ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಟ್ಯೂಷನ್
10:54 PM Oct 18, 2024 IST
|
Samyukta Karnataka
ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಉಚಿತ ಟ್ಯೂಷನ್ ಹೇಳಿಕೊಡುವ ಯೋಜನೆ ಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಜಾರಿ ಗೊಳಿಸಿದೆ. ಶಾಲೆ ನಡೆಯುವ ದಿನಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ಒಂದೊಂದು ತಾಸು ಹೆಚ್ಚುವರಿಯಾಗಿ ಶಿಕ್ಷಕರು ಪಠ್ಯದಲ್ಲಿ ಹಿಂದುಳಿದ ಮಕ್ಕಳಿಗೆ ಟ್ಯೂಷನ್ ಹೇಳಿಕೊಡ ಬೇಕು ಎಂದು ಇಲಾಖೆ ಸೂಚಿಸಿದೆ. ೧ ರಿಂದ ೧೨ ನೇ ತರಗತಿಯಲ್ಲಿನ ಮಕ್ಕ ಳಿಗೆ ಇದು ಅನ್ವಯವಾಗುತ್ತದೆ. ಶಿಕ್ಷಕರು ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳನ್ನು ಗುರುತಿಸಿ ಆ ವಿಷಯದಲ್ಲಿ ನಡೆಯುವ ವಿಶೇಷ ತರಗತಿಗಳಿಗೆ ಮಕ್ಕಳನ್ನು ಕಳುಹಿಸುವ ಜವಾಬ್ದಾರಿ ಶಿಕ್ಷಕರದು ಎಂದು ಸೂಚಿಸಿದೆ.
Next Article