For the best experience, open
https://m.samyuktakarnataka.in
on your mobile browser.

ಸಂಯುಕ್ತ ಕರ್ನಾಟಕದ ಮೂವರು ಸೇರಿದಂತೆ ೬೫ ಪತ್ರಕರ್ತರಿಗೆ ಪ್ರಶಸ್ತಿ

10:52 PM Jan 14, 2025 IST | Samyukta Karnataka
ಸಂಯುಕ್ತ ಕರ್ನಾಟಕದ ಮೂವರು ಸೇರಿದಂತೆ ೬೫ ಪತ್ರಕರ್ತರಿಗೆ ಪ್ರಶಸ್ತಿ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ ವಾರ್ಷಿಕ ಪ್ರಶಸ್ತಿಗೆ ಸಂಯುಕ್ತ ಕರ್ನಾಟಕದ ಮೂವರು ವರದಿಗಾರರು ಸೇರಿದಂತೆ ೬೫ ಪತ್ರಕರ್ತರು ಭಾಜನರಾಗಿದ್ದಾರೆ.
ಸಂಯುಕ್ತ ಕರ್ನಾಟಕದ ಗದಗದ ವರದಿಗಾರ ದಿಗಂಬರ ಮುರಳೀಧರ ಪೂಜಾರ್ ಅವರು ಅತ್ಯುತ್ತಮ ಗ್ರಾಮಾಂತರ ವರದಿಗಾಗಿ ಜಿ.ನಾರಾಯಣಸ್ವಾಮಿ ಪ್ರಶಸ್ತಿ, ಚನ್ನರಾಯಪಟ್ಟಣದ ದಿಡಗದ ಬಿಡಿಸುದ್ದಿಗಾರ ಪುಟ್ಟರಾಜು ಅವರು ರೈತಾಪಿ ಜನರ ಸಮಸ್ಯೆಯ ವರದಿಗಾಗಿ ತಗಡೂರು ಕಮಲಮ್ಮ ವೀರೇಗೌಡ ಪ್ರಶಸ್ತಿ ಹಾಗೂ ರಾಯಚೂರು ಜಿಲ್ಲೆಯ ಹಟ್ಟಿಯ ವರದಿಗಾರ ಸಿದ್ದನಗೌಡ ಎಚ್. ಪಾಟೀಲ್ ಅವರು ಗ್ರಾಮೀಣ ಜನ-ಜೀವನದ ಅತ್ಯುತ್ತಮ ವರದಿಗಾಗಿ ಮುಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದೇ ವೇಳೆ ಮುದ್ರಣ ಮಾಧ್ಯಮದಲ್ಲಿ ೨೪ ವಿವಿಧ ಪ್ರಶಸ್ತಿಗಳು, ವಿದ್ಯುನ್ಮಾನ ಮಾಧ್ಯಮದ ಪ್ರಶಸ್ತಿಯ ಜತೆಗೆ ಹನ್ನೊಂದು ಪತ್ರಕರ್ತರಿಗೆ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಹಿರಿಯ ಪತ್ರಕರ್ತರಾದ ಮುರುಳೀಧರ್ ಡಿ.ಪಿ, ಪದ್ಮ ನಾಗರಾಜ್, ಮುಮ್ತಾಜ್ ಅಲೀಂ, ಕೆ.ಆರ್.ರೇಣು, ವೇಣುಗೋಪಾಲ್, ರೋನ್ಸ್ ಬಂಟ್ವಾಳ, ಶರಣಬಸಪ್ಪ ಜಿಡಗ, ಅಲ್ಲಮಪ್ರಭ ಮಲ್ಲಿಕಾರ್ಜುನಮ ಮೊಹಮದ್ ಯೂನಸ್, ದಾವಣಗೆರೆಯ ಎಸ್.ಕೆ.