ಶಿರೂರು ಗುಡ್ಡ ಕುಸಿತ: ಕೇರಳ ಮೂಲದ ಅರ್ಜುನ್ ಲಾರಿ ಕೊನೆಗೂ ಪತ್ತೆ
03:57 PM Sep 21, 2024 IST
|
Samyukta Karnataka
ಕಾರವಾರ: ಶಿರೂರು ಗುಡ್ಡಕುಸಿತದ ಸಂದರ್ಭದಲ್ಲಿ ಗಂಗಾವಳಿ ನದಿಯಲ್ಲಿ ಮುಳುಗಡೆಯಾಗಿದ್ದ ಕೇರಳ ಮೂಲದ ಅರ್ಜುನನ ಲಾರಿ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಜುಲೈ 16 ರಂದು ಭೂ ಕುಸಿತ ಅವಘಡ ಸಂಭವಿಸಿ ಈಗ ಎರಡು ತಿಂಗಳು ಕಳೆದಿದ್ದು, ಇದೀಗ ಮೂರನೇ ಹಂತದ ಕಾರ್ಯಚರಣೆ ನಡೆಸಲಾಗುತ್ತಿದ್ದು. ಮುಳುಗು ತಜ್ಞ ಈಶ್ವರ ಮಲ್ಪೆ ಇಂದು ಸಹ ಶೋಧ ನಡೆಸಿದ್ದಾರೆ. ಈ ವೇಳೆ ನದಿಯಲ್ಲಿ ಲಾರಿ ಇರುವ ಬಗ್ಗೆ ಮುಳುಗು ತಜ್ಞ ಈಶ್ವರ ಮಲ್ಪೆ ಖಚಿತ ಪಡಿಸಿದ್ದು, ಲಾರಿಗೆ ಹಗ್ಗೆ ಕಟ್ಟಿ ಇಡಲಾಗಿದೆ. ಹೆಚ್ಚಿನ ಶೋಧದ ಬಳಿಕ ಲಾರಿ ಇರುವುದು ಖಚಿತವಾಗಬೇಕಿದೆ. ಈ ಬಗ್ಗೆ ಉತ್ತರ ಕನ್ನಡ ಜಿಲ್ಲಾಡಳಿತ ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಾಗಿದೆ.
ಶಿರೂರು ಗುಡ್ಡಕುಸಿತದಿಂದ ಹೆದ್ದಾರಿ ಬದಲಿಯಲ್ಲಿದ್ದ ಹೋಟೆಲ್ ಸಮೇತ ಲಾರಿಯೂ ಗಂಗಾವಳಿ ನದಿಯ ಪಾಲಾಗಿತ್ತು. ದುರ್ಘಟನೆಯಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಅರ್ಜುನ್ ಲಾರಿ, ಇಂದು ನಡೆಸಿದ 3ನೇ ಹಂತದ ಶೋಧ ಕಾರ್ಯಾಚರಣೆಯಲ್ಲಿ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ.
Next Article