For the best experience, open
https://m.samyuktakarnataka.in
on your mobile browser.

ಸಾಮೂಹಿಕ ಚೈತನ್ಯ

05:16 AM Apr 06, 2024 IST | Samyukta Karnataka
ಸಾಮೂಹಿಕ ಚೈತನ್ಯ

ಭಾರತದ ಅತ್ಯಂತ ದಕ್ಷಿಣ ಭಾಗದಲ್ಲಿ ತನುಮಲಯನ್ ಎಂಬ ದೇವಸ್ಥಾನ, ದೇವಸ್ಥಾನಗಳ ಪಟ್ಟಣ ಶುಚೀಂದ್ರಂನಲ್ಲಿದೆ. ಇಲ್ಲಿ ಮನಸ್ಸಿನ ನಾಯಕನಾದ ಇಂದ್ರನು ಶುಚಿಯಾದನು. ಇಂದ್ರನೆಂಬ ಸಿದ್ಧಾಂತವು ಬಲು ಆಶ್ಚರ್ಯಕರವಾದುದು. ಇಂದ್ರನಿಗೆ ಸಾವಿರ ಕಣ್ಣುಗಳಿವೆ ಎಂದರೆ, ೫೦೦ ಜನರು ಒಂದಾಗಿ ಸೇರಿದಾಗ ಸಾಮೂಹಿಕ ಚೈತನ್ಯವುಂಟಾಗುತ್ತದೆ. ಕನಿಷ್ಠ ಪಕ್ಷ ಅಷ್ಟಾದರೂ ಇರಬೇಕು.
೫೦೦ ರಿಂದ ಎಷ್ಟಾದರೂ ಗುಣಾಕಾರಗೊಳ್ಳಬಹುದು. ಆದರೆ ೫೦೦ ಜನರಾದರೂ ಕನಿಷ್ಠ ಪಕ್ಷವಿದ್ದರೆ ಸಾಮೂಹಿಕ ಚೈತನ್ಯದ ಸೃಷ್ಟಿಯಾಗುತ್ತದೆ. ಒಂದು ಗುಂಪಿನ ಮನೋತತ್ವವನ್ನು ಅರಿತರೆ, ಎಲ್ಲ ಅಪರಾಧಗಳು ಅದರಿಂದಾಗಿಯೇ ಉಂಟಾಗುತ್ತದೆ. ಒಬ್ಬೊಂಟಿಯಾದ ವ್ಯಕ್ತಿಯು ಮಾಡುವ ಅಪರಾಧಕ್ಕಿಂತಲೂ ಭೂಮಿಯ ಮೇಲೆ ಕೋಲಾಹಲವೆಬ್ಬಿಸುವುದು ಒಂದು ಗುಂಪು. ಒಂದು ವ್ಯಕ್ತಿಯನ್ನು ಬದಲಿಸುವುದು ಸುಲಭ, ಆದರೆ ಒಂದು ಗುಂಪನ್ನು ಬದಲಿಸುವುದು ಕಷ್ಟ.
ನಮ್ಮ ಇಂದ್ರಿಯಗಳು ಮತ್ತು ಮನಸ್ಸು ಇಂದ್ರ. ಸಾಮೂಹಿಕ ಮನಸ್ಸನ್ನು ಇಂದ್ರ ಎನ್ನುತ್ತಾರೆ. ಸಾಮೂಹಿಕ ಮನಸ್ಸು ಬಹಳ ಪಾಪವನ್ನು ಮಾಡಿದಾಗ, ಸಾಮೂಹಿಕ ಮನಸ್ಸಿನಿಂದ ಪಾಪವನ್ನು ಹೋಗಲಾಡಿಸಬೇಕು. ಅದಕ್ಕೆ ಜ್ಞಾನಿಗಳ ಅವಶ್ಯಕತೆ ಎದ್ದಿತು. ಪುರಾಣದ ಕಥೆಯ ಪ್ರಕಾರ ಇಂದ್ರನು