ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ವಿಶ್ವದಾಖಲೆ ನಿರ್ಮಿಸಿದ ಅಯೋಧ್ಯೆಯ ಭವ್ಯ - ದಿವ್ಯ ದೀಪೋತ್ಸವ !

11:20 AM Oct 31, 2024 IST | Samyukta Karnataka

ಅಯೋಧ್ಯೆ: ಶ್ರೀರಾಮಲಲ್ಲಾ ಪ್ರತಿಷ್ಠಾಪನೆ ಬಳಿಕ ಆಚರಿಸಲಾಗುತ್ತಿರುವ ಮೊದಲ ದೀಪಾವಳಿಯಂದು ಸರಯೂ ನದಿ ತೀರದಲ್ಲಿ ಸುಮಾರು 1,121 ಜನರು ಆರತಿ ಬೆಳಗುವ ಮತ್ತು 25.12 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಅಯೋಧ್ಯೆಯ ದೀಪೋತ್ಸವ ಗಿನ್ನಿಸ್‌ ದಾಖಲೆ ನಿರ್ಮಿಸಿದೆ. ಬುಧವಾರ ಆಯೋಜಿಸಿದ್ದ ಭವ್ಯ ದೀಪೋತ್ಸವ ಕಾರ್ಯಕ್ರಮದಲ್ಲಿ 25,12,585 ದೀಪಗಳನ್ನು ಬೆಳಗಿಸುವ ಮೂಲಕ ಹೊಸ ದಾಖಲೆ ನಿರ್ಮಿಸಲಾಗಿದೆ. ಇದಲ್ಲದೇ 1121 ಮಂದಿ ಒಟ್ಟಾಗಿ ಆರತಿಯಲ್ಲಿ ಪಾಲ್ಗೊಂಡು ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಘಾಟ್ ಸಂಖ್ಯೆ 1 ರಿಂದ 55 ರವರೆಗೆ ಬೆಳಗಿದ ದೀಪಗಳ ಸಂಖ್ಯೆಯನ್ನು ಡ್ರೋನ್ ಮೂಲಕ 28 ಲಕ್ಷಕ್ಕೂ ಹೆಚ್ಚು ಎಂದು ಎಣಿಸಲಾಗಿದೆ. ಇದಾದ ಬಳಿಕ ಗಿನ್ನೆಸ್ ಬುಕ್ ಮೂಲಕ ವಿಶ್ವ ದಾಖಲೆ ಪ್ರಮಾಣ ಪತ್ರವನ್ನು ಯೋಗಿ ಆದಿತ್ಯನಾಥ್ ಅವರಿಗೆ ಹಸ್ತಾಂತರಿಸಲಾಗಿದೆ.

Tags :
#Ayodhya#GyanGanga#RamMandir
Next Article