ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ವಿವೇಕಾನಂದ ಆಸ್ಪತ್ರೆಯಲ್ಲಿ ರೇಡಿಯಾಲಜಿ ಘಟಕ ಆರಂಭ

09:34 PM Jan 18, 2024 IST | Samyukta Karnataka

ಹುಬ್ಬಳ್ಳಿ: ದೇಶಪಾಂಡೆ ನಗರದ ವಿವೇಕಾನಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಈಗ ಇರುವ ಸೌಲಭ್ಯಗಳೊಂದಿಗೆ ನೂತನ ರೇಡಿಯಾಲಜಿ ಘಟಕವನ್ನು ಆರಂಭಿಸಿದರು.
ಗುರುವಾರ ಆಸ್ಪತ್ರೆ ಆಡಳಿತ ಮಂಡಳಿ ಉಪಾಧ್ಯಕ್ಷ ಕೇಶವ ದೇಸಾಯಿ ಅವರು ಚಾಲನೆ ನೀಡಿದರು. ಈ ಘಟಕವು ವಿಶೇಷ ಸೌಲಭ್ಯಗಳನ್ನು ಒಳಗೊಂಡಿದ್ದು, ೩೨ ಸ್ಲೈಸ್ ಸಿಟಿ ಸ್ಕ್ಯಾನ್, ಡಿಜಿಟಲ್ ಎಕ್ಸ್ ರೇ ಮತ್ತು ಅಲ್ಟ್ರಾಸೋನೋಗ್ರಫಿ ಸೇವೆಗಳನ್ನು ಒದಗಿಸಲಿದೆ.
ಈ ಘಟಕವು ಆಸ್ಪತ್ರೆಯಲ್ಲಿ ಒಂದು ಮೈಲುಗಲ್ಲಾಗಿದ್ದು, ಇದರಿಂದ ರೋಗಿಗಳಿಗೆ ತ್ವರಿತಗತಿಯಲ್ಲಿ ಉತ್ತಮ ಸೇವೆ, ಚಿಕಿತ್ಸೆ ಲಭಿಸಲಿದೆ. ಈ ರೇಡಿಯಾಲಜಿ ಘಟಕವು ಜ. ೨೬ರಿಂದ ಅಧಿಕೃತವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಘಟಕ ಉದ್ಘಾಟನೆಗೂ ಪೂರ್ವದಲ್ಲಿ ಆಸ್ಪತ್ರೆ ಆವರಣದಲ್ಲಿ ವಿಶೇಷ ಪೂಜೆ, ಹವನಾದಿಗಳನ್ನು ಮಾಡಲಾಯಿತು. ಆಸ್ಪತ್ರೆ ಆಡಳಿತ ಮಂಡಳಿ ಉಪಾಧ್ಯಕ್ಷ ಕೇಶವ ದೇಸಾಯಿ ದಂಪತಿ ಹೋಮ ನೆರವೇರಿಸಿದರು. ಆಸ್ಪತ್ರೆ ಆಡಳಿತ ಮಂಡಳಿ ಅಧ್ಯಕ್ಷ ಕಮಲ ಮೆಹ್ತಾ, ಉಪಾಧ್ಯಕ್ಷರಾದ ಕೇಶವ ದೇಸಾಯಿ, ದೀಪಕ ಶಾ, ಧರ್ಮದರ್ಶಿಗಳಾದ ಅಮೃತಲಾಲ್ ಜೈನ್, ಪ್ರದೀಪ ಸಂಘವಿ, ಡಾ. ಮುರಳೀಧರ ರಾವ್, ಕಾರ್ಯ ನಿರ್ವಹಣಾಧಿಕಾರಿ ಡಾ. ರಾಹುಲ, ವೈದ್ಯಕೀಯ ಅಧೀಕ್ಷಕಿ ಡಾ. ಮಂಜುಳಾ ಹುಗ್ಗಿ, ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.

Next Article