ವಕ್ಫ್ ಬೋರ್ಡ್ ಜಮೀನು ವಶಪಡಿಸಿಕೊಳ್ಳಲು ಬಿಡುವುದಿಲ್ಲ
ಯಾದಗಿರಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ತಂಡ ಇಂದು ಯಾದಗಿರಿ ಜಿಲ್ಲೆಗೆ ಕಾಲಿರಿಸಿದೆ.
ಯಾದಗಿರಿ ಜಿಲ್ಲೆಯ ಕೊಂಗಂಡಿ ಗ್ರಾಮದ ವಕ್ಪ್ ಬಾಧಿತ ಜಮೀನುಗಳಿಗೆ ಇಂದು ವಕ್ಫ್ ವಿರುದ್ಧ ಜನಾಂದೋಲನ ಹೋರಾಟ ಪರಿಶೀಲನೆ ನಡೆಸಿದೆ, ರೈತರಿಂದ ಮನವಿಗಳನ್ನು ಪಡೆದು, ಸಮಸ್ಯೆ ಆಲಿಸುತ್ತಿರುವ ತಂಡವು. ರೈತರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಲು ಬೃಹತ್ ಹೋರಾಟಕ್ಕೆ ಸಿದ್ದ ಇರುವುದಾಗಿ ರೈತರು, ರೈತ ಮುಖಂಡರು ತಿಳಿಸಿದ್ದಾರೆ. ಇನ್ನು ಈ ಕುರಿತಂತೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಭಾರತೀಯ ಜನತಾ ಪಾರ್ಟಿಯ ನೇತೃತ್ವದ ವಕ್ಫ್ ಭೂಕಬಳಿಕೆ ವಿರೋಧಿ ಜನಜಾಗೃತಿ ಹೋರಾಟದ ಅಂಗವಾಗಿ, 3 ನೇ ದಿನವಾದ ಇಂದು ಯಾದಗಿರಿ ಜಿಲ್ಲೆಗೆ ಭೇಟಿ ನೀಡಿದ್ದು, ಇಲ್ಲಿನ ಶಹಪುರ ತಾಲ್ಲೂಕಿನ ಕೊಂಗಂಡಿ ಗ್ರಾಮದ ವಕ್ಫ್ ಬಾಧಿತ ಕುಟುಂಬಗಳೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಲಾಯಿತು. ವಕ್ಫ್ ಬಾಧಿತ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದೇವೆ. ಇದು ಜಾಗ ರೈತರ ಜಾಗ. ಈ ಜಾಗವನ್ನು ಸರ್ಕಾರ ವಶಪಡಿಸಿಕೊಂಡು ಪರಿಹಾರ ನೀಡುವ ಸಂಧರ್ಭದಲ್ಲಿ ವಕ್ಫ್ ಬೋರ್ಡ್ ಮಧ್ಯ ಬಂದಿದೆ. ಇದರಿಂದ ರೈತರಿಗೆ ಸಮಸ್ಯೆ ಆಗಿದೆ. ಬೀದರ್, ಕಲ್ಬುರ್ಗಿ, ಯಾದಗಿರಿ ಎಲ್ಲೆಡೆ ನಾವು ಸುತ್ತಿ ಬಂದಿದ್ದೇವೆ. ಎಲ್ಲೆಡೆ ಸಮಸ್ಯೆ ಇದೇ ರೀತಿ ಇದೆ. ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಹಾಗೂ ಸದಸ್ಯರು ಈಗಾಗಲೇ ವಿಜಯಪುರಕ್ಕೆ ಭೇಟಿ ನೀಡಿ, ಸಮಸ್ಯೆಯನ್ನು ಆಲಿಸಿದ್ದಾರೆ. ವಕ್ಫ್ ಬೋರ್ಡ್ ಎಲ್ಲಾ ಆಸ್ತಿ ಕಬಳಿಸುತ್ತಿದೆ. ಜಮೀನು ವಶಪಡಿಸಿಕೊಳ್ಳಲು ಭಾರತೀಯ ಜನತಾ ಪಾರ್ಟಿ ಅವಕಾಶ ನೀಡುವುದಿಲ್ಲ ಎಂದು ತಿಳಿಸಲಾಯಿತು.
ಇದೇ ನವೆಂಬರ್ 30 ರಂದು ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ ಹಾಗೂ ಡಿಸೆಂಬರ್ 1 ರಂದು ಬೆಳಗಾವಿಯಲ್ಲಿ ವಕ್ಫ್ ಬಾದಿತರ ಸಮಾವೇಶ ಮಾಡಲಿದ್ದೇವೆ. ನಮ್ಮ ತಂಡ ದೆಹಲಿಗೆ ತೆರಳಿ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರಿಗೆ ಮನವಿ ನೀಡಲಿದ್ದೇವೆ ಎಂದು ತಿಳಿಸಿದರು. ಇದೇ ವೇಳೆ ರೈತರ ಸಮಸ್ಯೆ ಆಲಿಸಿ, ಹೊಲಕ್ಕೆ ಇಳಿದು ರೈತರ ಜಮೀನು ಪರಿಶೀಲನೆ ನಡೆಸಿದ ತಂಡ. ಕೊಂಗಂಡಿ ಗ್ರಾಮದ ರೈತರು ವಕ್ಫ್ ಜಮೀನಿನ ಸಾಧಕ ಬಾಧಕಗಳ ಬಗ್ಗೆ ಮಾಹಿತಿ ನೀಡಿಲಾಯಿತು. ಸರ್ವೆ ನಂಬರ್ 50ರ ಜಮೀನು ವಕ್ಫ್ ಆಸ್ತಿ ಎಂದು ಘೋಷಣೆ ಮಾಡಿದ್ದು ನಮ್ಮ ತಂಡದ ಗಮನಕ್ಕೆ ಬಂದಿತು. ಇದೇ ಸಂದರ್ಭದಲ್ಲಿ ರೈತರ ಜಮೀನು, ದೇವಸ್ಥಾನ, ಮಠ ಉಳಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರ ಕಾನೂನು ತರಲಿದ್ದು, ತಾವೆಲ್ಲರೂ ಅದನ್ನು ಬೆಂಬಲಿಸಬೇಕು ಎಂದು ಮನವಿ ಮಾಡಲಾಯಿತು. ರೈತ ಮುಖಂಡರು ಒಂದು ನಿರ್ದಿಷ್ಟ ದಿನಾಂಕ ನೀಡಿದರೆ ಅಂದು ಬೃಹತ್ ಹೋರಾಟ ಮಾಡುವ ಬಗ್ಗೆ ತಿಳಿಸಲಾಯಿತು ಎಂದಿದ್ದಾರೆ