ಸಂಸದರಾಗಿಲ್ಲದಿದ್ದರೆ ಮಗನಾಗಿ ಸೇವೆ: ವರುಣ್ ಗಾಂಧಿ ಭಾವನಾತ್ಮಕ ಸಂದೇಶ
ಮುಂದೊಂದು ದಿನ ಈ ಭೂಮಿ ತನ್ನ ಕರ್ಮ ಭೂಮಿಯಾಗುತ್ತದೆ, ಇಲ್ಲಿನ ಜನರೇ ತನ್ನ ಕುಟುಂಬವಾಗುತ್ತಾರೆ ಎಂದು ಆಗ ಏನು ಗೊತ್ತಿತ್ತು ?
ದೆಹಲಿ: ಬಿಜೆಪಿ ಸಂಸದ ವರುಣ್ ಗಾಂಧಿ ತಮ್ಮ ಮತದಾರರಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಈ ಭೂಮಿ ತನ್ನ ಕರ್ಮ ಭೂಮಿ ಮಾತ್ರವಲ್ಲದೆ ತನ್ನ ಅಸ್ಮಿತೆಯ ಒಂದು ಭಾಗ, ಮೊದಲ ಬಾರಿ ತನ್ನ ತಾಯಿಯ ಬೆರಳು ಹಿಡಿದು ಪಿಲಿಭಿತ್‌ಗೆ ಬಂದ 3 ವರ್ಷದ ಪುಟ್ಟ ಬಾಲಕ ನನಗೆ ನೆನಪಿದೆ. ಮುಂದೊಂದು ದಿನ ಈ ಭೂಮಿ ತನ್ನ ಕರ್ಮ ಭೂಮಿಯಾಗುತ್ತದೆ, ಇಲ್ಲಿನ ಜನರೇ ತನ್ನ ಕುಟುಂಬವಾಗುತ್ತಾರೆ ಎಂದು ಆಗ ಏನು ಗೊತ್ತಿತ್ತು ? ಪಿಲಿಭಿತ್‌ನ ಮಹಾನ್ ಜನರಿಗೆ ವರ್ಷಗಳ ಕಾಲ ಸೇವೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ, ಜನ ಸೇವೆಯನ್ನು ಮುಂದುವರಿಸುವುದಾಗಿ ಪಣ ತೊಟ್ಟಿದ್ದು ಸಂಸದರಾಗಿಲ್ಲದಿದ್ದರೆ, ಮಗನಾಗಿ, ನನ್ನ ಜೀವನದುದ್ದಕ್ಕೂ ನಿಮ್ಮ ಸೇವೆ ಮಾಡಲು ನಾನು ಬದ್ಧನಾಗಿದ್ದೇನೆ ಮತ್ತು ನನ್ನ ಬಾಗಿಲುಗಳು ಮೊದಲಿನಂತೆ ನಿಮಗೆ ಯಾವಾಗಲೂ ತೆರೆದಿರುತ್ತವೆ ಎಂದು ವರುಣ್ ಗಾಂಧಿ ಹೇಳಿದ್ದಾರೆ.