For the best experience, open
https://m.samyuktakarnataka.in
on your mobile browser.

ಆಸ್ತಿಕರಿಗಿರುವ ಸುಖ ನಾಸ್ತಿಕರಿಗಿಲ್ಲ

04:30 AM Oct 30, 2024 IST | Samyukta Karnataka
ಆಸ್ತಿಕರಿಗಿರುವ ಸುಖ ನಾಸ್ತಿಕರಿಗಿಲ್ಲ

ದೇವರ ಮಹಿಮೆ ಕೇಳಿದರೆ ಸಜ್ಜನರಿಗೆ ಆನಂದವಾಗುತ್ತದೆ ಆದರೆ ದೇವನ ನಿಂದೆ ಕೇಳಿದರೆ ಮನಸ್ಸಿಗೆ ಕಸಿವಿಸಿಯಾಗುತ್ತದೆ. ಇಷ್ಟಾದರೂ ದುರ್ಜನರಿಗೆ ಆ ದೇವರ ಗುಣಗಳ ನಿಂದಿಸಲು ವೈರಾಗ್ಯವೇ ಬರುವುದಿಲ್ಲವಂತೆ…
ಪರಮಾತ್ಮ ಗುಣಗಳಿಂದ ಹೀನನಾಗಿದ್ದಾನೆ. ನಿರ್ಗುಣನಾಗಿದ್ದಾನೆ ಎಂದು ನಿರ್ಧರಿಸುವ ಪ್ರವೃತ್ತಿಯಿಂದ ದೈವಭಕ್ತರಲ್ಲದವರಿಗೆ ವೈರಾಗ್ಯ ಬರುವುದಿಲ್ಲ. ಹಾಗಾದರೆ ದೇವರನ್ನು ಚೆನ್ನಾಗಿ ತಿಳಿದುಕೊಂಡವನು ಯಾರು ಎಂದರೆ ಯಾರಿಗೂ ಅಸಾಧ್ಯದ ಮಾತು. ಆದರೆ ಸಾಕ್ಷಾತ್ಕಾರಿಸಿಕೊಂಡ ಅನೇಕ ಮಹಿಮಾನ್ವಿತರೂ ಇದ್ದಾರೆ. ಅವರು ದೇವ ನಿಂದೆಯನ್ನು ಸಹಿಸುವದಿಲ್ಲ.
ಒಬ್ಬರು ಹೀಗೆ ದೇವರನ್ನು ಬಹಳ ನಿಂದೆ ಮಾಡುತ್ತಾ ಇದ್ದರು. ಇನ್ನೊಬ್ಬ ಬಳಗದವರು ಭಗವದ್ಭಕ್ತರು. ಕೊನೆಯ ತನಕ ಅವರು ನಿಂದೆ ಮಾಡುತ್ತಿದ್ದರು. ಇವರು ಭಕ್ತಿಯನ್ನೇ ಮಾಡುತ್ತಿದ್ದರು. ಕೊನೆಗೊಮ್ಮೆ ಬಂದು ಸಾಯೋದಕ್ಕೆ ಹೊರಟಿದ್ದೇನೆ. ಇನ್ನೇನು ಸ್ವಲ್ಪ ಹೊತ್ತು ನನ್ನ ಬದುಕು ಬಹಳ ಅನಾರೋಗ್ಯವಾಗಿದೆ. ಈಗ ಸತ್ಯ ಹೇಳಿಬಿಡು, ದೇವರ ಮಹಿಮೆ ವೈಭವ ಅವನ ವೈಭವ ನೀನು ಸತ್ಯವೋ ನಾನು ತಿಳಿದಿರುವ ಸತ್ಯವೋ ಎಂದು ಕೇಳಿದರಂತೆ. ಈಗಲಾದರೂ ಸರಿಯಾದ ಚಿಂತನೆ ಮಾಡಿ ಸಾಯುತ್ತೇನೆ ಎಂದು ಹೇಳಿದರು.