ಬಹಳ ಪಾಪಗಳನ್ನು ಮಾಡಿದ್ದನು ಮತ್ತು ಶುಚೀಂದ್ರಂನಲ್ಲಿ ಗುರುಗಳನ್ನು ಭೇಟಿ ಮಾಡಿದನು. ಶಿವನು ದಕ್ಷಿಣಾಮೂರ್ತಿಯ ರೂಪದಲ್ಲಿ ಬಂದು ಇಂದ್ರನ ಎಲ್ಲಾ ಪಾಪಗಳನ್ನೂ ಹೋಗಲಾಡಿಸಿದನು ಮತ್ತು ಇಂದ್ರನು ಶುದ್ಧನಾದನು. ಇದು ಕಥೆ. ಈ ಕಥೆಯ ಸಂದೇಶವೆಂದರೆ, ಜ್ಞಾನಿಗಳ ಬೋಧನೆಗಳನ್ನು ಪಾಲಿಸಿದರೆ ಅದು ಒಂದು ಗುಂಪನ್ನು ಶುದ್ಧಗೊಳಿಸುತ್ತದೆ. ಆಗ ಗುಂಪನ್ನು ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗದಂತೆ ಮತ್ತು ಅರಾಜಕತೆಯನ್ನು ಉಂಟು ಮಾಡದಂತೆ ತಡೆಯಬಹುದು.
ಆ ದೇವಸ್ಥಾನದಲ್ಲಿ ೫೦೦೦ ವರ್ಷಗಳ ಹಿಂದಿನ ಮರಗಳಿವೆ ಮತ್ತು ಈ ಮರದ ಕೆಳಗೆ ಇಂದ್ರನು ಶುಚಿಯಾದ. ಇದು ಒಮ್ಮೆ ಮಾತ್ರ ಆಗಿ ಮುಗಿದು ಹೋದ ಕಥೆಯಲ್ಲ, ಇದು ಸದಾ ಆಗುತ್ತಿರುವಂತದ್ದು. ಶುದ್ಧವಾದ ವಾತಾವರಣದಲ್ಲಿ, ಜ್ಞಾನಿಗಳ ಸನ್ನಿಧಿಯಲ್ಲಿ ಜನರ ಮನಸ್ಸು ಬದಲಾಗುತ್ತದೆ ಮತ್ತು ಅವರ ವರ್ತನೆಯಲ್ಲಿ ಹೆಚ್ಚು ಮಾನವತೆ ಇರುತ್ತದೆ. ಇದು ಸಾಂಕೇತಿಕವಾದ ಕಥೆ ಮತ್ತು ಅನೇಕ ಜನರಿಗೆ ಅದರ ಮಹತ್ವ ತಿಳಿದಿಲ್ಲ. ದೂರದರ್ಶನದ ಧಾರಾವಾಹಿಗಳನ್ನು ನೋಡಿದರೆ ಇಂದ್ರನು ಸದಾ ತಪ್ಪುಗಳನ್ನು ಮಾಡುತ್ತಿರುತ್ತಾನೆ. ಹೀಗೇಕೆ ಮಾಡುತ್ತಾನೆ ಎಂಬ ಆಲೋಚನೆ ಬರುತ್ತದೆ. ಇಂದ್ರ ಎಂದರೆ ಸಾಮೂಹಿಕ ಚೇತನ ಮತ್ತು ಸಾಮೂಹಿಕ ಚೇತನವು ಪಾಪದಲ್ಲಿ ತೊಡಗುತ್ತದೆ ಮತ್ತು ಆ ಪಾಪವನ್ನು ಶುದ್ಧಗೊಳಿಸಲು ಓರ್ವ ಜ್ಞಾನಿಯು ಬೇಕು. ಆದ್ದರಿಂದಲೇ, `ಗುರುಗಳಿಲ್ಲದೆ ಗತಿಯಿಲ್ಲ' ಎನ್ನುವುದು. ಗುರುವಿಲ್ಲದಿದ್ದರೆ ಮುಕ್ತಿಯಿಲ್ಲ.