ಭಗವಂತನೇ ಪ್ರೇಮ…
ಇಪ್ಪತ್ನಾಲ್ಕು ಗಂಟೆಯೂ ನೀವು ಪ್ರೇಮ. ಪ್ರೇಮವನ್ನು ಮಾಡಬೇಕಿಲ್ಲ. ಆಗ ಅದೊಂದು ಕೃತ್ಯವಾಗುತ್ತದೆ. ಈ ಕರ್ತೃತ್ವವೇ ನೀವು ಪ್ರೇಮದಲ್ಲಿರದಂತೆ ತಡೆಯುತ್ತದೆ. ಭಗವಂತನನ್ನು ಪ್ರೀತಿಸುವ ಆತಂಕ ಮೂಡುತ್ತದೆ. ಭಗವಂತನ ಬಗ್ಗೆ ಆಲೋಚಿಸಬೇಕು. ಅವನನ್ನು ಪ್ರೀತಿಸಲು ಏನಾದರೊಂದು ಮಾಡಬೇಕು. ಅದು ಮಾಡಬೇಕು, ಇದು ಮಾಡಬೇಕು ಎಂಬ ಓಟದಲ್ಲಿರುತ್ತೀರಿ. ಭಗವಂತನಲ್ಲದೆ ಬೇರೇನೂ ಇಲ್ಲ ಎಂದು ಅರಿತು ವಿಶ್ರಮಿಸಿ. ಪ್ರೇಮವೇ ಭಗವಂತ. ಭಗವಂತನೇ ಪ್ರೇಮ.
ಪ್ರೇಮವನ್ನು ಮಾಡಲು ಹೊರಟರೆ, ನೀವು ಭಗವಂತನನ್ನು ಮಾಡಿದಂತೆಯೆ. ಭಗವಂತನನ್ನು ನೀವು ಮಾಡಬೇಕಿಲ್ಲ. ಅವನು ಈಗಾಗಲೇ ಇದ್ದಾನೆ. ಇಪ್ಪತ್ತು ನಾಲ್ಕು ಗಂಟೆಯೂ ಭಗವಂತನೊಡನೆ ಪ್ರೇಮದಿಂದಿರಿ ಎಂದು ಕೆಲವು ಸಂತರು ಹೇಳಿರುವ ಕಾರಣ, ಇಪ್ಪತ್ತು ನಾಲ್ಕು ಗಂಟೆಯೂ ಭೌತಿಕ ವಸ್ತುವಿನ ಮೇಲೆ ಪ್ರೇಮವನ್ನು ಮಾಡುವುದರ ಮೇಲಿಂದ ನಿಮ್ಮ ಗಮನವನ್ನು ತಿರುಗಿಸಿ ಎಂದು.
ಈ ಮಾತುಗಳ ಹಿಂದೆ ಉದ್ದೇಶವಿರುತ್ತದೆ. ಕೆಲವು ವರ್ಷಗಳ ಹಿಂದೆ ಜನರಿಗೆ ಪರಮಜ್ಞಾನವನ್ನು ಅಕರ್ತೃತ್ವ ಭಾವನೆಯನ್ನು, ಅಷ್ಟಾವಕ್ರಗೀತೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿರಲಿಲ್ಲ. ಪ್ರಾರ್ಥನೆಯೊಂದನ್ನು ಮಾತ್ರ ಅರಿತಿದ್ದರು. ಅವರಿಗೆ ಆ ರೀತಿಯಾಗಿ ಹೇಳುತ್ತಿದ್ದರು. ಈಗ ಮುನ್ನಡೆದು ನೀವೇ ಪ್ರೇಮ ಎಂದು ತಿಳಿಯಿರಿ. `ನನ್ನ ಪ್ರತಿಯೊಂದು ಉಸಿರಿನಲ್ಲೂ ನನ್ನ ಪ್ರಿಯನ ನಾಮಪಠಣವನ್ನು ಮಾಡುತ್ತೇನೆ. ಪ್ರಿಯತಮನು ದೋಷರಹಿತನು - ಪರಿಪೂರ್ಣನು.
