ಸಿಟಿ ರವಿ ಹತ್ಯೆಗೆ ಸಂಚು ನಡೆದಿದೆ ಅದರಲ್ಲಿ ಡೌಟೆ ಇಲ್ಲಾ...
ಪ್ರಗತಿಪರರು ಪಾಕಿಸ್ತಾನದ ಪರ ಇರೋರು. ಅವರು ಗೋ ಬ್ಯಾಕ್ ಅನ್ನಲೇಬೇಕು ಯಾಕಂದ್ರೆ ಅವರ ಸ್ವಾಗತ ನಕ್ಸಲರಿಗೆ
ಮಂಡ್ಯ: ಬೆಳಗಾವಿ ಗಲಾಟೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹತ್ಯೆಗೆ ಯತ್ನಿಸಿರುವ ಹಿಂದೆ ಗೃಹ ಸಚಿವ ಜಿ ಪರಮೇಶ್ ಮತ್ತು ಸಿಎಂ ಸಿದ್ದರಾಮಯ್ಯ ಇದ್ದಾರೆ ಎಂದು ಮಂಡ್ಯದಲ್ಲಿ ಮಾರ್ಮಿಕವಾಗಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಮಂಡ್ಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಟಿ ರವಿ ಹತ್ಯೆಗೆ ಸಂಚು ನಡೆದಿತ್ತು. ಬೆಳಗಾವಿ ಗಲಾಟೆ ಮಾಡಿಸಿದ್ದೆ ಗೃಹ ಸಚಿವ ಪರಮೇಶ್ವರ್ ಹಾಗೂ ಸಿಎಂ ಸಿದ್ದರಾಮಯ್ಯ ಎಂದು ಮಾರ್ಮಿಕವಾಗಿ ನುಡಿದರು.
ಡಿಕೆ ಶಿವಕುಮಾರ್ ನನ್ನ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ನಾನು ಪೊಲೀಸ್ ಠಾಣೆಗೆ ಹೋಗಿದ್ದು ನಿಜಾ, ಪೊಲೀಸ್ ಠಾಣೆಯಲ್ಲಿ ಕೂತಿದ್ದು ನಿಜ. ಆದರೆ ನಾನು ಅಲ್ಲಿಗೆ ಕಂಪ್ಲೇಂಟ್ ಕೊಡಲು ಹೋಗಿದ್ದೆ. ವಿಧಾನ ಸೌಧದಲ್ಲಿ 40 ಜನ ಸಿಟಿ ರವಿಯನ್ನ ಹೊಡೆದು ಕೊಲೆ ಮಾಡಲು ಪ್ರಯತ್ನ ಮಾಡಿದ್ದರ ವಿರುದ್ದ ಝೀರೋ ಕಂಪ್ಲೇಂಟ್ ಕೊಡಲು ಹೋಗಿದ್ದೆ. ಕೊಡಬೇಕು ಅಂದ್ರು ಅದಕ್ಕೆ ಕೊಡೊದಕ್ಕೆ ಹೋಗಿದ್ದೆ.
ಸಿಟಿ ರವಿ ಬಿಡಿಸಿಕೊಂಡು ಬರಲು ಹೋಗಿದ್ದಲ್ಲಾ.ನಾನು ಹೋಮ್ ಮಿನಿಸ್ಟರ್ ಆಗಿದ್ದವ್ನು ಅವ್ರಿಗಿಂತ ಕಾನೂನು ಗೊತ್ತಿದೆ. ಪರಮೇಶ್ವರ್, ಸಿಎಂ ಆ ವಿಚಾರದ ಬಗ್ಗೆ ಗೊತ್ತೆ ಇಲ್ಲಾ ಅಂತಾರೆ ಹಾಗಾದ್ರೆ ಇದನ್ನೆಲ್ಲ ಇನ್ಯಾರು ಮಾಡಿಸ್ತಿದ್ದಾರೆ.?
ಜಯಮಾಲ ಮಂತ್ರಿ ಆದಾಗ ಇದೆ ಲಕ್ಷ್ಮಿ ಹೆಬ್ಬಾಳ್ಕರ್ ಸೇವೆ ಅಂದಿದ್ರು ಆಗ ಜಯಮಾಲ ಛೀಮಾರಿ ಹಾಕಿದ್ದರು. ಮೊದಲು ಅವ್ರು ಸಂಸ್ಕೃತಿ ಕಲಿಲಿ. ಆಗ ಯಾಕೆ ಇವ್ರು ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ದ ಕ್ರಮ ಕೈಗೊಳ್ಳಲಿಲ್ಲ.ಸೇವೆ ಅಂದ್ರೆ ಏನು ಆಗ ಯಾಕೆ ಪ್ರಶ್ನೆ ಮಾಡಲಿಲ್ಲಾ.ನಮ್ಮನ್ನ ಯಾಕೆ ಈಗ ಕೇಳ್ತಿರ. ಸಿಟಿ ರವಿ ಹಾಗೆ ಹೇಳಿದ್ದಾರೋ ಇಲ್ವೋ ಅಂತ ತನಿಖೆ ಆಗ್ಲಿ ಯಾರೆ ತಪ್ಪು ಮಾಡಿದ್ರು ತಪ್ಪೆ. ತನಿಖೆ ಆಗೋಕು ಮೊದಲು ಕಬ್ಬಿನ ಗದ್ದೆ ಸೇಫ್ಟಿ, ಫಾರೆಸ್ಟ್ ಸೇಫ್ಟಿ ಅಂತ ಇಡ್ತಾರೆ. ಇನ್ಮೇಲೆ ಸೇಫ್ಟಿಗಾಗಿ ಸಿಎಂ, ಹೋಂ ಮಿನಿಸ್ಟರನ್ನ ಕಬ್ಬಿನಗದ್ದೆಯಲ್ಲೆ ಸೇಫ್ಟಿಯಾಗಿಡ್ಲಿ. ಸಿಟಿ ರವಿ ಹತ್ಯೆಗೆ ಸಂಚು ನಡೆದಿದೆ ಅದರಲ್ಲಿ ಡೌಟೆ ಇಲ್ಲಾ ಇದರ ಬಗ್ಗೆ ತನಿಖೆ ಆಗಬೇಕು ಎಂದರು.
ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಪ್ರಗತಿಪರರು ಸಿ.ಟಿ ರವಿ ಗೋ ಬ್ಯಾಕ್ ಚಳುವಳಿ ವಿಚಾರವಾಗಿ ಮಾತನಾಡಿದ ಅವರು ಪ್ರಗತಿಪರರು ಪಾಕಿಸ್ತಾನದ ಪರ ಇರೋರು. ಅವರು ಗೋ ಬ್ಯಾಕ್ ಅನ್ನಲೇಬೇಕು ಯಾಕಂದ್ರೆ ಅವ್ರ ಸ್ವಾಗತ ನಕ್ಸಲರಿಗೆ. ಪಾಕಿಸ್ತಾನ ಜಿಂದಾಬಾದ್ ಅಂದಾಗ ಬಾಯಿ ಮುಚ್ಚಿ ಕುಳಿತಿದ್ರು. ಪಾಕಿಸ್ತಾನ ಜಿಂದಾಬಾಧ್ ಅಂದ್ರೆ ಏನು ಅನ್ಸಲ್ಲ ಇವ್ರಿಗೆ. ಈ ವಿಚಾರದ ಬಗ್ಗೆ ದೊಡ್ಡ ಮಾತನಾಡ್ತಾರೆ ಎಂದು ಕಿಡಿಕಾರಿದರು.