ಲೋನ್ ಸೆಕ್ಯೂರಿಟಿ ನೀಡದೆ ಪಡೆದಿದ್ದು ಹೇಗೆ ಹೇಳಲಿ ?
25 ಕೋಟಿ ಸಾಲ ಮರುಪಾವತಿ ಮಾಡದೆ ಇದ್ದಕ್ಕೆ IMA ಇಂದ ಯಾವುದೇ ಕಾನೂನು ಕ್ರಮ ಕೂಡ ಜರುಗಿಸಲಿಲ್ಲ,
ಬೆಂಗಳೂರು: IMA ಹಗರಣದಲ್ಲಿ ಭಾಗಿಯಾಗಿರುವ ಸಚಿವರನ್ನು ಕೂಡಲೇ ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದು ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು IMA ಸಂಸ್ಥೆಯಿಂದ ಸಚಿವ ಜಮೀರ್ ಅಹಮ್ಮದ್ ಅವರು ನಗದು (ಕ್ಯಾಶ್) ಮೂಲಕ ಸುಮಾರು 29.38 ಕೋಟಿ ಸ್ವೀಕರಿಸಿದ್ದರು ಹಾಗೂ 25 ಕೋಟಿ ರೂ ಅನ್ನು ಸಾಲವಾಗಿ ಪಡೆದಿದ್ದರು. ಈ ಸಾಲವನ್ನು ಜಮೀರ್ ಹಿಂದುರಿಗಿಸಿರಲಿಲ್ಲ. 25 ಕೋಟಿ ಸಾಲ ಮರುಪಾವತಿ ಮಾಡದೆ ಇದ್ದಕ್ಕೆ IMA ಇಂದ ಯಾವುದೇ ಕಾನೂನು ಕ್ರಮ ಕೂಡ ಜರುಗಿಸಲಿಲ್ಲ, ಈ ಪ್ರಕರಣದ ತನಿಖೆಯ ಮೇಲೆ ತಡೆಯಾಜ್ಞೆ ನೀಡಬೇಕೆಂದು ಜಮೀರ್ ಸರ್ವೋಚ್ಚ ನ್ಯಾಯಾಲಯಕ್ಕೆ ಹಾಕಿದ್ದ ಅರ್ಜಿಯನ್ನು ತಿರಸ್ಕಾರಗೊಂಡಿತ್ತು, ಮುಸಲ್ಮಾನರ ಬಂಧು ಎಂದು ನಾಟಕವಾಡುತ್ತಿರುವ ಜಮೀರ್ ತನ್ನ ಪ್ರಭಾವ ಬಳಸಿ ಸುಮಾರು 31 ಕೋಟಿಯಷ್ಟು ಅಸುರಕ್ಷಿತ ಸಾಲ (unsecured loan) ಅನ್ನು IMA ಇಂದ ಪಡೆದಿದ್ದರು ಎಂದು ಗೊತ್ತಾಗಿದೆ. ಮುಸಲ್ಮಾನರ ಉದ್ಧಾರಕ್ಕೆ ತಾನು ಜನ್ಮ ತಾಳಿರೋದು ಎಂದು ತೋರಿಸಿಕೊಳ್ಳುವ ಜಮೀರ್ ಯಾವುದೇ ಕಾಗದಪತ್ರ, ಲೋನ್ ಸೆಕ್ಯೂರಿಟಿ ನೀಡದೆ ಪಡೆದಿದ್ದು ಹೇಗೆ ಹೇಳಲಿ ? ಸಚಿವ ಜಮೀರ್ ಆದಾಯಕ್ಕೂ ಮೀರಿದ ಆಸ್ತಿಯನ್ನು ಆಗಿದೆ ಎಂದು ಲೋಕಾಯುಕ್ತ ಹೇಳಿತ್ತು. ಇದು ಯಾವ ಮಟ್ಟಕ್ಕೆ ಅಂದರೆ ತನ್ನ ಆದಾಯಕ್ಕೂ ಮೀರಿದ 2031% ರಷ್ಟು ಆಸ್ತಿ ಮಾಡಿಕೊಂಡಿದ್ದ ಜಮೀರ್ ಈಗ ಮುಸಲ್ಮಾನರ ಹಿತಾಸಕ್ತಿಗಳ ಬಗ್ಗೆ ಮಾತಾಡುತ್ತಿರುವುದು ಹಾಸ್ಯಾಸ್ಪದವಾಗಿದೆ, ಆದಾಯಕ್ಕೂ ಮೀರಿದ ಆಸ್ತಿಯನ್ನು ರುಜುವಾತುಗಳಿಸಲು ಲೋಕಾಯುಕ್ತ Source Information Report ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು, ಪ್ರಭಾವಿಗಳನ್ನು ಸರ್ಕಾರ ರಕ್ಷಿಸದೇ IMA ಹಗರಣದಲ್ಲಿ ಭಾಗಿಯಾಗಿರುವ ಸಚಿವರನ್ನು ಕೂಡಲೇ ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದಿದ್ದಾರೆ.