ಒಡೆಯರ್ ಮತ್ತು ಹುಬ್ಬಳ್ಳಿಯ ಗುರುರಾಜ ಹೂಗಾರ್ ಅವರಿಗೆ ವಿಶೇಷ ಪ್ರಶಸ್ತಿ ಘೋಷಿಸಲಾಗಿದೆ. ತುಮಕೂರಿನಲ್ಲಿ ಜನವರಿ ೧೮ ಮತ್ತು ೧೯ರಂದು ನಡೆಯಲಿರುವ ೩೯ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರು: ಚಂದ್ರಶೇಖರ ಮುಕ್ಕುಂದಿ, ದಿಗಂಬರ ಮುರಳೀಧರ ಪೂಜಾರ್, ಪ್ರಸನ್ನ ಮನೋಹರ ಕುಲಕರ್ಣಿ, ಮಂಜುನಾಥ್.ಕೆ., ಶಕೀಲ ಚೌದರಿ, ಕೆ.ಓಂಕಾರಮೂರ್ತಿ, ಸಿದ್ದು ಆರ್.ಜಿ.ಹಳ್ಳಿ, ಕಾಯಪಂಡ ಶಶಿ ಸೋಮಯ್ಯ, ಪುನೀತ್ ಸಿ.ಟಿ., ಅಪ್ಪಾರಾವ್ ಸೌದಿ, ರಮೇಶ್ ದೊಡ್ಡಪುರ, ಕೋಡಿಬೆಟ್ಟು ರಾಜಲಕ್ಷ್ಮಿ, ನಾರಾಯಣ ರೈ ಕುಕ್ಕುವಳ್ಳಿ, ಪುಟ್ಟರಾಜು, ಮರಿದೇವರು ಹೂಗಾರ್, ಗುರುಪ್ರಸಾದ್ ತುಂಬಸೋಗೆ, ಹರಿಪ್ರಸಾದ್ ನಂದಳಿಕೆ, ರೇಣುಕೇಶ್, ಎಂ., ಶಿವು ಹುಣಸೂರು, ಡಿ.ಎನ್.ತಿಪ್ಪೇಸ್ವಾಮಿ,ಗಜಾನನ ಹೆಗಡೆ ಚಿಟ್ಟನ್ನೆ, ಕೇಶವಮೂರ್ತಿ ವಿ.ಬಿ, ನಜೀರ್ ಅಹಮದ್, ರವಿ ಬಿದನೂರು ಸಿದ್ಧನಗೌಡ ಎಚ್ ಪಾಟೀಲ್, ಡಿ.ಬಿ.ಬಸವರಾಜು, ಶಿವಾನಂದ, ಮುತ್ತುರಾಜ್, ಕೆ.ಎಸ್.ನಾಗರಾಜ್, ನಂದೀಶ್ ದುಗಡಿ.,ಹುಡೇಂ ಕೃಷ್ಣಮೂರ್ತಿ, ವಿಜಯ ಬಾಸ್ಕರರೆಡ್ಡಿ, ಜಯಂತಿ ಯು.ಎಂ., ಸಿದ್ದಯ್ಯ ಹಿರೇಮಠ, ಜನಾರ್ಧನ, ಉದಯವಾಣಿ, ವಿಜಯಕುಮಾರ್, ಷಣ್ಮುಖಪ್ಪ, ವಿಶ್ವಕುಮಾರ್, ಇ.ಆರ್., ಪಿ.ಶಿಲ್ಪ, ಅಕ್ಷಯ ಪಿ.ವಿ., ಶರಣ ಬಸವ ನೀರ ಮಾನ್ವಿ, ಪಿ.ರಾಮಸ್ವಾಮಿ ಕಣ್ವ, ಕೆ.ಎಸ್.ವಾಸು, ರವಿರಾಜ ಗಲಗಲಿ. ಮಾಲತೇಶ ಅರಸು, ಡಿ.ಜೆ.ಮಲ್ಲಿಕಾಜುನ, ನಂದನ್ ಪುಟ್ಟಣ್ಣ, ಅತೀಖುರ್ ರೆಹಮಾನ್, ಎಸ್.ಚರಣ್ ಬಿಳಿಗಿರಿ.ವಿದ್ಯುನ್ಮಾನ (ಟಿವಿ)ವಿಭಾಗ : ಅಜಿತ್ ಹನುಮಕ್ಕನವರ್, ಕೆ.ಪಿ.ನಾಗರಾಜ್, ವಿಜಯ್ ಜೆ.ಆರ್., ಸತೀಶ್ ಕುಮಾರ್ ಎಂ., ಮಂಜುನಾಥ್ ಕೆ.ಬಿ., ರಶ್ಮಿ ಶ್ರೀನಿವಾಸ ಹಳಕಟ್ಟಿ.