ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಹೃದಯದೊಳಗಿನ ಜೀವಸ್ವರೂಪ ಭಗವಂತನೇ `ಪುರುಷ'

05:00 AM Jun 12, 2024 IST | Samyukta Karnataka

ಧರ್ಮದಿಂದ ನ್ಯಾಯದಿಂದ ಶಾಸ್ತ್ರವಾದ ರೀತಿಯಲ್ಲಿ ನಡೆದುಕೊಂಡರೆ ಪ್ರಾಮಾಣಿಕವಾಗಿ ಅನುಗ್ರಹವನ್ನು ಮಾಡಿಕೊಳ್ಳಲು ಗಟ್ಟಿ ಭಗವಂತ, ಭಗವಂತನ ಮಾತನ್ನು ಮೀರಿ ತಪ್ಪು ದಾರಿಯಲ್ಲಿ ನಡೆದಾಗ ಅಥವಾ ಅಧರ್ಮ ಮಾಡಿದಾಗ ಅನ್ಯಾಯ ಮಾಡಿದಾಗ ಅಸತ್ಯವನ್ನು ನುಡಿದರೆ ಶಿಕ್ಷೆಯನ್ನು ಕೊಡುವುದಕ್ಕೂ ಭಗವಂತ ಅಷ್ಟೇ ನ್ಯಾಯನಿಷ್ಠರವಾಗಿ ಉಗ್ರನಾಗಿ ನಮ್ಮ ಎದುರಿಗೆ ನಿಲ್ಲುತ್ತಾನೆ.
ಅಂತಹ ಭಗವಂತ ನಮಗೆ ತಂದೆಯಾಗಿ ಗುರುವಾಗಿ ದೊರಕಿದ್ದೆ ನಮ್ಮ ದೊಡ್ಡ ಸೌಭಾಗ್ಯ. ನಾವು ಮಾಡಿದ್ದೆಲ್ಲ ಸರಿ ಅಂತ ಹೇಳುವವರು ನಾವು ಒಳ್ಳೆಯವರು ಅಂತ ತಿಳಿದುಕೊಳ್ಳುತ್ತೇವೆ.
ಸರಿಯಾದದ್ದನ್ನು ಮಾಡಿದಾಗ ಸರಿ ಎಂದು ಬೆನ್ನು ಚಪ್ಪರಿಸಿ ಮುಂದುವರೆಯುವಂತೆ ಪ್ರೋತ್ಸಾಹಿಸಿರುವವರು ಹಾಗೂ ತಪ್ಪು ಮಾಡಿದಾಗ ಅದನ್ನು ತೋರಿಸಿ ತಿಳಿಸಿಕೊಟ್ಟು ಸರಿ ದಾರಿಯಲ್ಲಿ ನಡೆಯಬೇಕು ಎಂಬ ತೋರುವರೇ ಒಳ್ಳೆಯವರು.
ಹೀಗೆ ಪರೀಕ್ಷಿತನ ಬಿನ್ನವಿಸುವಿಕೆಯಿಂದ ಶುಕಾಚಾರ್ಯರು ಪರಮಾತ್ಮನ ಅನಂತ ಲೀಲೆಗಳನ್ನು ತಿಳಿಸಲು ಉದ್ಯುಕ್ತರಾಗುತ್ತಾರೆ. ಶ್ರೀಕೃಷ್ಣ ಪರಮಾತ್ಮನ ಮೂಲರೂಪಗಳ ಮತ್ತು ಅವತಾರ ರೂಪಗಳ ಅಪಾರವಾದ ಉಪಕಾರದ ರಾಶಿಯನ್ನು ಪರೀಕ್ಷಿತ ಮಹಾರಾಜರು ಸ್ಮರಣೆಗೆ ತಂದುಕೊಂಡು ಶುಕಾಚಾರ್ಯರಿಂದ ಭಗವಂತನ ಅನಂತ ಉಪಕಾರದ ಹೊರೆಯನ್ನು ಹೊರೆಸಿದ ಶ್ರೀಹರಿಯ ಮಹಿಮೆಯನ್ನು ವಿಸ್ತೃತವಾಗಿ ಕೇಳಬೇಕೆಂಬ ಅಪೇಕ್ಷೆಯನ್ನು ವ್ಯಕ್ತಪಡಿಸುತ್ತಾನೆ.