ಪ್ರೇಮದಲ್ಲಿದ್ದು ನನ್ನ ಹೆಸರನ್ನೇ ಕಳೆದುಕೊಂಡೆ' ಎಂದು ಹಾಡಿ, ೧೬ನೆಯ ಶತಮಾನದ ಸಂತರಾದ ಮೀರಾಬಾಯಿ, ಭಗವಾನ್ ಕೃಷ್ಣನ ಬಗ್ಗೆ ತನ್ನ ಭಕ್ತಿಯನ್ನು ಅಭಿವ್ಯಕ್ತಗೊಳಿಸಿದರು. ಬಹಳ ಪ್ರೇಮವಿದ್ದಾಗ ಯಾವುದೇ ಅಪಾರ್ಥಕ್ಕೆ ಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೀರಿ. ಸಾಮಾನ್ಯವಾಗಿ ನಾವು ವ್ಯತ್ಯಾಸಗಳಲ್ಲಿ ಸಿಲುಕಿಕೊಳ್ಳುವ ಕಾರಣ, ನಾವು ಯಾರೆಂಬ ದೃಷ್ಟಿಯನ್ನೇ ಕಳೆದುಕೊಂಡಿರುವುದು. ಪ್ರೇಮದ ಹೆಸರಿನಲ್ಲಿ ಮತ್ತೊಬ್ಬರ ಮೇಲೆ ತಂತ್ರಗಾರಿಕೆಯನ್ನು ಬಳಸಿ, ಮತ್ತೊಬ್ಬರನ್ನು ನಿಯಂತ್ರಿಸಲು ಯತ್ನಿಸುತ್ತಿರುತ್ತೇವೆ. ಬೆಟ್ಟದ ಮೇಲಿದ್ದಾಗ, ವಿಮಾನದಲ್ಲಿದ್ದಾಗ ಭೂಮಿಯ ಮೇಲಿರುವ ತೂತುಗಳು ನಿಮಗೆ ಕಾಣಿಸುವುದಿಲ್ಲ. ಭೂಮಿಯು ನಯವಾಗಿ ಕಾಣುತ್ತದೆ. ಅದೇ ರೀತಿಯಾಗಿ, ಚೈತನ್ಯದ ಉನ್ನತ ಸ್ಥಿತಿಯಲ್ಲಿ ಇತರರಲ್ಲಿರುವ ಕುಂದುಗಳು ನಿಮಗೆ ಕಾಣುವುದಿಲ್ಲ.
ಆದರೆ ಭೂಮಿಯ ಮೇಲೆ ಬಂದಾಗ ಹಳ್ಳಗಳನ್ನು ಸುಲಭವಾಗಿ ಕಾಣಬಲ್ಲಿರಿ. ಹಳ್ಳಗಳನ್ನು ತುಂಬುವ ಸಲುವಾಗಿ ಅವುಗಳು ನಿಮಗೆ ಕಾಣಿಸಬೇಕು. ಹಳ್ಳಗಳನ್ನು ನೋಡದೆಯೇ, ಹಳ್ಳಗಳಲ್ಲಿರುವ ಕಲ್ಲುಗಳನ್ನು ತೆಗೆದು, ಹಳ್ಳಗಳನ್ನು ತುಂಬಲು ಸಾಧ್ಯವಿಲ್ಲ. ಆದ್ದರಿಂದಲೇ ಯಾರನ್ನಾದರೂ ಪ್ರೀತಿಸಿದಾಗ ಅವರಲ್ಲಿ ತಪ್ಪುಗಳನ್ನು ಕಾಣುತ್ತೀರಿ.
ಅವರು ತಮ್ಮನ್ನು ತಿದ್ದಿಕೊಳ್ಳಲು ಅವರಿಗೆ ಸಹಾಯ ಮಾಡುವ ಬದಲಿಗೆ, ಅವರನ್ನು ಬಿಟ್ಟು ಓಡಿಹೋಗುತ್ತೇವೆ. ಯಾರನ್ನಾದರೂ ಪ್ರೀತಿಸಿದಾಗ ಮತ್ತು ಅವರಲ್ಲಿ ತಪ್ಪುಗಳನ್ನು ಕಂಡಾಗ, ಅವರೊಡನಿದ್ದು, ಅವರಿಗೆ ಸಹಾಯ ಮಾಡಿ. ಅದೇ ಜ್ಞಾನ.