For the best experience, open
https://m.samyuktakarnataka.in
on your mobile browser.

ವೈದ್ಯರ ನಿರ್ಲಕ್ಷಕ್ಕೆ ಬಾಲಕ ಬಲಿ: ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ

08:13 PM May 08, 2024 IST | Samyukta Karnataka
ವೈದ್ಯರ ನಿರ್ಲಕ್ಷಕ್ಕೆ ಬಾಲಕ ಬಲಿ  ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ

ಹೊಸಪೇಟೆ: ವೈದ್ಯರ ನಿಲಕ್ಷ್ಯದಿಂದ ಬಾಲಕ ಸಾವನಪ್ಪಿದ್ದಾನೆ ಎಂದು ಆರೋಪಿಸಿ, ಪೋಷಕರು, ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ನಗರದಲ್ಲಿ ಬುಧವಾರ ನಡೆದಿದೆ.
ತಾಲ್ಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ತಾಳೆ ಬಸಾಪುರ ತಾಂಡಾದ ನಿವಾಸಿ ತುಳಜಾನಾಯ್ಕ್ ಹಾಗೂ ವಿಜಿಬಾಯಿ ದಂಪತಿಯ ಪುತ್ರ ಗೌತಮ್ (೯) ಎಂಬ ಬಾಲಕ ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದನು.
ಪಾಲಕರು ನಗರದ ಅಮರಾವತಿಯ ಖಾಸಗಿ ಆಸ್ಪತ್ರೆಗೆ ಮಂಗಳವಾರ ಮಧ್ಯಾನ್ಹ ಬಾಲಕನ್ನು ದಾಖಲು ಮಾಡಿದ್ದಾರೆ. ಬಾಲಕನನ್ನು ದಾಖಲಿಸಿಕೊಂಡು ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಬುಧವಾರ ಏಕಾಏಕಿ, ಬಾಲಕನ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಕೂಡಲೇ ಡಿಸ್ಚಾರ್ಜ್ ಮಾಡಿ, ಬಳ್ಳಾರಿ ವಿಮ್ಸ್ಗೆ ಕರೆದ್ಯೊಯ್ಯಲು ಸೂಚನೆ ನೀಡಿದ್ದಾರೆ.
ವೈದ್ಯರ ಸಲಹೆಯಂತೆ ಪಾಲಕರು ಅಂಬ್ಯುಲೆನ್ಸ್ನಲ್ಲಿ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಬಾಲಕ ಸಾವನಪ್ಪಿದ್ದಾನೆ. ಪುನಃ ನಗರದ ಆಸ್ಪತ್ರೆಗೆ ದಾವಿಸಿ ಬಂದ ಮೃತ ಬಾಲಕನ ಪಾಲಕರು, ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಭಾಸ್ಕರ್ ಭೇಟಿ ನೀಡಿ, ಪಾಲಕರಿಂದ ಮಾಹಿತಿ ಪಡೆದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಶವವನ್ನು ಅಂಬ್ಯುಲೆನ್ಸ್ನಲ್ಲಿ ಕೊಂಡ್ಯೊಯ್ಯಲು ಮನವೊಲಿಸಿದರೂ ಪಾಲಕರು ಪ್ರತಿಭಟನೆ ಮುಂದುವರಿಸಿದರು.