For the best experience, open
https://m.samyuktakarnataka.in
on your mobile browser.

ಕರ್ಣ ಮಧುರ, ಮುಕ್ತಿಗೆ ಸೋಪಾನ ಶ್ರೀಕೃಷ್ಣ ಕಥೆ

04:25 AM May 15, 2024 IST | Samyukta Karnataka
ಕರ್ಣ ಮಧುರ  ಮುಕ್ತಿಗೆ ಸೋಪಾನ ಶ್ರೀಕೃಷ್ಣ ಕಥೆ
PRATHAPPHOTOS.COM

ಶ್ರೀಕೃಷ್ಣ ಪರಮಾತ್ಮ ಅವತಾರ ಮಾಡಿ ತೋರಿಸಿದ ಅನೇಕ ಲೀಲೆಗಳನ್ನು ಶ್ರವಣ ಮಾಡಲು ಇಷ್ಟೊಂದು ಉತ್ಸುಕನಾಗಿರುವ ಕಾರಣವೇನು..?
ಕಾರಣ ಅದು ಕರ್ಣ ಮಧುರ, ಜೀವನ್ಮುಕ್ತಿಗೆ ಸೋಪಾನ.
ಅದಕ್ಕೆ ಪರೀಕ್ಷಿತ ಮಹಾರಾಜರು ಈ ಬಗ್ಗೆ ಶ್ರೀಕೃಷ್ಣನ ಕತೆಯನ್ನು ಕೇಳಲು ಉತ್ಸುಕರಾಗಿದ್ದು, ಅದು ಯಾಕೆ ಎಂಬ ಪ್ರಶ್ನೆಗೆ ಉತ್ತರ ನೀಡುತ್ತಲೇ `ದೇವರ ಉಪಕಾರ ನಮ್ಮ ತಂದೆಗೆ ನನಗೆ ತಾತಂದಿರಿಗೆ ಇಡೀ ಜಗತ್ತಿನ ಪ್ರತಿಯೊಬ್ಬ ಜೀವ ಜಂತುವಿಗೆ ಇರುವುದರಿಂದ ಇಂತಹ ಪರಮಾತ್ಮನ ಕಥೆಯನ್ನು ಕೇಳದೆ ಇನ್ನು ಯಾವ ಯಾರ ಕಥೆಯನ್ನು ನಾನು ಕೇಳಬೇಕು ಎನ್ನುತ್ತಾರೆ.
ಕೌರವರ ಸೈನ್ಯವೆಂದರೆ ಅದೊಂದು ದೊಡ್ಡ ಸಮುದ್ರ ಇದ್ದಂತೆ. ಅದೊಂದು ಸಣ್ಣದಾದ ಸಾಮಾನ್ಯ ಸರೋವರವಲ್ಲ ಈಜಿ ಬಿಟ್ಟು ಹೋಗಲು.. ೧೧ ಅಕ್ಷೋಹಿಣಿ ಸೈನ್ಯವುಳ್ಳ ದೊಡ್ಡ ಸಮುದ್ರ. ಅಲ್ಲಿರುವಂತಹ ಒಬ್ಬ ವ್ಯಕ್ತಿಗಳು ಎಂಥವರು ಇದ್ದಾರೆ ಅನ್ನೋದು ಮುಖ್ಯ. ಅವರೆಲ್ಲ ಸಾಮಾನ್ಯ ಶಕ್ತಿವಂತರಾಗಿದ್ದರೆ ಅವರನ್ನು ಸರಳವಾಗಿ ಎದುರಿಸಬಹುದಿತ್ತು. ಆದರೆ ದೇವವ್ರತ ಆದಿಯಾಗಿ ದೊಡ್ಡ ದೊಡ್ಡ ತಿಮಿಂಗಲಗಳು ದೊಡ್ಡ ದೊಡ್ಡ ಗಾತ್ರದ ಹಡಗುಗಳನ್ನು ಸಣ್ಣ ಸಣ್ಣ ಮೀನುಗಳನ್ನೇ ನುಂಗುವಂತಹ ತಿಮಿಂಗಿಲಗಳಿಗೆ ಹೋಲಿಸಿದ್ದಾರೆ. ಇಂತಹ ಸಾಗರದಲ್ಲಿ ಕೇವಲ ಬಹಳ ದೂರ ಈಸಬೇಕಾಗುತ್ತದೆ ಅಲ್ಲಿ ಜಲಚರಗಳ ಭಯವೂ ಇರುತ್ತದೆ. ಹಾಗೆಯೇ ಈ ಕೌರವರ ಸರೋವರವನ್ನು ದಾಟುವುದು ಬಹಳೇ ಕಷ್ಟ ಅಂತಹ ಸರೋವರವನ್ನು ದಾಟಿ ಗೆದ್ದು ಬರುವ ಅಸಾಧ್ಯ ಮಾತನ್ನು ಅತ್ಯಂತ ಸುಸಾಧ್ಯವಾಗಿ ಆಗಿತ್ತು ಅಂತವರಿಗೆ ಶ್ರೀಕೃಷ್ಣದೇವರ ಅನುಗ್ರಹ ಆಗಿತ್ತು. ಜೀವೋತ್ತಮರಾದ ಭೀಮಸೇನ ದೇವರು ಸಂಪೂರ್ಣವಾದ ಬ್ರಹ್ಮಾಂಡವನ್ನು ತಟ್ಟಿ ಎರಡು ಹೊಳನ್ನಾಗಿ ಮಾಡುವ ಶಕ್ತಿಯನ್ನು ಹೊಂದಿರುವರು. ಇಡೀ ಬ್ರಹ್ಮಾಂಡವನ್ನು ಕೂರ್ಮರೂಪದಲ್ಲಿ ತಮ್ಮ ಪುಚ್ಛದ ಮೇಲೆ ಧರಿಸಿದ ವಾಯುದೇವರು. ಹತ್ತು ಸಾವಿರ ಆನೆಯ ಬಲ ಭೀಮದೇವರ ಒಂದೊಂದು ತೋಳನಲ್ಲಿದೆ ಎಂದು ಹೇಳುತ್ತಾರೆ.
ಅದು ಕೇವಲ ಉದಾಹರಣೆಗೆ ಹೇಳಿದ್ದು. ನೀನು ನಿನ್ನ ಬಲ ಇಷ್ಟು ಎಂದು ಹೇಳಿಕೊಳ್ಳುತ್ತೀಯ ಅದು ವಿನಯದಿಂದ ಹೇಳಿದ್ದು ಅದಕ್ಕಿಂತ ಸಾವಿರ ಪಟ್ಟು ಬಲ ಇದೆ ಎಂದು ನನಗೆ ಗೊತ್ತು ಎಂದು ಕೃಷ್ಣ ಭೀಮಸೇನ ದೇವರಿಗೆ ಹೇಳುತ್ತಾನೆ. ಹಾಗಿದ್ದರೂ ಕೃಷ್ಣನ ಅವಶ್ಯಕತೆ ಪಾಂಡವರಿಗೆ ಏಕೆ ಬಿತ್ತು. ತಮ್ಮ ಸಾಮರ್ಥ್ಯದಿಂದಲೇ ಅವರಿಗೆಲ್ಲ ಬಹುದಿತ್ತಲ್ಲ. ನಿಜ ಎಲ್ಲ ಪರಾಕ್ರಮವಿದ್ದರೂ ಒಂದು ಹುಲ್ಲುಕಡ್ಡಿ ಅಲುಗಾಡಬೇಕಾದರೂ ಭಗವಂತನ ಅನುಗ್ರಹಬೇಕು.
ಅಂತಹ ಸಕಲ ದೇವತೆಗಳಿಗೂ ಮಾನವರಿಗೂ ಸುಲಭವಾಗಿ ಸೋಲಿಸುವಂತಹ ಶಕ್ತಿಯನ್ನು ಹೊಂದಿರುವಂತಹ ಭೀಮಸೇನ ದೇವರಿಗೂ ಕೃಷ್ಣನ ಕೃಪೆಬೇಕು. ಅಂತಹ ಕೃಷ್ಣನ ಪರಮಾನು ಗ್ರಹ ನಮ್ಮ ಪಿತಾಮಹರಾದ ಪಾಂಡವರ ಮೇಲೆ ಇತ್ತು. ಅದಕ್ಕೆ ಅವರು ಗೆದ್ದರು ಎಂಬ ಸಂದೇಶವನ್ನು ಪಾಂಡವರು ತಮ್ಮ ಮಕ್ಕಳು ಮೊಮ್ಮೊಕ್ಕಳವರೆಗೂ ಮುಟ್ಟಿಸಿದ್ದಾರೆ.
ಇದಿಷ್ಟೇ ಅಲ್ಲ; ಕೃಷ್ಣನ ಕತೆ ಅಥವಾ ಭಾಗವತದ ಕತೆ ಎಂದರೆ ಅದು ಲೌಕಿಕ ಮತ್ತು ಅಧ್ಯಾತ್ಮಿಕವಾಗಿಯೂ ಹಸಿವು ತಣಿಸಿ ಜೀವನವನ್ನು ಸುಲಭಗೊಳಿಸುತ್ತದೆ ಅಲ್ಲದೇ ಮುಕ್ತಿಯಡೆಗೂ ಕರೆದೊಯ್ಯುವ ಶಕ್ತಿ ಆ ಭಗವಂತನ ಕತೆಯಲ್ಲಿದೆ. ಹೀಗಾಗಿ ಕೃಷ್ಣ ಕತೆಯನ್ನು ಶ್ರವಣ ಮಾಡಬೇಕು ಎಂದು ಪರೀಕ್ಷಿತ ಹೇಳುತ್ತಾನೆ.