ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸರ್ವರ್ ಸಮಸ್ಯೆಗೆ ಬದಲಿ ವ್ಯವಸ್ಥೆ ಮಾಡಿ

10:27 AM Oct 25, 2024 IST | Samyukta Karnataka

ಬೆಂಗಳೂರು: ಪಡಿತರ ವಿತರಣೆಗೆ ಸಾಫ್ಟವೇರ್, ಸರ್ವರ್ ಸಮಸ್ಯೆ ಬಗೆಹರಿಯುವವರೆಗೂ ಬದಲಿ ವ್ಯವಸ್ಥೆ ಮಾಡಿ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ.
ಪಡಿತರ ವಿತರಣೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಚುನಾವಣೆಗೂ ಮುನ್ನ ಹತ್ತು ಕೆಜಿ ಅಕ್ಕಿ ಕೊಡುತ್ತೇವೆಂದು ಕರ್ನಾಟಕ ಕಾಂಗ್ರೆಸ್‌ ಕನ್ನಡಿಗರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂತು. ಇದೀಗ ಸಾಫ್ಟವೇರ್ ಸಮಸ್ಯೆ, ಸರ್ವರ್ ಸಮಸ್ಯೆ ಎಂಬ ಕುಂಟು ನೆಪ ಹೇಳಿ ಪ್ರಧಾನಿ ನರೇಂದ್ರ ಮೋದಿ ಅವರು ಕೊಡುತ್ತಿರುವ 5ಕೆಜಿ ಅಕ್ಕಿಯನ್ನೂ ಕೊಡದೆ ಸತಾಯಿಸುತ್ತಿದೆ ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ. ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಅವರೇ, ಬಡವರು ದಿನವಿಡೀ ಸರತಿ ಸಾಲಿನಲ್ಲಿ ನಿಂತು ಕಾದರೂ ಪಡಿತರ ಸಿಗುತ್ತಿಲ್ಲ ಅಂದರೆ ಏನರ್ಥ? ಪ್ರತಿ ತಿಂಗಳು 10-12ನೇ ತಾರೀಖಿನೊಳಗೆ ಪೂರ್ಣಗೊಳ್ಳುತ್ತಿದ್ದ ಪಡಿತರ ವಿತರಣೆ ಈ ಬಾರಿ ತಾರೀಖು 25 ಆದರೂ ಇನ್ನೂ ವಿತರಣೆ ಆಗಿಲ್ಲ ಅಂದರೆ ಬಡವರು ಏನು ತಿನ್ನಬೇಕು? ನಿಮ್ಮ ಸಾಫ್ಟವೇರ್, ಸರ್ವರ್ ಸಮಸ್ಯೆ ಬಗೆಹರಿಯುವವರೆಗೂ ಬದಲಿ ವ್ಯವಸ್ಥೆ ಮಾಡಿ ಒಂದೆರಡು ದಿನಗಳೊಳಗೆ ಪಡಿತರ ವಿತರಣೆ ಪೂರ್ಣಗೊಳಿಸಿ ಎಂದಿದ್ದಾರೆ.

Tags :
#APLCard#BPLCard#BPLCards#Fooddepartment#Karnataka#khmuniyappa#Ration#RationCard#Server#ಪಡಿತರ
Next Article