ವೃಷಭ ನಾಮಕ ಪರಮಾತ್ಮ ತಿಳಿಸುವಂತೆ, ಯಾರೋ ಮೃತ್ಯು, ನರಕ ಸದೃಶವಾದ ತಮಸ್ಸು ಮಾಡುವ ಸಂದರ್ಭದಲ್ಲಿ ಅದನ್ನು ತಪ್ಪಿಸಿ ಸರಿಯಾದ ಮಾರ್ಗದಲ್ಲಿ ಕರೆದುಕೊಂಡು ಬರುವವರು ನಿಜವಾದ ಗುರು ತಂದೆ ತಾಯಿಗಳು. ತಪ್ಪು ದಾರಿಯಿಂದ ತಿದ್ದಿ ಸನ್ಮಾರ್ಗದಲ್ಲಿ ನಡೆಸುವ ಜವಾಬ್ದಾರಿಯನ್ನು ತೆಗೆದುಕೊಂಡು ತಂದೆ ತಾಯಿಗಳು. ಆ ದೃಷ್ಟಿಯಲ್ಲಿ ಪರೀಕ್ಷಿತ ಮಹಾರಾಜರು ದೇವರು ಕಷ್ಟ ಕೊಡುತ್ತಾನೆ ಮತ್ತೆ ಇಂತಹ ತಪ್ಪನ್ನು ಮಾಡದಂತೆ ಎಚ್ಚರವನ್ನು ನೀಡುತ್ತಾನೆ ಅಂತಹ ತಂದೆ ನಿಜವಾದ ತಂದೆ ಗುರು, ದೈವ, ಅವನ ಮಹಿಮೆಯನ್ನು ನನಗೆ ಹೇಳಬೇಕು ಎಂದು ಕೇಳುತ್ತಾನೆ.ಆ ಪರಮಾತ್ಮನ ರೂಪಗಳು ಎರಡು ತರಹದಿವೆ. ಒಂದು ಅಂತರ್ಯಾಮಿ ರೂಪ, ಒಂದು ಬಾಹ್ಯರೂಪ. ಒಳಗಿರುವ ಭಗವಂತನ ರೂಪಕ್ಕೆ ಪುರುಷ ಎಂದು ಹೆಸರು ಹೊರಗಿರುವ ಭಗವಂತನ ರೂಪಕ್ಕೆ ಕಾಲ ಎಂದು ಹೆಸರು. ಶರೀರದಲ್ಲಿ ಅಂತರ್ಯಾಮಿಗೆ ಇರುವುದಕ್ಕೆ ಅವನಿಗೆ ಪುರುಷ ಎನ್ನುತ್ತಾರೆ, ಹಾಗೂ ಪುರ ಷಡ್ಗುಣನಾಗಿರುವುದರಿಂದಲೂ ಪುರುಷ. ಇಡೀ ಜಗತ್ತನ್ನು ನೇಮನ ಮಾಡುವ ಸಾಮರ್ಥ್ಯ, ಮಹಾ ಪರಾಕ್ರಮ, ಎಂತಹ ದೈತ್ಯರು, ಮಾನವರು ದೇವತೆಗಳು ಬರಲಿ ಅವರನ್ನು ಎದುರಿಸುವಂತಹ ಅಪಾರವಾದ ವೀರ್ಯ ಪರಾಕ್ರಮ, ಅದ್ಭುತವಾದಂತಹ ಯಶಸ್ಸು, ಇಡೀ ಜಗತ್ತಿನಲ್ಲಿ ಹರಡಿದ ಎಲ್ಲರ ಮನೆ ಮನಸ್ಸಿನ ಮಾತಾದ ಭಗವಂತನ ಕೀರ್ತಿ, ಇಡೀ ವಿಶ್ವದ ಎಲ್ಲಾ ಚೇತನ ಅಕ್ಷೇತನದ ಪದಾರ್ಥಗಳು ಹಾಗೂ ಅದರ ಗುಣ ಧರ್ಮಗಳು ಅವನು ಸ್ವತ್ತು. ಜ್ಞಾನ ವಿಜ್ಞಾನ ಎರಡು