For the best experience, open
https://m.samyuktakarnataka.in
on your mobile browser.

ವಕ್ಫ್ ಕಾಯ್ದೆ ರದ್ದಾಗದಿದ್ದರೆ ಧರ್ಮಯುದ್ಧ

09:23 PM Nov 04, 2024 IST | Samyukta Karnataka
ವಕ್ಫ್ ಕಾಯ್ದೆ ರದ್ದಾಗದಿದ್ದರೆ ಧರ್ಮಯುದ್ಧ

ವಿಜಯಪುರ: ವಕ್ಫ್‌ ಕಾಯ್ದೆ ರದ್ದಾಗದಿದ್ದರೆ ಧರ್ಮ ಯುದ್ಧ ಆಗುವುದು ನಿಶ್ಚಿತ. ಧರ್ಮ ಯುದ್ಧಕ್ಕೆ ನಾನು ಸಂಪೂರ್ಣವಾಗಿ ತಯಾರಾಗಿದ್ದೇನೆ, ಶಿವನ ಕೈಯಲ್ಲಿ ಏನಿದೆ?, ಚಾಮುಂಡಿ ಕೈಯಲ್ಲಿ ಏನಿದೆ? ಅವುಗಳನ್ನು ಕೈಗೆ ತೆಗೆದುಕೊಳ್ಳಿ, ವಕ್ಫ್ ಕಾಯ್ದೆಯನ್ನು ದೇಶದಿಂದ ಕಿತ್ತೊಗೆಯುವವರೆಗೆ ಸುಮ್ಮನಿರುವುದಿಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗುಡುಗಿದರು.
ವಕ್ಫ್ ಕಾಯ್ದೆ ರದ್ದುಗೊಳಿಸಿ ರೈತರ ಹಿತರಕ್ಷಣೆ ಕಾಪಾಡುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಕರೆ ನೀಡಿದ್ದ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಕ್ಫ್ ಕಾಯ್ದೆ ಕೈಬಿಡದೇ ಇದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆ ಸೇರುವುದು ಗ್ಯಾರಂಟಿ ಎಂದರು. ಇಸ್ಲಾಂನಲ್ಲಿ ಸಹೋದರತೆ ಭಾವನೆ ಇಲ್ಲ. ಇತರೆ ಧರ್ಮದವರನ್ನು ಸೈತಾನ್ ಎಂದು ಕರೆಯುತ್ತಾರೆ, ನಮಗೆ ದೇಶ ಮೊದಲು ಆ ಬಳಿಕ ಧರ್ಮ, ಆನಂತರ ಪಕ್ಷ ಎನ್ನುತ್ತೇವೆ. ಆದರೆ, ಮುಸ್ಲಿಮರು ಧರ್ಮ ಮೊದಲು, ಆ ಮೇಲೆ ದೇಶ ಎನ್ನುತ್ತಾರೆ, ವಕ್ಫ್ ತೂಗುಗತ್ತಿ ಉಪಚುನಾವಣೆ ನಂತರ ಮತ್ತೆ ರೈತರ ಮೇಲೆ ಬರಲಿದೆ ಎಂದರು.
ಜೋಳ, ಕಾಳ ಕೊಡುವವರು ಹಿಂದುಗಳೇ ಹೊರತು ಸಾಬ್ರು ಅಲ್ಲ. ಹಿಂದೂ ಮಠಾಧೀಶರು ರೈತರ ಬೆಂಬಲಕ್ಕೆ ಬರಬೇಕು, ಲಿಂಗಾಯತರು, ಮುಸ್ಲಿಮರು ಸಮಾನರು ಎಂದು ಕೆಲ ಲಿಂಗಾಯತ ಸ್ವಾಮೀಜಿಗಳು ಹೇಳಿಕೆ ನೀಡುತ್ತಿರುವುದು ಖಂಡನೀಯ. ಒಬ್ಬ ಸ್ವಾಮೀಜಿ ಮಸೀದಿ ಉದ್ಘಾಟನೆ ಮಾಡಿದರೆ ಇಡೀ ಊರು ಇಸ್ಲಾಮೀಕರಣ ಮಾಡಿದಂತೆ. ಕೆಲ ಸ್ವಾಮೀಜಿಗಳು ಕುರಾನ್ ಪಠಿಸುತ್ತಾರೆ. ಅದರ ಬದಲು ಭಗವದ್ಗೀತೆ ಪಠಿಸಿ ಎಂದು ಎಚ್ಚರಿಕೆ ನೀಡಿದರು.