ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಶಾಲಾ ಪ್ರವೇಶದ ಮಿಥ್ಯೆಗಳು

03:56 AM Jun 14, 2024 IST | Samyukta Karnataka

ಶಿಕ್ಷಣ ಸಾರ್ವತ್ರೀಕರಣವಾಗುತ್ತಿರುವ ಈ ಹೊತ್ತಲ್ಲಿ ಪಾಲಕರು ಶಾಲಾ ಪ್ರವೇಶಾತಿ ಮಿಥ್ಯೆಗಳ ಅರಿಯದೇ ದೊಡ್ಡ ದೊಡ್ಡ ಜಾಹೀರಾತು ಫಲಕಗಳನ್ನು ನೋಡಿ ಶಾಲಾ ಪ್ರವೇಶಕ್ಕೆ ಮುಗಿಬೀಳುತ್ತಾರೆ. ಹಳ್ಳಕ್ಕೂ ಬೀಳುತ್ತಾರೆ.
ಯಾವ ಶಾಲಾ ಆಡಳಿತ ಮಂಡಳಿಗಳು ಶಾಲೆಗಳನ್ನು ನಡೆಸುವುದು ಕಲಿಕಾರ್ಥಿ ಆಸಕ್ತಿಗನುಸಾರವಾಗಿ ಇರಬೇಕಾಗಿತ್ತೋ ಆ ಶಾಲೆಗಳು ಮಕ್ಕಳ ಪ್ರವೇಶಾತಿಗಾಗಿ ಜಾತಿ, ಧರ್ಮ, ಭಾಷೆ, ಸ್ಥಳ, ದೇಶಗಳ ಆಧಾರಿತ ಹುಸಿ ಕಲ್ಪನೆಗಳ ಬಿಂಬಗಳ ದೆಹಲಿ, ಬೆಂಗಳೂರು, ಅಮೇರಿಕನ್, ಲಂಡನ್ ಪಬ್ಲಿಕ್ ಶಾಲೆಗಳು, ಕೇಂಬ್ರಿಡ್ಜ್, ಆಕ್ಸ್ಫರ್ಡ್, ಮದರ್ ಥೇರೆಸಾ, ಬಾಪೂಜಿ ಅಂಬೇಡ್ಕರ್, ಜವಾಹರ ಮುಂತಾದ ಅಂತರಾಷ್ಟ್ರೀಯ, ರಾಷ್ಟ್ರೀಯ ಶಾಲೆಗಳ ಪ್ರಸಿದ್ಧ ಹೆಸರುಗಳನ್ನು ಬಳಿಸಿಕೊಂಡು ಮಕ್ಕಳ ಮನಸ್ಸನ್ನು ಸೀಳಿ ಪಾಲಕರ ಹಣವನ್ನು ವಸೂಲಿ ಮಾಡುತ್ತಿವೆ.
ಶಾಲಾ ಆಡಳಿತ ಮಂಡಳಿಗಳ ಜಾಹೀರಾತು ಫಲಕಗಳು ದೊಡ್ಡ ದೊಡ್ಡ ಕಟ್ಟಡಗಳ ಚಿತ್ರಗಳ, ಗ್ರಾಫಿಕ್‌ಗಳ ಫ್ಲೇಕ್ಸ್‌ಗಳನ್ನು ಬಳಸಿಕೊಂಡು ಪಾಲಕರನ್ನು ಮರಳು ಮಾಡುತ್ತಾರೆ. ಇಲ್ಲದ ಕಟ್ಟಡಗಳನ್ನು ತೋರಿಸಿ ಕಟ್ಟಡಕ್ಕಾಗಿ ದೇಣಿಗೆ ಹಣ ವಸೂಲಿ ಮಾಡುತ್ತಾರೆ.