ಪರಮಾತ್ಮನಲ್ಲಿದೆ. ಆದುದರಿಂದ ಪರಿಪೂರ್ಣನಾದವ ಅವನೇ ಭಗವಂತ, ಪರಮಾತ್ಮನಿಗೆ ಭಕ್ತಿ ಇಲ್ಲ, ಆದರೆ ಅವನಿಗೆ ವೈರಾಗ್ಯವಿದೆ. ಇಡೀ ಜಗತ್ತಿನಲ್ಲಿರುವ ಎಷ್ಟು ರೂಪಗಳು ರಸಗಳು, ಎಷ್ಟು ಗಂಧ, ಎಷ್ಟು ಸ್ಪರ್ಶ ಎಷ್ಟು ಜನರ ಮನಸ್ಸನ್ನು ಆಕರ್ಷಣೆ ಮಾಡುತ್ತದೆ. ಎಷ್ಟು ಜನರ ನಿತ್ಯ ಜೀವನದ ದಿಕ್ಕನ್ನು ನಾನಾ ವಿಧವಾಗಿರುವ ಪ್ರವೃತ್ತಿಗಳಿಗೆ ಮೂಲಭೂತ ಉದ್ದೇಶವಾಗಿದೆ. ನಾನು ಅದನ್ನು ಪಡೆಯಬೇಕು ಎಂಬ ಎಷ್ಟು ಕಷ್ಟಪಟ್ಟು ಹಣ ಗಳಿಸಿ ಒದ್ದಾಡಿ ವಿಷಯಗಳ ಸೇವನೆಯನ್ನು ಮಾಡಬೇಕು ಎಂದು ಮನುಷ್ಯ ಪ್ರಯತ್ನ ಪಡುತ್ತಾನೆ ಅಂತಹ ನಾನಾ ವಿಷಯಗಳು ಇದ್ದರೂ ಆ ಲಕ್ಷ್ಮೀದೇವಿಯನ್ನು ಮೊದಲು ಮಾಡಿಕೊಂಡು ತೃಣಜೀವವಿರುವ ಚೇತನ ಆಚೇತನಗಳು ಆ ಮನಸ್ಸನ್ನು ಆ ಭಗವಂತನ ಮನಸ್ಸನ್ನು ಸೆಳೆಯಲು ಸಾಧ್ಯವಿಲ್ಲ. ಹೀಗಾಗಿ ಅದ್ಭುತವಾದ ವೈರಾಗ್ಯ ಯಾವುದರಲ್ಲೂ ಆಸಕ್ತಿ ಇಲ್ಲ. ಆದರೆ ಅತ್ಯಂತ ಆಸಕ್ತಿ ಇದ್ದವರಂತೆ ಎಲ್ಲವರೊಂದಿಗೂ ವ್ಯವಹಾರ ಮಾಡುತ್ತಾನೆ. ಭಗವಂತನಿಗೆ ಮಾತ್ರ ಯಾವದರಲ್ಲೂ ರಾಗವಿಲ್ಲ, ಅಂತಹ ವಿರಾಗ. ಪರಮಾತ್ಮ ಆದುದರಿಂದ ಅವನಿಗೆ ಜ್ಞಾನ ವೈರಾಗ್ಯ ಈ ಆರು ಗುಣಗಳಿಗೆ `ಷ' ಎನ್ನುತ್ತಾರೆ. ಇದು ಪರಿಪೂರ್ಣವಾಗಿ ಭಗವಂತನಲ್ಲಿ ಇರುವುದರಿಂದ ಅವನು ಪುರುಷ. ಪೂರ್ಣವಾದ ಷಡ್ಗುಣಗಳು ಇರುವಂತಹ ಪರಮಾತ್ಮ. ಇಂತಹ ಪರಮಾತ್ಮ ನಮ್ಮ ನಿಮ್ಮೆಲ್ಲರ ದೇಹದ ಹೃದಯದ ಒಳಗೆ ಜೀವಸ್ವರೂಪನಾಗಿ ಭಗವಂತ ಉಂಟು ಅದಕ್ಕಾಗಿ ಅವನಿಗೆ ಪುರುಷನೆನ್ನುತ್ತಾರೆ.

Next Article