For the best experience, open
https://m.samyuktakarnataka.in
on your mobile browser.

ಮಾನವ ಜನ್ಮ ದೊಡ್ಡದು

02:30 AM Mar 13, 2024 IST | Samyukta Karnataka
ಮಾನವ ಜನ್ಮ ದೊಡ್ಡದು
PRATHAPPHOTOS.COM

ಮಾನವ ಜನ್ಮದ ಒಂದೊಂದು ಕ್ಷಣಗಳಲ್ಲಿ ಒಂದೊಂದು ಕೋಟಿ ಪುಣ್ಯವನ್ನು ಪಡೆಯಲು ನಾವು ಸಾಧ್ಯವಿದೆ. ಆ ಒಂದು ಕ್ಷಣಗಳನ್ನು ನಾವು ಹಾಳು ಮಾಡಿಕೊಳ್ಳಬಾರದು ಎಂಬ ಎಚ್ಚರಿಕೆ ನಮಗೆ ಇರಬೇಕು.
ಮಾನವ ಜನ್ಮ ಬಹಳ ದೊಡ್ಡದು. ಇದನು ಹಾನಿ ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ.. ಎಂದು ದಾಸರು ದಾಸಪದದಲ್ಲಿ ಧರ್ಮ ಅನುಷ್ಠಾನ ಮಾಡದ ಮನುಜರನ್ನು ಬೈಯ್ಯುತ್ತಾರೆ.
ದೇವರ ಚಿಂತನೆ ಧರ್ಮದ ಅನುಷ್ಠಾನ ಮಾಡುವುದಕ್ಕೆ. ಅನಂತಕಾಲದ ಸುಖವನ್ನು ಅನುಭವಿಸುವುದಕ್ಕೆ ಸಾಧನವನ್ನು ಈ ಶರೀರದಲ್ಲಿ ಮಾಡಬಹುದೇ ಹೊರತು ಇನ್ನು ಯಾವುದೇ ಶರೀರದಲ್ಲಿ ಅಸಾಧ್ಯ,
ಮುಂಬರುವ ಜನುಮದಲ್ಲಿ ನಮಗೆ ಯಾವ ಶರೀರ ಬರುತ್ತದೆಯೋ ಕೂಡ ನಮಗೆ ಗೊತ್ತಿರುವದಿಲ್ಲ. ಆದುದರಿಂದ ಇದೇ ಶರೀರದಲ್ಲಿದ್ದು ಸಾಧನೆಯನ್ನು ಮಾಡಬೇಕು. ನಿದ್ರೆಯಲ್ಲಿ ಬಹಳ ಸಮಯವನ್ನು ಕಳೆಯಬಾರದು ಎಂಬ ದೃಷ್ಟಿಯಿಂದ ಶಾಸ್ತçಕಾರರು ರಾತ್ರಿ ಮೊಸರನ್ನು ತಿನ್ನಬಾರದು. ಶ್ರಾವಣ ಬರುವವರೆಗೆ ಅವಶ್ಯವಾಗಿ ಮೊಸರು ತಿನ್ನಬಹುದು, ರಾತ್ರಿ ಮೊಸರು ತಿಂದಿದ್ರೆ ಅನಾರೋಗ್ಯ ಆಗುತ್ತದೆ. ಮತ್ತು ಮಹಾಲಕ್ಷ್ಮಿಯ ಅವಕೃಪೆಯು ಆಗುತ್ತದೆ ಎಂದಿದ್ದಾರೆ.
ಬೆಳಗ್ಗೆ ಎದ್ದ ತಕ್ಷಣ ಮಂಗಳಕರವಾದ ವಸ್ತುಗಳನ್ನು ನೋಡಿ. ಉತ್ತಮ ಜ್ಞಾನಗಳ ದರ್ಶನ ಮಾಡಿ. ಭಗವಂತನ ದರ್ಶನ ಮಾಡಿ ಮನೆಯ ಗೃಹಿಣಿಯಾದ ಮುತ್ತೈದೆಯ ದರ್ಶನ ಮಾಡಿ. ತುಪ್ಪದಲ್ಲಿ ಮುಖವನ್ನು ನೋಡಿ ಅಥವಾ ಗೋದರ್ಶನ ಮಾಡಿ. ದೇವರ ಸ್ಮರಣೆ ಮಾಡುತ್ತಲೇ ಹಾಸಿಗೆಯಿಂದ ಏಳಿ, ವಾಯುದೇವರ ಭಗವಂತನ ಪ್ರತ್ಯಕ್ಷ ಕಾಣದಿದ್ದರೂ ಅವರ ಪಟಗಳಿಗೆ ನಮಸ್ಕರಿಸಿ. ಮನಸ್ಸಿನಿಂದ ಭಗವಂತನ ವಿಶೇಷ ಪ್ರಾರ್ಥನೆ ಮಾಡಿ ನಿತ್ಯದ ಕಾರ್ಯಗಳನ್ನು ಪ್ರಾರಂಭಿಸಿದರೆ ಯಶಸ್ಸು ಸಿಗುತ್ತದೆ.
ಆ ಶುಭವಾದ ವಾತಾವರಣದಲ್ಲಿ ಯಾವ ಕಾಲದಲ್ಲಿ ವಿಶ್ವ ದೇವತೆಗಳು ಸಂಚಾರ ಮಾಡುತ್ತಾರೆ, ಆ ವೇಳೆಯಲ್ಲಿ ಏನಾದರೂ ಶುಭ ಸಂಕಲಗಳು ನಮ್ಮ ಮನಸ್ಸಿನಲ್ಲಿ ಆ ಕ್ಷಣದಲ್ಲಿ ಬಂದರೆ ಅವರು ತಥಾಸ್ತು ಎಂದು ಹೇಳುತ್ತಾರೆ. ಆದುದರಿಂದ ಬೆಳಿಗ್ಗೆ ಬೇಗ ಏಳುವ ಅಭ್ಯಾಸವನ್ನು ಎಲ್ಲರಿಗೂ ಮಾಡಿಕೊಳ್ಳಬೇಕು ಎಂದು ಗುರುಗಳು ಭಕ್ತವೃಂದಕ್ಕೆ ಬೋಧಿಸಿದ್ದಾರೆ.