ಲಿಂಗಪೂಜೆ ಎಂದರೆ ಅರಿವಿನ ದಾರಿ
ವೀರಶೈವ ಸಿದ್ಧಾಂತದಲ್ಲಿ ಲಿಂಗಪೂಜೆಗೆ ಪ್ರಮುಖ ಸ್ಥಾನವನ್ನು ನೀಡಲಾಗಿದೆ. ಲಿಂಗಪೂಜೆ ಎಂದರೆ ಗುರು ತೋರಿಸುವ ಅರಿವಿನ ದಾರಿ. ಲಿಂಗಪೂಜೆಯನ್ನು ಸದಾ ಮಾಡುತ್ತಿರಬೇಕು ಅದು ಹೇಗೆ ಇರಬೇಕು ಎಂಬುದನ್ನು ಅಕ್ಕ ಮಹಾದೇವಿಯಕ್ಕನವರು ಮಾರ್ಮಿಕವಾಗಿ ವಚನಿಸಿದ್ದಾರೆ.
ಸಜ್ಜನೆಯಾಗಿ ಮಜ್ಜನಕ್ಕರೆನೆ
ಶಾಂತಳಾಗಿ ಪೂಜೆ ಮಾಡುವೆ
ಸಮಯರತೆಯಿಂದ ನಿಮ್ಮ ಹಾಡುವೆ
ಚನ್ನಮಲ್ಲಿಕಾರ್ಜುನಯ್ಯ ನಿಮ್ಮನಗಲದ ಪೂಜೆ
ಅನುವಾಯಿತ್ತೆನಗೆ
ಲಿಂಗಪೂಜೆಯೆಂಬುದು ಅರಿವಿನ ಸಾಧನ. ಮಾನವನಿಗೆ ಮರೆವು ಸಹಜವಾದುದು. ಮರೆವು ಎಂದರೆ ಅಜ್ಞಾನ. ಅಜ್ಞಾನವೇ ಮಾಯಾ ಮರೆವನ್ನು ಕಳೆಯಲೆಂದು ಸದ್ಗುರುನಾಥನು ಇಷ್ಟಲಿಂಗವೆಂಬ ಕುರುಹನ್ನು ಕೊಡುತ್ತಾನೆ. ಇಷ್ಟಲಿಂಗವು ಅರಿವಿನ ಕುರುಹು ಅದು ಬಾಹ್ಯವಸ್ತುವಲಿ ಶಿರಧರ ಮನೆಯ ಚಿತ್ರಕಲೆಯನ್ನು ಮೂತ್ರರೂಪಗೊಳಿಸದ್ದೇ ಇಷ್ಟಲಿಂಗ. ಇಂಥ ಲಿಂಗವನ್ನು ಸಜ್ಜನನಾಗಿ ಪೂಜೆಸಬೇಕು. ಪೂಜಿಸಲು ಜಲಬೇಕು ಅಭಿಷೇಕ ಮಾಡಲು ಕೆರೆ ಭಾವಿಯ ನೀರು ಮುಖ್ಯವಲ್ಲ. ನಿಷ್ಕಲ್ಮಷ ಭಾವನೆಯೇ ಸಜ್ಜನಿಕೆ. ಯಾರೋಬ್ಬರಿಗೆ ಕೇಡು ಮಾಡದ ಭಾವನೆಯಿಂದರಬೇಕು. ಶಾಂತ ಮನಸ್ಸಿನಿಂದ ಪೂಜೆ ಮಾಡಬೇಕು. ಮನಸ್ಸಿನ ವ್ಯಗ್ರತೆ ಎಂದಿಗೂ ಸಲ್ಲದು. ಲಿಂಗಪೂಜೆ ಮಾಡುವ ಭಕ್ತನ ಮನಸ್ಸು ಶಾಂತವಾಗಿರಬೇಕು. ಇಷ್ಟಲಿಂಗವನ್ನು ತನ್ನ ಸುಜ್ಞಾನದ ಕುರುಹಾಗಿರಬೇಕು. ಅಲ್ಲಿ ಸಮರತಿ ಅಳವಡಿಸಬೇಕು. ಆಧ್ಯಾತ್ಮ ಭಾವನದಿಂದ ಲಿಂಗದೇವನನ್ನು ಹಾಡಬೇಕು. ಲಿಂಗವು ತನ್ನ ಅಂತರಂಗದ ಕುರುಹೆಂದು ಎಂದಿಗೂ ತಿಳಿಯಬೇಕು. ಯಾವ ಕಾಲಕ್ಕೂ ಲಿಂಗದಿಂದ ಅಗಲಿರಬಾರದು. ಅಂದರೆ ಆತ್ಮದ ಅರಿವು ಮತ್ತು ತನ್ಮೂಲಕ ಶಿವನ ಆರಾಧನೆಯಿಂದ ವಿಮುಖವಾಗಬಾರದು. ಅನೂಚಾನವಾಗಿ ಲಿಂಗದ ಅನುಸಂಧಾನಿಸಿಕೊಂಡಿರಬೇಕು. ಇಷ್ಟಲಿಂಗವನ್ನು ಒಂದು ಕೆಲಸದಂತೆ ಪೂಜಿಸಿದರೆ ಸಾಲದು ಪ್ರಾಣಲಿಂಗದ ಅನುಸಂಧಾನ ನಡಯುತ್ತಿರಬೇಕು. ಭಯ ಭಕ್ತಿಯಿಂದ ಪೂಜೆ ನಡೆಯಬೇಕು ಶುದ್ಧ ಸಾತ್ವಿಕ ಭಾವದಿಂದ ಪೂಜೆಯಿಂದ ಶಾಂತ ಮನಸ್ಸು ಸಾಧ್ಯವಾಗುವದು.