ಸಮಾನ ಅವಕಾಶ ಸಿಕ್ಕಾಗ ಮಾತ್ರ ನಿಜವಾದ ಸ್ವಾತಂತ್ರ್ಯ
01:02 PM Sep 13, 2024 IST | Samyukta Karnataka
ಧಾರವಾಡ: ಎಲ್ಲರಿಗೂ ಶಿಕ್ಷಣ, ಸಮಾನ ಅವಕಾಶಗಳು ಸೀಗಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಹೋರಾಡಬೇಕಿದೆ ಎಂದು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಕರೆ ನೀಡಿದರು.
ಧಾರವಾಡ ತಾಲ್ಲೂಕಿನ ಗುಳೇದಕೊಪ್ಪ ಗ್ರಾಮದಲ್ಲಿ ಸೆ. ೧೨ ರಂದು (ಗುರುವಾರ ರಾತ್ರಿ) ಶ್ರೀ ಈಶ್ವರ ಯುವಕ ಮಂಡಳದಿಂದ ಆಯೋಜಿಸಲಾಗಿದ್ದ 10ನೇ ವರ್ಷದ ಗಣೇಶೋತ್ಸವ ನಿಮಿತ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮದ ಎಲ್ಲರೂ ಒಗ್ಗಟ್ಟಿನಿಂದ ಇಂತಹ ಕಾರ್ಯಕ್ರಮ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಇಂದು ನಡೆದ ಈ ಕಾರ್ಯಕ್ರಮ ಇತರರಿಗೂ ಮಾದರಿಯಾಗಿದೆ. ಸುತ್ತಮುತ್ತಲಿನ ಹತ್ತೂರು ಗ್ರಾಮದ ಜನರು ಸೇರಿಕೊಂಡು ಇಂತಹ ಸುಂದರ ಕಾರ್ಯಕ್ರಮ ಮಾಡಬೇಕು. ಇಂತಹ ಕಾರ್ಯಕ್ರಮ ಆಯೋಜನೆ ಮಾಡುವುದರಿಂದ ಇಡೀ ಗ್ರಾಮದ ನಾವೆಲ್ಲರೂ ಒಂದೇ ಎಂಬ ಅಭಿಪ್ರಾಯ ಮೂಡುತ್ತದೆ ಎಂದು ತಿಳಿಸಿದರು.