ಆಗ ಭಕ್ತ ನೀನು ತಿಳಿದಿದ್ದೆ ಸರಿ ಎಂದು ಹೇಳಿದರು. ಏಕೆಂದರೆ ದೇವರು ಶಬ್ದಕ್ಕೆ ದೊರೆಯವಂಥವನು ಅಲ್ಲ; ಎಲ್ಲ ಇಂದ್ರಿಯಗಳಿಗೂ ಆತ ಪರಿಪೂರ್ಣವಾಗಿ ದಕ್ಕುವದಿಲ್ಲ. ಅನುಭವ ಪ್ರಾಮಾಣ್ಯ ಬೇಕೇ ಬೇಕು. ಆ ನಾಸ್ತಿಕನ ಯೋಗ್ಯತೆ ಸರಿ ಇರಲಿಲ್ಲ ಎಂದು ಹೇಳಿದರೂ ನಂಬುತ್ತಿರಲಿಲ್ಲ. ಹೇಳಿದ ಮೇಲೆ ನಂಬದೇ ಕೊನೆಗೂ ನಮ್ಮನ್ನು ಬಯ್ಯದೆ ಸಾಯಲಿ ಎಂದು ಭಗವದ್ಭಕ್ತರು ನಿಶ್ಚಯಿಸಿ ಮೌನವಹಿಸಿದರು. ಕಾರಣ ಆಸ್ತಿಕರಿಗಿರುವ ಸುಖ ನಾಸ್ತಿಕರಿಗಿಲ್ಲ. ಅಂಥವರು ದೇವರನ್ನು ನಂಬದೇ ಇರುವಂತೆಯೂ ದೇವ ಅವರ ಪ್ರಾರಬ್ಧ ಕರ್ಮದಂತೆ ಹಾಗೇಯೇ ಸ್ವಭಾವ ಹಾಕಿರುತ್ತಾನೆ. ಹೀಗಾಗಿ ಆ ಜನ್ಮದಲ್ಲಂತೂ ಅವರು ಬದಲಾಗುದೇ ಇಲ್ಲ.
ಬ್ರಹ್ಮದೇವರು ಬ್ರಹ್ಮ ಪದವಿಯನ್ನು ಹೊಂದಿದರು. ಜೀವೋತ್ತಮರಾಗಿ ಕುಳಿತಿದ್ದಾರೆ ವಾಯುದೇವರು ಮತ್ತು ಬ್ರಹ್ಮದೇವರು. ಅದು ಭಗವಂತನ ಗುಣಾನುವಾದ ಮಾಡಿದ್ದರ ಮಹಿಮೆಯೇ. ನಾಲ್ಕು ಮುಖಗಳಿಂದ ನಿರಂತರವಾಗಿ ಪರಮಾತ್ಮನ ಗುಣಗಳನ್ನು ಅನುವಾದ ಮಾಡುತ್ತಾರೆ ನಾಲ್ಕು ವೇದಗಳನ್ನು ಪಠಣ ಮಾಡುತ್ತಾರೆ ಮತ್ತು ಉಪದೇಶ ಮಾಡುತ್ತಾರೆ. ಆ ಬ್ರಹ್ಮದೇವರು ಅದರ ಮಹಿಮೆ ಅವರು ಹೀಗೆ ಇಂಥವರು ಇಂತಹ ಸ್ಥಾನದಲ್ಲಿ ಕುಳಿತಿದ್ದಾರೆ. ಭಗವಂತನ ರೂಪ ಕಾಣುತ್ತ ಪಾದಸ್ಪರ್ಶ ಮಾಡುತ್ತ ಆತನ ಮಹಿಮೆಯನ್ನು ವರ್ಣಿಸುತ್ತಲಿದ್ದಾರೆ. ಕಾರಣ ಭಗವಂತನೇ ಹಾಗೆ ಆತನನ್ನು ಸಾಕ್ಷಾತ್ಕರಿಸಿಕೊಂಡವರಲ್ಲಿ ಆತನ ಬಗ್ಗೆ ವಿರಕ್ತಿ ಮೂಡುವದಾದರೂ ಹೇಗೆ?