For the best experience, open
https://m.samyuktakarnataka.in
on your mobile browser.

ಭೋಗ ಸದನವಾಗುವ ಸಂಪತ್ತು ಬೇಡ

05:00 AM Feb 28, 2024 IST | Samyukta Karnataka
ಭೋಗ ಸದನವಾಗುವ ಸಂಪತ್ತು ಬೇಡ
PRATHAPPHOTOS.COM

ನಮ್ಮ ಜೀವನದಲ್ಲಿ ಯಾವ ತರಹದ ಜೀವನ ಶೈಲಿಯನ್ನು ಅನುಸರಿಸಬೇಕು? ಜೀವನದ ಪದ್ಧತಿ ರೂಪಿಸಿಕೊಳ್ಳಬೇಕು. ಯಾವುದು ಶ್ರೇಯ ಸಾಧನ? ಇದನ್ನು ಇಂದ್ರ ಮತ್ತು ಬಲಿ ಇವರಿಗೆ ಮಹಾಲಕ್ಷ್ಮಿ ಶುದ್ಧ ಸದಾಚಾರಿಗಳಲ್ಲಿ ಹಿರಿಯರಲ್ಲಿ ಭಗವಂತನಲ್ಲಿ ಶ್ರದ್ಧಾಭಕ್ತಿಯಿಂದ ಇಟ್ಟುಕೊಂಡು, ಸೇವಿಸುವ ಸಜ್ಜನರು ಯಾರಿದ್ದಾರೋ ಅಂತವರಲ್ಲಿ ನಾನು ನಲೆಸುತ್ತೇನೆ ಎಂದು ಮಹಾಲಕ್ಷ್ಮಿದೇವಿ ಹೇಳುತ್ತಾರೆ. ತನ್ನ ಪತಿಯಾದ ನಾರಾಯಣನ ಸ್ಮರಣೆಯನ್ನು ಯಾರು ಮಾಡುತ್ತಾರೆಯೂ ಅವರಲ್ಲಿರುತ್ತೇನೆ.
ತನ್ನ ಪತಿಯನ್ನು ಬಿಟ್ಟು ಇರುವುದು ತನಗೆ ಉಚಿತವಲ್ಲ ಆದುದರಿಂದ ಶೃತಿ, ಸ್ಮೃತಿಗಳಲ್ಲಿ ನಾರಾಯಣನು ಆದೇಶ ಮಾಡಿದ ರೀತಿಯಲ್ಲಿ, ತಮ್ಮ ಜೀವನವನ್ನು ನಡೆಸುವಂತಹ ನಿಜವಾದ ಅರ್ಥದಲ್ಲಿ ತನ್ನ ಭಕ್ತರು ಯಾರೂ ಅಂತಹ ಸಜ್ಜನರಲ್ಲಿ ನನ್ನ ವಿಶೇಷವಾದ ಸನ್ನಿಧಾನವಿರುತ್ತದೆ ಎಂದು ಮಹಾಲಕ್ಷ್ಮಿ ದೇವಿ ತಿಳಿಸಿಕೊಟ್ಟಿದ್ದಾರೆ. ಯಾರೂ ತನ್ನ ಧರ್ಮ ಏನು ಎಂದು ಚೆನ್ನಾಗಿ ತಿಳಿದುಕೊಂಡು ಅನುಷ್ಠಾನ ಮಾಡುವವರು ಅವರ ಮನೆ ಮನದಲ್ಲಿ ನಾನು ವಾಸ ಮಾಡುತ್ತೇನೆ. ಮನೆಯಲ್ಲಿ ಗೋ ಸಂಪತ್ತು ಆರೋಗ್ಯ ಸಂಪತ್ತು ಧನ ಸಂಪತ್ತು, ಧಾನ್ಯ ಸಂಪತ್ತು, ಗೃಹಣಿ, ಸಂತತಿ ರೂಪದಲ್ಲಿ ಮನೆಯಲ್ಲಿರುತ್ತೇನೆ. ವಿನಯ ಜ್ಞಾನ,ಭಕ್ತಿ ವೈರಾಗ್ಯ ತ್ಯಾಗ ಪರೋಪಕಾರ ಭಾವ. ಈ ಭಾವದಲ್ಲಿ ಮನದಲ್ಲಿ ಇರುತ್ತೇನೆ ಎಂದು ಶ್ರೀ ಮಹಾಲಕ್ಷ್ಮಿ ಹೇಳಿದ್ದಾರೆ.
