ಸಂಪ್ರದಾಯಕ್ಕೆ ಅಡಿಪಾಯ ಹಾಕಿದ್ದೆ ತಮ್ಮ ಸರ್ಕಾರ
ನಾವು ನಮ್ಮ ಸಾಧನೆಯನ್ನು ಹೇಳುವ ಎದೆಗಾರಿಕೆ ಹೊಂದಿದ್ದೇವೆ. ಯಾಕೆಂದರೆ ನಮ್ಮ ಕೆಲಸ ನಮ್ಮ ಸಾಧನೆಯನ್ನು ತೋರಿಸುತ್ತದೆ. ಅದಕ್ಕೆ ಯಾವುದೇ ಹಿಂಜರಿಕೆ ಇಲ್ಲ. ತಮಗೆ ಯಾವುದೇ ಮಾಹಿತಿಯೇ ಇಲ್ಲದೆ , ಯಾವುದರ ಬಗ್ಗೆಯೂ ಸಂಪೂರ್ಣ ಮಾಹಿತಿಯನ್ನೂ ಪಡೆಯದೇ, ಅಧ್ವಾನ , ಅವಾಂತರ ಮಾಡಿಕೊಂಡಿದ್ದಿರಿ
ಬೆಂಗಳೂರು: ಎಲ್ಲ ರೀತಿಯ ಅಧ್ವಾನ , ಅವಾಂತರಗಳಿಗೆ ತಮ್ಮ ಸರ್ಕಾರದ ಆಡಳಿತ ಎಂದು ನಾವು ಪದೇ ಪದೇ ತಿಳಿಸಲೇಬೇಕಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಸಾರಿಗೆ ಇಲಾಖೆಯಲ್ಲಿನ ಯಾವುದೇ ಸಣ್ಣ ಆಡಳಿತಾತ್ಮಕ ವಿಷಯಗಳಿಗೂ ಕರ್ನಾಟಕ ಬಿಜೆಪಿ ನಾಯಕರುಗಳು ಟ್ವೀಟ್ ಮಾಡಿ ಪ್ರಚಾರಗಿಟ್ಟಿಸಿಕೊಳ್ಳಲು ಹೋಗಿ ಮುಖಭಂಗ ಅನುಭವಿಸುವುದು ಈಗಾಗಲೇ ಜಗಜ್ಜಾಹೀರವಾಗಿದೆ.
ಇದರೊಂದಿಗೆ ಮತ್ತೊಂದು ವಿಷಯ ಸೇರ್ಪಡೆ ಅದೇನೆಂದರೆ, ಇವರ ಆಡಳಿತಾವಧಿಯಲ್ಲಿ ಸಾರಿಗೆ ಸಚಿವರಾಗಿ ಕಾರ್ಯ ನಿರ್ವಹಿಸಿದರವರ ಅದಕ್ಷತೆಯನ್ನು ಬಯಲು ಮಾಡುವ ಸದುದ್ದೇಶ ಇರಬಹುದೇನೋ? ಸಿಬ್ಬಂದಿಗಳ ಸಮವಸ್ತ್ರಕ್ಕೆ ಸಂಬಂಧಪಟ್ಟಂತೆ ಟ್ಟೀಟ್ ಮಾಡಿರುವ
ಸಿ. ಟಿ. ರವಿ ಅವರೇ , ಮಾರ್ಚ್ 2020 ರಿಂದ ಸಮವಸ್ತ್ರ ಬದಲು ನಗದು ನೀಡುವ ಸಂಪ್ರದಾಯಕ್ಕೆ ಅಡಿಪಾಯ ಹಾಕಿದ್ದೆ ತಮ್ಮ ಬಿ.ಜೆ.ಪಿ ಸರ್ಕಾರದ ಆಡಳಿತದ ಅವಧಿಯಲ್ಲಿ, ಅದೇ ಇಲ್ಲಿಯವರೆಗೂ ಮುಂದುವರೆದಿದೆ. ಅದಕ್ಕೂ ಮೊದಲು ಆಡಳಿತಾತ್ಮಕ ಕಾರಣಗಳಿಂದಾಗಿ ತಡವಾಗಿಯಾದರೂ ಸರಿ ಸಮವಸ್ತ್ರವನ್ನೇ ನೀಡುವ ಪದ್ಧತಿಯಿತ್ತು. ಎಲ್ಲ ರೀತಿಯ ಅಧ್ವಾನ , ಅವಾಂತರಗಳಿಗೆ ತಮ್ಮ ಸರ್ಕಾರದ ಆಡಳಿತ ಎಂದು ನಾವು ಪದೇ ಪದೇ ತಿಳಿಸಲೇಬೇಕಾಗಿದೆ. ಬಿ.