ಸತ್ತುಹೋದರು. ರಾತ್ರಿಯ ಕಾಲದಲ್ಲಿ ಕಪಿಗಳು ಪುನಃ ರಾಮನ ಅಪ್ಪಣೆಯಂತೆ ಲಂಕೆಯನ್ನು ಸುಟ್ಟುಹಾಕಿದರು. ಮರುದಿವಸ ಕುಂಭಕರ್ಣನ ಮಕ್ಕಳಾದ ನಿಕುಂಭ ಹಾಗೂ ಕುಂಭ ಎಂಬೀರ್ವರು ಘೋರ ಯುದ್ಧವನ್ನು ಮಾಡಲು ಪ್ರಾರಂಭ ಮಾಡಿದರು. ಆದರೆ, ಸುಗ್ರೀವನು ಆ ಕುಂಭನನ್ನು ಸಂಹಾರ ಮಾಡಿದನು. ಇದರಿಂದ ಸಿಟ್ಟುಗೊಂಡ ನಿಕುಂಭನು ಹನುಮಂತನನ್ನು ಎತ್ತಿ ಹೆಗಲ ಮೇಲಿಟ್ಟುಕೊಂಡು ಓಡಿಹೋಗಲು ಪ್ರಾರಂಭ ಮಾಡಿದನು.
ಆಗ ಹನುಮಂತನು ನಿಕುಂಭನ ಕತ್ತನ್ನು ಹಿಡಿದು ಜೋರಾಗಿ ಒತ್ತಿದರೆ ನೆಲದಲ್ಲಿ ಬಿದ್ದು ಸತ್ತೇಹೋದನು. ಆಗ ಶ್ರೀರಾಮಚಂದ್ರನು ಬ್ರಹ್ಮವರದಿಂದ ಅವಧ್ಯರಾದ ಸುಪ್ತಘ್ನ, ಯಜ್ಞಕೋಪ, ಶಕುನಿ, ದೇವತಾಪನಿ, ವಿದ್ಯುಜ್ಜಿಹ್ವ, ಪ್ರಮಾಥಿ, ಶುಕ, ಸಾರಣ ಎಂಬ ರಾಕ್ಷಸರನ್ನು ತನ್ನ ಬಾಣದಿಂದ ಕೊಂದನು.

Next Article