ಸಂ.ಕ ನೌಕರ ಸಂಘದ ಅಧ್ಯಕ್ಷರಾಗಿ ವಿಲಾಸ ಜೋಶಿ ಅವಿರೋಧ ಆಯ್ಕೆ
11:05 PM Jan 08, 2025 IST
|
Samyukta Karnataka
ಹುಬ್ಬಳ್ಳಿ: ಸಂಯುಕ್ತ ಕರ್ನಾಟಕ ನೌಕರರ ಸಂಘದ (ಹುಬ್ಬಳ್ಳಿ, ದಾವಣಗೆರೆ ಮತ್ತು ಕಲಬುರ್ಗಿ ಆವೃತ್ತಿಯ) ನೂತನ ಅಧ್ಯಕ್ಷರಾಗಿ ಬೆಳಗಾವಿಯ ಮುಖ್ಯವರದಿಗಾರ ವಿಲಾಸ ಜೋಶಿ ಅವಿರೋಧವಾಗಿ ಆಯ್ಕೆಯಾದರು.
ಕಣದಲ್ಲಿದ್ದ ಇನ್ನೋರ್ವರು ತಮ್ಮ ನಾಮಪತ್ರವನ್ನು ವಾಪಸ್ಸು ತೆಗೆದುಕೊಂಡಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿ ವಿದ್ಯಾ ಕೊಡ್ಲೆಕೆರೆ ಅವರು ಈ ಘೋಷಣೆ ಮಾಡಿದರು.
ನಂತರ ಗೌರವಾಧ್ಯಕ್ಷರಾಗಿ ಸುಧೀಂದ್ರ ಹುಲಗೂರ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಯರಿಬೈಲ್ ಅವರನ್ನು ನೇಮಕ ಮಾಡಲಾಯಿತು.
Next Article