ಲಾರಿ-ಕಾರು ಡಿಕ್ಕಿ: ದಂಪತಿ ಸಾವು
09:35 PM Dec 12, 2024 IST | Samyukta Karnataka
ಕಲಬುರಗಿ: ಕಾರು ಮತ್ತು ಲಾರಿಯ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಕಾರಿನಲ್ಲಿದ್ದ ದಂಪತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಹೊರವಲಯದ ಹುಮ್ನಾಬಾದ್ ಮುಖ್ಯ ರಸ್ತೆಯ ಸ್ವಾಮಿ ಸಮರ್ಥ ದೇವಸ್ಥಾನದ ಸಮೀಪ ಗುರುವಾರ ಸಂಜೆ ನಡೆದಿದೆ.
ಮೃತ ದಂಪತಿ ನಗರದ ರೆಹಮತ್ ನಗರದ ನಿವಾಸಿಯಾಗಿರುವ ಮುಹಮದ್ ಶೇಕಿಬ್ ಜಿಲ್ಹಾನಿ (೩೨) ಮತ್ತು ಆತನ ಪತ್ನಿ ಶೇರಿನ್ ಶೆಕಿಬ್ (೨೮) ಎಂದು ಗುರುತಿಸಲಾಗಿದೆ.
ಹುಮನಾಬಾದ್ ಕಡೆಯಿಂದ ಕಲಬುರಗಿಗೆ ಬರುತ್ತಿದ್ದ ಕಾರು, ಕಲಬುರಗಿಯಿಂದ ಹುಮನಾಬಾದ್ ಕಡೆಗೆ ತೆರಳುತ್ತಿದ್ದ ಲಾರಿ ನಡುವೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಸಂಚಾರಿ ಠಾಣೆ-೨ರಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಆತನ ಶೋಧನ ಕಾರ್ಯ ಮುಂದುವರಿದಿದೆ.