ಜೆ.ಪಿಯ ಅದಕ್ಷ ಆಡಳಿತದ ಫಲಶ್ರುತಿ ಸಾರಿಗೆ ಸಂಸ್ಥೆಗಳ ಮೇಲೆ ₹5900 ಕೋಟಿ ಸಾಲದ ಹೊರೆ- ಇದರಿಂದ ಇಂದಿಗೂ ಆರ್ಥಿಕ ಸಂಕಷ್ಟದಿಂದ ಸಂಸ್ಥೆಗಳು ನಲುಗುತ್ತಿವೆ. ಬಿ.ಜೆ.ಪಿಯ ಅವಧಿಯಲ್ಲಿ ಸಾರಿಗೆ ಸಿಬ್ಬಂದಿಗಳಿಗೆ ಅರ್ಧ ವೇತನ, ಕೆಲವೊಮ್ಮೆ ತಿಂಗಳ ಕೊನೆಯವರೆಗೂ ವೇತನ ನೀಡಲಾಗುತ್ತಿತ್ತು. ವೇತನಕ್ಕೆ ನಿಗದಿತ ದಿನಾಂಕವೇ ಇರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಕೆ ಎಸ್ ಆರ್ ಟಿ ಸಿ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳಲ್ಲಿ ತಿಂಗಳ ಮೊದಲ ದಿನವೇ ವೇತನ ಪಾವತಿ ಹಾಗೂ ಇತರೆ ಎರಡು ನಿಗಮಗಳಲ್ಲಿ 7ನೇ ತಾರೀಖಿನಂದು ವೇತನ ಪಾವತಿಯಾಗುತ್ತಿದೆ. ಕಳೆದ 4 ವರ್ಷಗಳ ಕೆ ಎಸ್ ಆರ್ ಟಿ ಸಿ ನಿಗಮದ ಆದಾಯದ ವಿವರ ನೋಡಿದರೆ ಸಂಸ್ಥೆಯು ಯಾವ ದಾರಿಯಲ್ಲಿ ಸಾಗಿದೆ ಎಂಬುದು ತಿಳಿಯುತ್ತದೆ.
2020 - ₹1569 ಕೋಟಿ
2021 - ₹2037 ಕೋಟಿ
2022- ₹3349 ಕೋಟಿ
2023 - ₹3930 ಕೋಟಿ ಹೌದು ! ನಾವು ನಮ್ಮ ಸಾಧನೆಯನ್ನು ಹೇಳುವ ಎದೆಗಾರಿಕೆ ಹೊಂದಿದ್ದೇವೆ. ಯಾಕೆಂದರೆ ನಮ್ಮ ಕೆಲಸ ನಮ್ಮ ಸಾಧನೆಯನ್ನು ತೋರಿಸುತ್ತದೆ. ಅದಕ್ಕೆ ಯಾವುದೇ ಹಿಂಜರಿಕೆ ಇಲ್ಲ. ತಮಗೆ ಯಾವುದೇ ಮಾಹಿತಿಯೇ ಇಲ್ಲದೆ , ಯಾವುದರ ಬಗ್ಗೆಯೂ ಸಂಪೂರ್ಣ ಮಾಹಿತಿಯನ್ನೂ ಪಡೆಯದೇ, ಪೂರ್ವಾಗ್ರಹ ಪೀಡಿತರಾಗಿ ಟ್ಟೀಟ್ ಮಾಡುವ ಕಾರ್ಯವು ಪ್ರವೃತ್ತಿಯಾಗಿ ಮಾರ್ಪಟ್ಟಿರುವುದು ನಿಜಕ್ಕೂ ವಿಷಾದನೀಯ ಎಂದಿದ್ದಾರೆ, ಈ ಪೋಸ್ಟ್‌ನ ಕೊನೆಯಲ್ಲಿ ಇನ್ನಾದರೂ ಸಮಯೋಚಿತವಾಗಿ, ಸಂಪೂರ್ಣ ಮಾಹಿತಿಯೊಂದಿಗೆ ಮಾತನಾಡಬಹುದು ಎಂಬ ಆಶಯದೊಂದಿಗೆ… ಎಂದು ತಮ್ಮ ಪೋಸ್ಟ್‌ಲ್ಲಿ ಬರೆದಿದ್ದಾರೆ.