For the best experience, open
https://m.samyuktakarnataka.in
on your mobile browser.

ಸಿಎಂ ತನ್ನ ಶಾಸಕರಿಗೆ ಏಕೆ ಸಂದೇಶ ಕಳುಹಿಸಬಾರದು?

01:40 PM Apr 10, 2024 IST | Samyukta Karnataka
ಸಿಎಂ ತನ್ನ ಶಾಸಕರಿಗೆ ಏಕೆ ಸಂದೇಶ ಕಳುಹಿಸಬಾರದು

ದೆಹಲಿಯ ತಿಹಾರ್ ಜೈಲನ್ನು ಹಿಟ್ಲರ್‌ನ ಗ್ಯಾಸ್ ಚೇಂಬರ್ ಆಗಿ ಪರಿವರ್ತಿಸಲು ಬಯಸುತ್ತೀರಾ? ದೆಹಲಿಯ ಜನರ ಸಮಸ್ಯೆಗಳನ್ನು ಆಲಿಸಿ ಮತ್ತು ಪರಿಹರಿಸಿ ಎಂದು ಹೇಳಿ ಸಿಎಂ ತನ್ನ ಶಾಸಕರಿಗೆ ಏಕೆ ಸಂದೇಶ ಕಳುಹಿಸಬಾರದು?

ನವದೆಹಲಿ: ಸಿಎಂ ತನ್ನ ಶಾಸಕರಿಗೆ ಏಕೆ ಸಂದೇಶ ಕಳುಹಿಸಬಾರದು? ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಪ್ರಶ್ನಿಸಿದ್ದಾರೆ.
ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ತಿಹಾರ್ ಜೈಲಿನಲ್ಲಿದ್ದಾರೆ. ಎಎಪಿ ನಾಯಕ ಸಂಜಯ್ ಸಿಂಗ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಅವರನ್ನು ಇಂದು ಭೇಟಿಯಾಗಬೇಕಿತ್ತು ಆದರೆ ಭದ್ರತಾ ವ್ಯವಸ್ಥೆಗಳನ್ನು ಉಲ್ಲೇಖಿಸಿ ಜೈಲು ಆಡಳಿತವು ಸಿಎಂ ಕೇಜ್ರಿವಾಲ್ ಅವರೊಂದಿಗಿನ ಭೇಟಿಯನ್ನು ತಿರಸ್ಕರಿಸಿದೆ. ಇದು ತಿಹಾರ್ ಜೈಲೋ ಅಥವಾ ಹಿಟ್ಲರ್ ಗ್ಯಾಸ್ ಚೇಂಬರ್ ಎಂದು ಪ್ರಶ್ನಿಸಿದ ಸಂಜಯ್ ಸಿಂಗ್, ವಿಚಿತ್ರ ಸರ್ವಾಧಿಕಾರ ನಡೆಯುತ್ತಿದೆ. ಕೇಜ್ರಿವಾಲ್ ಮಾಡಿದ ಅಪರಾಧ ಏನು ಎಂದು ಕೇಂದ್ರ ಸರ್ಕಾರ ಹೇಳಲಿ ಎಂದು ಕೇಳಿದರು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಅವರು ಅರವಿಂದ್ ಕೇಜ್ರಿವಾಲ್ ಅವರನ್ನು ಭಾವನಾತ್ಮಕವಾಗಿ ಒಡೆಯಲು ನೀವು ಬಯಸುತ್ತೀರಿ. ನೀವು ಅರವಿಂದ್ ಕೇಜ್ರಿವಾಲ್ ಅವರನ್ನು ಹಿಂಸಿಸುವುದರ ಮೂಲಕ ತಲೆಬಾಗಲು ಬಯಸುತ್ತೀರಿ, ಆದರೆ, ಈ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದಿದ್ದಾರೆ.