For the best experience, open
https://m.samyuktakarnataka.in
on your mobile browser.

ವಾಸುದೇವಂ ನಿರಂಜನಂ

04:00 AM Mar 27, 2024 IST | Samyukta Karnataka
ವಾಸುದೇವಂ ನಿರಂಜನಂ
PRATHAPPHOTOS.COM

ಇಂದಿನ ಜೀವನದಲ್ಲಿ ಎಂತಹ ಸಮಸ್ಯೆ ಇದ್ದರೂ, ಅದಕ್ಕೆ ಸರಿಯಾದ ಉತ್ತರ ಮಹಾಭಾರತದಲ್ಲಿದೆ. ಆಶ್ಚರ್ಯವೆಂದರೆ ಯಾವುದೇ ರೀತಿಯ ಕೌಟುಂಬಿಕ, ರಾಷ್ಟ್ರೀಯ ಜಾಗತಿಕ ಸಾಮಾಜಿಕ ಸಮಸ್ಯೆ ಆಗಿರಬಹುದು ಅದೆಲ್ಲವೂ ಮಹಾಭಾರತ ಉತ್ತರವನ್ನು ನೀಡುತ್ತದೆ.
ಜಾಗತಿಕ ಸಮಸ್ಯೆಗಳನ್ನು ಹೇಳಿದ್ದು ಎಲ್ಲದಕ್ಕೂ ಸ್ಪಂದಿಸುವಂತಹ ಅದ್ಭುತವಾದ ಉತ್ತರವನ್ನು ನೀಡುವಂತಹ ಆ ಗ್ರಂಥವನ್ನು ನಿರ್ಮಿಸಬೇಕೆಂದರೆ ಸರ್ವಜ್ಞನಾದ ಆ ಭಗವಂತನ ಬಿಟ್ಟು ಯಾರಿಂದ ಸಾಧ್ಯವಿದೆ?
ಅಂಥ ಸ್ವಾಮಿ ಭಗವಂತನನ್ನು ಮಂದರ ಪರ್ವತವನ್ನು ತಂದು ಸಮುದ್ರ ಮಥನವನ್ನು ಮಾಡುವಾಗ ಇಂದ್ರಾದಿ ದೇವತೆಗಳೆಲ್ಲಾ ಎತ್ತಿದರೂ ಸಾಧ್ಯವಾಗಲಿಲ್ಲ. ಆ ಶಕ್ತಿಯನ್ನು ರುದ್ರ ದೇವರಿಗೆ ಕೊಟ್ಟಿದ್ದು ವಿಷ್ಣು ಸ್ವತಃ ದೇವರೇ ಬಂದು ಸುಲಭವಾಗಿ ಅದನ್ನು ಎತ್ತಿದ ರುದ್ರದೇವರ ವಚನವನ್ನು ಮೀರುವ ಸ್ವತಂತ್ರ ಭಗವಂತ ತೋರಿಸಿಕೊಟ್ಟ. ಉಳಿದ ದೇವರುಗಳೆಲ್ಲ ರುದ್ರದೇವರ ಅಧೀನರು ಎಂಬುವ ತಾರತಮ್ಯವನ್ನು ಜಗತ್ತಿಗೆ ತೋರಿಸಿಕೊಟ್ಟ. ಗರುಡನ ಮೇಲೆ ಇಟ್ಟುಕ್ಕೊಂಡು ತಗೆದುಕೊಂಡು ಪರಮಾತ್ಮ ಕರೆದುಕೊಂಡು ಬಂದಿದ್ದಾನೆ. ಹಾಗೆಲ್ಲ ಉಳಿದ ದೇವತೆಗಳು ಕೂಡ ಮಂದರ ಪರ್ವತವ ಎತ್ತಲು ಪ್ರಯತ್ನಿಸಿದರು ಆಗಲಿಲ್ಲ. ಕೆಲವೊಬ್ಬರು ಮಂದರ ಪರ್ವತದ ಅಡಿಯಲ್ಲಿ ಜಜ್ಜಿ ಹೋದರು. ಆಗ ಭಗವಂತ ತನ್ನ ಕೃಪಾದೃಷ್ಟಿಯಿಂದ ಅವರನ್ನು