ಸರ್ಕಾರಕ್ಕೆ ಕೊಟ್ಟ ಮಾತು ಮರೆತು ಹೋಗಿದೆ
01:14 PM Jun 29, 2024 IST | Samyukta Karnataka
ಬೆಂಗಳೂರು: ಕಾಂಗ್ರೆಸ್ ಸರ್ಕಾರಕ್ಕೆ ಕೊಟ್ಟ ಮಾತು ಮರೆತು ಹೋಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ದಿಕ್ಕು ದೆಸೆಯಿಲ್ಲದ ನೀತಿಗಳಿಂದ ಪಾಪರ್ ಆಗಿರುವ ಕಾಂಗ್ರೆಸ್ ಸರ್ಕಾರದ ಬಳಿ ಸಂತ್ರಸ್ಥೆ ಕುಟುಂಬಕ್ಕೆ ಪರಿಹಾರ ನೀಡುವುದಕ್ಕೂ ದುಡ್ಡಿಲ್ಲ.!
ಹುಬ್ಬಳ್ಳಿಯಲ್ಲಿ ಕೊಲೆಗೀಡಾಗಿದ್ದ ಅಂಜಲಿ ಅಂಬಿಗೇರ ಮನೆಗೆ ಮೇ 20 ರಂದು ಡಾ. ಪರಮೇಶ್ವರ್ ಭೇಟಿ ನೀಡಿ, ಪರಿಹಾರದ ಭರವಸೆ ನೀಡಿದ್ದರು. ಚುನಾವಣೆ ನೀತಿ ಸಂಹಿತೆ ಮುಗಿದು ತಿಂಗಳು ಕಳೆಯುತ್ತಾ ಬಂದರೂ ಕಾಂಗ್ರೆಸ್ ಸರ್ಕಾರಕ್ಕೆ ಕೊಟ್ಟ ಮಾತು ಮರೆತು ಹೋಗಿದೆ.
ಬಣ್ಣ ಬಣ್ಣದ ಕಾಗೆ ಹಾರಿಸಿ ಜನರಿಗೆ ಟೋಪಿ ಹಾಕುವುದು, ವಿಶ್ವಾಸ ದ್ರೋಹ ಬಗೆಯುವುದೇ ಸಿದ್ದರಾಮಯ್ಯನವರ ಸರ್ಕಾರ ಕೊಡುವ ಗ್ಯಾರಂಟಿ. ಮೊದಲೇ ನೀಚಕೃತ್ಯದಿಂದ ನೊಂದಿರುವ ಸಂತ್ರಸ್ಥೆ ಕುಟುಂಬಕ್ಕೆ ಪರಿಹಾರ ನೀಡದಷ್ಟು ದಯನೀಯ ಸ್ಥಿತಿಗೆ ಸರ್ಕಾರ ತಲುಪಿರುವುದು ಕನ್ನಡಿಗರ ದೌರ್ಭಾಗ್ಯ ಎಂದಿದ್ದಾರೆ.