ವಾಚ್ ಕಥೆ ಮುಗಿದು ಹೋದ ಅಧ್ಯಾಯ ಅಲ್ಲ…
ಬೆಂಗಳೂರು: ಹತಾಶರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿವೇಚನಾರಹಿತರಾಗಿ ಏನೇನೊ ಮಾತನಾಡುತ್ತಿದ್ದಾರೆ. ಕೇವಲ ತಮ್ಮ ಕುಟುಂಬದ ಹಗರಣವನ್ನು ತನಿಖೆಗೆ ಒಳಪಡಿಸಿದಕ್ಕೆ ಇಷ್ಟು ಹತಾಶರಾದರೆ ಹೇಗೆ? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ತಮ್ಮ ಪಕ್ಷದ ಅಧಿನಾಯಕರಾದ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಡೆ ಇರುವಾಗ ,ನಿಷ್ಠೆಯಿಂದ ಹಗಲೂ ರಾತ್ರಿ ದೇಶದ ಅಭಿವೃದ್ಧಿಗೆ, ಜನತೆಯ ಒಳಿತಿಗೆ ಶ್ರಮಿಸುತ್ತಿರುವ ಪ್ರಧಾನಿ ಮೋದಿಯವರನ್ನು ಪ್ರಶ್ನಿಸುವ ನೈತಿಕತೆ ನಿಮಗಿಲ್ಲ, ಸಿದ್ದಾರಾಮಯ್ಯನರೇ ನಿಮ್ಮ ಹುಬ್ಲೋಟ್ ವಾಚ್ ಕಥೆ ಮುಗಿದು ಹೋದ ಅಧ್ಯಾಯ ಅಲ್ಲ….ಅದರ ಸಲುವಾಗಿ ಸಾಕಷ್ಟು ವಿಚಾರಗಳು ಹೊರಬರಬೇಕಿದೆ. ಆರೋಪಗಳು ಸಾಬೀತಾಗಬಹುದು ಅಂತಲೇ ಲೋಕಾಯುಕ್ತದ ಅಧಿಕಾರವನ್ನು ಕಸಿದು, ಎಸಿಬಿ ಯನ್ನು ಸ್ಥಾಪಿಸಿದ್ದನ್ನು ಮರೆತಿರಾ?? ಅರ್ಕಾವತಿ ಲೇಔಟ್ ವಿಚಾರವಾಗಿ ನ್ಯಾಯಾಧೀಶ ಕೆಂಪಣ್ಣನವರು ನೀಡಿದ ವರದಿ ಆಧಾರವಾಗಿ ಯಾವ ಕ್ರಮ ಕೈಗೊಂಡಿದ್ದೀರಿ?? ರಾಜ್ಯದಲ್ಲಿ SIT ತಂಡದ ರಚನೆಯಂತೂ ಸಿದ್ದರಾಮಯ್ಯ ಇನ್ ಟ್ರಬಲ್ (Siddaramaiah In Trouble) ಅಂದರೆ ಸೂಕ್ತ ಎಂಬುದು ರಾಜ್ಯದ ಜನರ ಅಭಿಪ್ರಾಯ. ಇನ್ನು ವಾಲ್ಮೀಕಿ ಸಮುದಾಯದ ಅಭಿವೃದ್ದಿಗೆಂದು ಇದ್ದ ನೂರಾರು ಕೋಟಿ ಹಣವನ್ನು ಗುಳುಂ ಮಾಡಿ ಸಿಕ್ಕಿ ಬಿದ್ದಿರುವುದು ನಿಮ್ಮ ಪಕ್ಷದ ನಿಮ್ಮ ಸರ್ಕಾರದ ನಿಮ್ಮ ಆಪ್ತ ಮಂತ್ರಿಯೇ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. SC-ST ಸಮುದಾಯದ ಅಭಿವೃದ್ಧಿಯ ಹಣವನ್ನು ದುರ್ಬಳಕೆ ಮಾಡಿರುವುದು ರಾಜ್ಯದ ಜನ ಕ್ಷಮಿಸಲು ಸಾಧ್ಯವೇ?? ಹತಾಶೆಯಲ್ಲಿ ವಿನಾಕಾರಣ ಏನೇನೊ ಮಾತನಾಡಲು ಹೋಗಿ ನಗೆಪಾಟಲಿಗೆ ಗುರಿಯಾಗಬೇಡಿ. ಈಗಲಾದರೂ ಈ ಎಲ್ಲಾ ತಪ್ಪುಗಳ ನೈತಿಕ ಜವಾಬ್ದಾರಿ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾನೂನಿಗೆ ತಲೆ ಬಾಗಿ ತನಿಖೆಗೆ ಸಹಕರಿಸಿ ಎಂದಿದ್ದಾರೆ.