ಬದುಕಿಸಿದ. ಬದುಕು ಸಾವುಗಳಿಗೆಲ್ಲಾ ಭಗವಂತನ ಅನುಗ್ರಹ ಕಾರಣವೇ ಹೊರತು ನಿಜವಾಗಿ ಅಮೃತಪ್ರಾಶನ ಬೇಕಾಗಿಲ್ಲ ಎಂಬುದನ್ನು ತೋರಿಸಿಕೊಟ್ಟ. ಮಂದರಗಿರಿಯನ್ನು ಮಥನ ಮಾಡಬೇಕೆಂದು ಹೊರಟರೆ ಗಿರಿಯು ಸಮುದ್ರದಲ್ಲಿ ತೇಲುತ್ತಾ ಇದೆ. ಮತ್ತೆ ಕೂರ್ಮ ರೂಪದಿಂದ ಬಂದು ಆ ಗಿರಿಯನ್ನು ಧಾರಣೆ ಮಾಡಿದ. ಮೇಲೆ ಹಾರದಂತೆ ಮತ್ತೊಂದು ಕೈಯನ್ನು ಗಿರಿಯ ಮೇಲೆ ಇಟ್ಟ.
ದೇವತೆಗಳು ಸುಸ್ತಾಗುತ್ತಿದ್ದಾರೆ ಸಮುದ್ರ ಮಥನವಾಗದೆ. ಆಗ ತಾನೇ ಅಜಿತರೂಪದಿಂದ ಆ ಮನ್ವಂತರಕ್ಕೆ ಅಧಿಪತಿಯಾದ ಭಗವಂತ ಬಂದು ನಿಂತು ಮಥನ ಮಾಡುತ್ತಾ ಇದ್ದಾನೆ.
ಹಗ್ಗವಾದ ಸರ್ಪ ವಾಸುಕಿ ವಿಷಫೂತ್ಕಾರ ಮಾಡಿ ಇನ್ನೇನು ಸಾಯಬೇಕು ಎನ್ನುವ ಸ್ಥಿತಿಯಲ್ಲಿದ್ದರೆ ಪರಮಾತ್ಮ ಮತ್ತೆ ಅದರಲ್ಲೂ ಪ್ರವೇಶ ಮಾಡಿ ಅದಕ್ಕೆ ಶಕ್ತಿಯನ್ನು ಕೊಟ್ಟ.
ದೇವತೆಗಳ ಶಕ್ತಿ ವಾಸುಕಿಗಳ ಶಕ್ತಿ ಹೆಚ್ಚಾದರೆ ಪರ್ವತ ಪುಡಿಯಾಗುವ ಪ್ರಸಂಗ ಮತ್ತೆ ಪರ್ವತದೊಳಗೂ ಬಂದಿದ್ದಾನೆ. ಇಷ್ಟೆಲ್ಲ ಮತನ ಮಾಡಿ ಅಮೃತ ಇನ್ನೇನು ಬರಬೇಕು. ಮೊಸರು ಕಡೆವಾಗ ಬೆಣ್ಣೆ ಮೇಲೆ ಬಂದಂತೆ ಅಮೃತ ಮೇಲೆ ಬರಲಿಲ್ಲ. ಕಲಶದಲ್ಲಿ ತುಂಬಿಕೊಂಡು ಧನ್ವಂತರಿ ರೂಪದಲ್ಲಿ ತಾನು ತಂದು ಅಮೃತವನ್ನು ಕೊಟ್ಟ. ಪಾಲಿಗೆ ಬಂದು ಪಂಚಾಮೃತವನ್ನು ನಮಗೆ ಉಣಲೂ ಕೂಡ ಶಕ್ತಿ ಇಲ್ಲವೆಂಬ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟ ಕೈಗೆ ಬಂದರೂ ಬಾಯಿಗೆ ಬರಲಿಲ್ಲ. ಎನ್ನುವುದನ್ನು ತೋರಿಸಿಕೊಡಲು ಮೋಹಿನಿಯ ರೂಪದಲ್ಲಿ ಬಂದು ದೇವತೆಗಳಿಗೆ ಮಾತ್ರ ಅಮೃತ ಕೊಟ್ಟು, ಅಸುರರಿಗೆ ಮಾತ್ರ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ತತ್ವ ತೋರಿಸಿ ಕೊಟ್ಟ.