ಸಿಲಿಂಡರ್ ಸ್ಫೋಟ ನಾಲ್ವರಿಗೆ ಗಾಯ
05:18 PM Sep 08, 2024 IST
|
Samyukta Karnataka
ಹುಬ್ಬಳ್ಳಿ: ಗೃಹಬಳಕೆ ಸಿಲಿಂಡರ್ ಸ್ಫೋಟ ಹಿನ್ನೆಲೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮದಲ್ಲಿ ರವಿವಾರ ನಡೆದಿದೆ.
ಸಿದ್ದಲಿಂಗೇಶ ಹಿರೇಮಠ(೪೩), ವಿಶಾಲ ಹಿರೇಮಠ(೩೫), ಶ್ರೀಪಾದಯ್ಯ ಹಿರೇಮಠ(೧೭) ನಿರ್ಮಲಾ ಹಿರೇಮಠ(೩೪) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಲಿಂಡರ್ ಸ್ಫೋಟದಿಂದಾಗಿ ಮನೆಯೂ ಹಾನಿಯಾಗಿದೆ. ಗಾಯಗೊಂಡವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Article