ನಾನ್ಯಾರು ನನ್ನ ಧರ್ಮವೇನು ಎಂದು ಶಾಸ್ತ್ರಗಳ ಮೂಲಕ ತಿಳಿದು, ಅದನ್ನು ಧರ್ಮವೆಂದು ತಿಳಿದು ಅನುಷ್ಠಾನ ಮಾಡಿಕೊಂಡು ಧರ್ಮವನ್ನು ಪಾಲನೆ ಮಾಡುತ್ತಾ ಹೋದರೆ ಧರ್ಮ ನಮ್ಮ ಕೈಯನ್ನು ಬಿಡುವುದಿಲ್ಲ ಎಂದು ಧೈರ್ಯದಿಂದ ಇರಬೇಕು. ಸ್ವರ್ಗ, ಮೋಕ್ಷ, ಪರಲೋಕದಲ್ಲಿ ಸಾಧನವಾದ ಸಕ್ರಮವನ್ನು ನಾನು ಮಾಡಬೇಕು ಜನ್ಮಾಂತರದಲ್ಲಿ ದುಃಖ ಸಾಧನವಾದ ಕರ್ಮಗಳನ್ನು ನಾನು ಮಾಡಬಾರದು ಎನ್ನುವ ವಿವೇಕ ಇರಬೇಕು. ದಾನ, ಅಧ್ಯಯನ, ಯಜ್ಞ, ಅತಿಥಿ ಅಭ್ಯಾಗತರ ಪೂಜೆ, ಗುರುಗಳ ಸೇವೆ ತಂದೆ ತಾಯಿಗಳ ಸೇವೆ ಇವೆಲ್ಲವನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತ ಸಾಧನೆ
ಧರ್ಮದಿಂದ ನ್ಯಾಯದಿಂದ ಸಂಪಾದನೆ ಮಾಡಿದ. ಧರ್ಮಕ್ಕೆ ವಿನಿಯೋಗವಾಗುವ ಸಂಪತ್ತು ನಿಜವಾದ ಸಂಪತ್ತು. ಇಂತಹ ಸಂಪತ್ತು ನಮಗೆ ದೇವರ ದರ್ಶನವನ್ನು ಮಾಡಿಕೊಡುತ್ತದೆ ಅದು ಶ್ರೇಷ್ಠವಾದ ಸಂಪತ್ತು ಅದು ನಮಗೆ ನಾವೇ ನೀಡಬೇಕಾದ ಒಂದು ಅಪೂರ್ವ ಉಡುಗೊರೆ. ಬರೀ ಭೋಗ ಸದನವಾಗುವ ಸಂಪತ್ತು ಬೇಡ, ತಾತ್ಕಾಲಿಕವಾಗಿ ಸಿಗುವ ಸಂಪತ್ತು ಉಗ್ರವಾದ ರೀತಿಯಲ್ಲಿ ಆ ಸಂಪತ್ತನ್ನು ಕಳೆದುಕೊಂಡು, ಅವಮಾನ ಸೋಲು, ತಿರಸ್ಕಾರ ಪರೋಲೋಕದಲ್ಲಿಯೂ ದುಃಖ ಪಡಬೇಕಾಗುತ್ತದೆ. ಗುರುಗಳ ಸೇವೆಯನ್ನು ಮಾಡಬೇಕು ಮನೆಯನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಇಂದ್ರಿಯ ನಿಗ್ರಹ ಅಗ್ನಿಯ ಸೇವೆಯನ್ನು ಚೆನ್ನಾಗಿ ಮಾಡಬೇಕು. ಸೇವಕರ ಸೇವೆಯನ್ನು ಮಾತ್ರ ಸ್ವೀಕರಿಸದೆ ಅವರ ಪೋಷಣೆಯನ್ನು ಮಾಡಬೇಕು. ಅವರೆಲ್ಲರ ಸೇವೆ ಉಪಕಾರ ಸ್ಮರಣೆ ಮಾಡಬೇಕು.