ಮಕ್ಕಳನ್ನು ಡಾಕ್ಟರ್‌, ಎಂಜನಿಯರ‍್ಸ್, ವಿಜ್ಞಾನಿಗಳಂತೆ ಬಿಂಬಿಸುವ ಮೈಕ್ರೋಸ್ಕೋಪ್, ಟೆಲೆಸ್ಕೋಪ್, ಕಂಪ್ಯೂಟರ್ ಮುಂತಾದ ಉಪಕರಣಗಳನ್ನು ಬಳಸಿಕೊಂಡ ವಿವಿಧ ಭಂಗಿಗಳ ಮುದ್ದು ಮುದ್ದಾದ ಮಕ್ಕಳ ಚಿತ್ರಗಳು ಪಾಲಕರಲ್ಲಿ ತಮ್ಮ ಮಕ್ಕಳ ಬಗೆಗೆ ಹುಸಿ ಕನಸುಗಳನ್ನು ಶುರು ಹತ್ತಿಸುವರು. ವಾಸ್ತವದಲ್ಲಿ ಅಲ್ಲಿ ಹೋಗಿ ನೋಡಿದರೆ ಒಂದು ಸರಿಯಾದ ಟೆಸ್ಟ್ಯೂಬ್ ಕೂಡಾ ಇರುವುದಿಲ್ಲ.
ವಿವಿಧ ಭಂಗಿಗಳ ಕ್ರೀಡಾತಾರೆಗಳನ್ನು ಹೊಂದಿದ ವಿವಿಧ ಕ್ರೀಡಾ ಮೈದಾನಗಳ, ಮಕ್ಕಳ ಕಲರವ ಬಿಂಬಿಸುವ ಚಿತ್ರಗಳನ್ನು ತೋರಿಸಿ ಸುಸಜ್ಜಿತ ಕ್ರೀಡಾಂಗಣದ ಚಿತ್ರವಿರುವ ಪ್ಲೇಕ್ಸ್ ಹಾಕಿದ್ದನ್ನು ನೋಡಿದ ಪಾಲಕರು ಪುಳಕಗೊಳ್ಳುತ್ತಾರೆ. ಆದರೆ ಆ ಶಾಲೆಯ ಹೊರಾಂಗಣ ದೇಶಿಯ ಆಟಗಳಾದ ಲಗೋರಿ, ಚಿನಿದಾಂಡು, ಕಬಡ್ಡಿ, ಖೊಖೋ ಆಟದ ಮೈದಾನಗಳಿರುವುದಿಲ್ಲ. ಅಷ್ಟೇ ಏಕೆ ಮಕ್ಕಳು ಊಟ ಮಾಡಲು ಸ್ಥಳಕ್ಕೆ ಪರದಾಡುವ ಸ್ಥಿತಿ ಇರುತ್ತದೆ. ಇಂತಹ ಸ್ಥಿತಿ ಇದ್ದರೂ ಶಾಲಾ ಆಡಳಿತ ಮಂಡಳಿಗಳು ಪಾಲಕರಿಗೆ ಭ್ರಮೆ ಹುಟ್ಟಿಸುತ್ತಾರೆ.
ಶಾಸ್ತ್ರೀಯ ಕ್ರಮದಲ್ಲಿ ಶಾಲೆಗಳವರು ಪಾಠಪ್ರವಚನಗಳ ನಡೆಸುವುದು ಮುಖ್ಯ. ಆದರೆ ಶಾಲಾ ಆಡಳಿತ ಮಂಡಳಿಗಳು ಕಡಿಮೆ ವೇತನಕ್ಕಾಗಿ ದುಡಿಯುವ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿಗಳಲ್ಲಿ ಫೇಲಾದ ಅಧ್ಯಾಪಕರನ್ನು ಬಳಸಿಕೊಳ್ಳುತ್ತಾರೆ. ಅವರಿಗೆ ಕಲಿಕಾ ವಿಧಾನಗಳು, ಬೋಧನಾ ಯೋಜನೆ, ವಿದ್ಯಾರ್ಥಿ ಶಕ್ತಿ ಸಾಮರ್ಥ್ಯ ಅರಿಯುವ ಮನೋವಿಜ್ಞಾನ ಇವುಗಳ ಯಾವ ಅರಿವಿಲ್ಲದ ಅಧ್ಯಾಪಕರನ್ನು ಇಟ್ಟುಕೊಂಡು ಲಕ್ಷ-ಲಕ್ಷ ಹಣ ಬಾಚುತ್ತಾರೆ ಇದಕ್ಕೆ ಲಗಾಮು ಬೇಡವೇ?
