ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ನಿಷ್ಠೆ ಮತ್ತು ಶ್ರದ್ಧೆ ಇದ್ದಲ್ಲಿ ಲಕ್ಷ್ಮೀ ಸನ್ನಿಧಾನ

03:00 AM Mar 06, 2024 IST | Samyukta Karnataka
PRATHAPPHOTOS.COM

ಒಬ್ಬರನ್ನೊಬ್ಬರು ಪ್ರೀತಿಯಿಂದ ಕಾಣುವ ವ್ಯಕ್ತಿಗಳು ಜೊತೆಗೆ ಧರ್ಮ ನ್ಯಾಯ ಜೊತೆಗೆ ಉದ್ಯೋಗಶೀಲತೆ ಉತ್ಸಾಹ ಕ್ರಿಯಾಶೀಲತೆ, ಸೃಜನಶೀಲತೆ ಇರುವ ವ್ಯಕ್ತಿಗಳು ಸಂಪತ್ತನ್ನು ಪಡೆಯುತ್ತಾರೆ.
ದೊಡ್ಡ ಸ್ಥಾನದಲ್ಲಿ ಬರುತ್ತಾರೆ ಅಧಿಕಾರಿಗಳಾಗುತ್ತಾರೆ. ಅಂಥವರನ್ನು ನೋಡಿ ನಾವು ಸಂತೋಷ ಪಡಬೇಕು. ನಾವು ಎಷ್ಟು ಇನ್ನೊಬ್ಬರ ಸಂಪತ್ತನ್ನು ನೋಡಿ ನಾವು ದುಃಖ ಪಡುತ್ತೇವೆ ಅಷ್ಟು ಸಂಪತ್ತನ್ನು ನಾವು ಕಳೆದುಕೊಳ್ಳುತ್ತೇವೆ. ನಾವು ಇನ್ನೊಬ್ಬರ ಸಂಪತ್ತನ್ನು ನೋಡಿ ಸಂತೋಷ ಪಟ್ಟಷ್ಟು ದೇವರು ನಮಗೆ ಇನ್ನಷ್ಟು ಸಂಪತ್ತನ್ನು ಪ್ರಾಪ್ತಿ ಮಾಡುತ್ತಾನೆ.
ನಾವು ಇನ್ನೊಬ್ಬರಿಗೆ ಏನು ಕೊಡುತ್ತೇವೆ ಅದನ್ನು ನಮಗೆ ಭಗವಂತ ಮರಳಿ ಕೊಡುತ್ತಾನೆ.
ನಾವು ಪ್ರೀತಿ ಮಾಡಿದರೆ ಪ್ರೀತಿ ಮಾಡುವ ಜನರೇ ಸಿಗುತ್ತಾರೆ. ನಾವು ಅಸೂಯೆ ಮಾಡುತ್ತಿದ್ದರೆ ದ್ವೇಷ ಮಾಡುತ್ತಿದ್ದರೆ ಇನ್ನೊಬ್ಬರ ಸಂಪತ್ತಿಗೆ ಕತ್ತರಿ ಹಾಕುತ್ತಿದ್ದರೆ, ನಮಗೆ ಅದರ ಎರಡರಷ್ಟು ಕತ್ತರಿ ಹಾಕೋವಷ್ಟು ಜನರು ದೇವರು ನಮಗೆ ಕೊಡುತ್ತಾನೆ. ಲಕ್ಷ್ಮಿದೇವಿ ನೇರವಾಗಿ ಬಂದು ಯಾರಿಂದಲೂ ಸಂಪತ್ತನ್ನು ಕಸಿದುಕೊಳ್ಳುವುದಿಲ್ಲ. ಆದರೆ ಇನ್ನೊಬ್ಬರ ಮೇಲೆ ಪ್ರಚೋದನೆ ಮಾಡಿ ಇವರ ಬಗ್ಗೆ ದೂರಾಲೋಚನೆಯನ್ನು ಇನ್ನೊಬ್ಬರ ತಲೆ ತುಂಬಿ ಅವರ ಮುಖಾಂತರ ಸಂಪತ್ತನ್ನು ಹಾಳು ಮಾಡುತ್ತಾರೆ ದೇವತೆಗಳು ಯೋಗ್ಯವಾದ ಮಾನ ಮರ್ಯಾದೆ ಯಾರಿಗೆ ಯಾವ ಕಾಲದಲ್ಲಿ ನಾವು ಕೊಡಬೇಕು ಅದನ್ನು ಆಯಾ ಕಾಲದಲ್ಲಿ ಕೊಡುತ್ತಾ ಇರಬೇಕು. ಆಯಾ ಕಾಲದಲ್ಲಿ ಮಾಡಬೇಕಾದ ಧರ್ಮಾಚರಣೆಗಳನ್ನು ಚೆನ್ನಾಗಿ ಮಾಡಬೇಕು. ಅದಕ್ಕೆ ಉತ್ಸವಃ ಗಳಾದ ಕೃಷ್ಣಾಷ್ಟಮಿ, ಗಣಪತಿ ಉತ್ಸವ, ಇಂತಹ ಅನೇಕ ಸಂಕರ್ಮಣ ಕಾಲ ಪರ್ವಕಾಲಗಳನ್ನು ಚೆನ್ನಾಗಿ ಪರಿಪಾಲನೆ ಮಾಡ್ತಾ ಇರಬೇಕು. ಇದನ್ನೆಲ್ಲಾ ನಾನು ಗಮನಿಸುತ್ತಾ ಇರುತ್ತೇನೆ ಎನ್ನುತ್ತಾಳೆ ಮಹಾಲಕ್ಷ್ಮಿ. ನಾವು ಬಹಳ ಮುಂದುವರೆದ ಜನ ಎಂದು ಧರ್ಮ ಆಚರಣೆಗಳನ್ನು ಬಿಟ್ಟರೆ ಅದಕ್ಕಿಂತ ಮುಂದಾಗಿ ಮಹಾಲಕ್ಷ್ಮಿ ಅವರ ಮನೆಯನ್ನು ಬಿಟ್ಟು ನಡೆಯುತ್ತಾಳೆ.
ಸೂರ್ಯೋದಕ್ಕೆ ಮೊದಲು ಏಳಬೇಕು, ಎದ್ದವರು ತಮ್ಮ ನಿತ್ಯದ ದಿನಚರಿಯಗಳನ್ನು ಪಾಲನೆ ಮಾಡಬೇಕು. ಒಂದೊಂದು ಕ್ಷಣಗಳು ಕೂಡ ಅಪರೂಪದ ಕ್ಷಣಗಳು.
ಮಾನವ ಜನ್ಮದ ಒಂದೊಂದು ಕ್ಷಣಗಳಲ್ಲಿ ಒಂದೊಂದು ಕೋಟಿ ಪುಣ್ಯವನ್ನು ಪಡೆಯಲು ನಾವು ಸಾಧ್ಯವಿದೆ. ಆ ಒಂದು ಕ್ಷಣಗಳನ್ನು ನಾವು ಹಾಳು ಮಾಡಿಕೊಳ್ಳಬಾರದು ಎಂಬ ಎಚ್ಚರಿಕೆ ನಮಗೆ ಇರಬೇಕು.

Next Article