For the best experience, open
https://m.samyuktakarnataka.in
on your mobile browser.

ಸರ್ಕಾರದ ಭವಿಷ್ಯ ನ್ಯಾಯಾಲಯದ ತೀರ್ಮಾನದಲ್ಲಿ ಅಡಕ

04:08 PM Sep 08, 2024 IST | Samyukta Karnataka
ಸರ್ಕಾರದ ಭವಿಷ್ಯ ನ್ಯಾಯಾಲಯದ ತೀರ್ಮಾನದಲ್ಲಿ ಅಡಕ

ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಎಫ್‌ಐಆರ್ ದಾಖಲಾದರೆ ಸಿಎಂ ಸ್ಥಾನದಲ್ಲಿ ಅವರು ಮುಂದವರಿಯುವುದು ಅನುಮಾನ, ಮುಂದೆ ಸರ್ಕಾರ ಉಳಿಯುವ ಬಗ್ಗೆಯೂ ಖಚಿತತೆ ಇಲ್ಲ ಇದೆಲ್ಲವೂ ನ್ಯಾಯಾಲಯದ ತೀರ್ಪಿನ ಮೇಲೆ ಅವಲಂಬನೆಯಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಿಶ್ಲೇಷಿಸಿದ್ದಾರೆ.
ರವಿವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ವಿಚಾರದಲ್ಲಿ ಎಲ್ಲವೂ ನ್ಯಾಯಾಲಯದ ತೀರ್ಪಿನ ಮೇಲೆ ಅವಲಂಬಿಸಿದೆ. ನ್ಯಾಯಾಲಯದಲ್ಲೂ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಲು ತೀರ್ಪು ಬಂದರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬಹುದು ಅಥವಾ ಕೊಡಬೇಕಾಗಬಹುದು, ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಅಪೇಕ್ಷೆಪಡುವ ವ್ಯಕ್ತಿ ಸಿಎಂ ಆಗ್ತಾರಾ, ಅಥವಾ ಅವರ ಬೆಂಬಲಿಗರು ಸಿಎಂ ಆಗುವುದಕ್ಕೆ ಡಿ.ಕೆ. ಶಿವಕುಮಾರ ಹಾಗೂ ಎಂ.ಬಿ. ಪಾಟೀಲ ಅವಕಾಶ ನೀಡದಿದ್ದರೆ ಸರ್ಕಾರ ಎಷ್ಟರ ಮಟ್ಟಿಗೆ ಉಳಿಯುತ್ತದೆ ಎಂಬುದು ನ್ಯಾಯಾಲಯದ ತೀರ್ಮಾನವನ್ನು ಅವಲಂಬಿಸಿದೆ ಎಂದು ವಿಶ್ಲೇಷಿಸಿದರು. ಸಿಎಂ ಪರವಾಗಿ ಬೆಂಬಲಕ್ಕೆ ನಿಂತವರಿಗೆ ಸಿಎಂ ಆಗುವ ಹಂಬಲವಿದೆ, ಸಿದ್ದರಾಮಯ್ಯ ಆ ಸ್ಥಾನದಲ್ಲಿ ಉಳಿಯುವುದಿಲ್ಲ ಎಂದು ಕಾಂಗ್ರೆಸ್ಸಿನವರೇ ಅಂದುಕೊಂಡಿದ್ದಾರೆ ಎಂದು ಆರೋಪಿಸಿದರು.

Tags :