ಶಾಲೆ ಮಕ್ಕಳಿಗೆ ಸುರಕ್ಷಿತ ತಾಣವಾಗಿರಬೇಕು. ಆದರೆ ಇಂದು ಹಾಗಾಗುತ್ತಿಲ್ಲ. ಇತೀಚೆಗೆ ಶಾಲೆಯ ಮುಖ್ಯಶಿಕ್ಷಕರೇ ೭ನೇ ತರಗತಿಯ ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ಬಳಸಿಕೊಂಡು ಗರ್ಭವತಿಯನ್ನಾಗಿಸಿದಂತಹ ಸಂಗತಿಗಳು ದಿನನಿತ್ಯ ಪತ್ರಿಕೆಗಳಲ್ಲಿ ನೋಡುವಂತಾಗಿದೆ.
ಪ್ರಸ್ತುತ ವಿದ್ಯಾದಾನ ಮಾಡುವ ಸ್ಥಳಗಳು ಮಾರುಕಟ್ಟೆ ಸ್ಥಳಗಳಾಗಿ ಪರಿಣಮಿಸಿರುವುದರಿಂದ ಪಾಲಕರು ಗಂಭೀರವಾಗಿ ಯೋಚಿಸಿ ತಮ್ಮ ಮಕ್ಕಳಿಗೆ ಶಾಲೆಗಳನ್ನು ಆಯ್ಕೆ ಮಾಡಬೇಕಾಗಿದೆ. ಆಯ್ಕೆ ಮಾಡಿಕೊಳ್ಳುವ ಶಾಲೆಗೆ ಒಂದು ದೂರದೃಷ್ಠಿ ಇರಬೇಕು. ರಾಷ್ಟ್ರ, ರಾಜ್ಯದ ನೀತಿಗಳು ಆ ಶಾಲೆಗಳಲ್ಲಿ ಅನುಷ್ಠಾನಗೊಳ್ಳುತ್ತಾ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ವೈವಿಧ್ಯತೆಗೆ ಗೌರವ, ಮಕ್ಕಳ ಹಕ್ಕುಗಳು ಶಾಲಾ ದೃಷ್ಟಿಕೋನದ ಭಾಗವಾಗುವಂತೆ ಇರಬೇಕು.
ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವವರ ವರ್ತನೆ, ಆಲೋಚನೆ, ಭಾವನೆಗಳು ನಿರೀಕ್ಷಿತ ರೀತಿಯಲ್ಲಿ ಇರಬೇಕಾಗುತ್ತದೆ. ಶಾಲೆ ರೂಪಿಸುವ ನೀತಿ ನಿಯಮಗಳು, ಮೌಲ್ಯಗಳು, ನಂಬಿಕೆಗಳು ಆ ಶಾಲೆಯ ಸಾಂಸ್ಕೃತಿಕ ಅಂಶಗಳ ಮೊತ್ತವಾಗಿರುತ್ತದೆ. ಇದು ಮಗುವಿನ ವಿಕಾಸಕ್ಕೆ ಬಹಳ ಮುಖ್ಯ. ಆಂತಹ ಶಾಲೆ ಇದಾಗಿದೆಯೇ? ಯೋಚಿಸಬೇಕು. ಮಕ್ಕಳ ಶಾಲಾ ಪ್ರವೇಶದ ಸಂದರ್ಭದಲ್ಲಿ ಮಕ್ಕಳ ಅಗತ್ಯಗಳನ್ನು ಒದಗಿಸುವ, ಜವಾಬ್ದಾರಿಗಳನ್ನು ತೋರುವುದನ್ನು ಕಲಿಸುವ ಶಾಲೆ ಅದಾಗಿದ್ದು ಮಕ್ಕಳಬಾಳಿಗೆ ಬೆಳಕು ನೀಡುವ ವಿದ್ಯಾಮಂದಿರಾಗಿರಬೇಕು ಎಂಬುದನ್ನು ಮನದಟ್ಟು ಮಾಡಿಕೊಂಡು ಮಕ್ಕಳ ಶಾಲೆಯ ಪ್ರವೇಶಕ್ಕೆ ನಿರ್ಧರಿಸಬೇಕು. ಶಾಲಾ ಪ್ರವೇಶದ ಮಿಥ್ಯೆಗಳಿಗೆ ಮಾರು ಹೋಗಬಾರದು.

Next Article