For the best experience, open
https://m.samyuktakarnataka.in
on your mobile browser.

ಸುಪ್ರೀಂ ಕೋರ್ಟ್‌ನ ಧ್ವಜ, ಲಾಂಛನ ಅನಾವರಣ

07:56 PM Sep 01, 2024 IST | Samyukta Karnataka
ಸುಪ್ರೀಂ ಕೋರ್ಟ್‌ನ ಧ್ವಜ  ಲಾಂಛನ ಅನಾವರಣ

ದೆಹಲಿ: ಭಾರತ ವಿಶ್ವದ ದೊಡ್ಡ ನ್ಯಾಯವ್ಯವಸ್ಥೆಯನ್ನು ಹೊಂದಿರುವ ದೇಶ. ನ್ಯಾಯ ಮತ್ತು ಅನ್ಯಾಯ ನಿರ್ಣಯ ಮಾಡುವ ನ್ಯಾಯಾಲಯವನ್ನು ಧರ್ಮಛತ್ರ ಎಂದೇ ಕರೆಯಲಾಗುತ್ತದೆ. ಈ ಧರ್ಮಛತ್ರದಲ್ಲಿ ಎಂದಿಗೂ ಸತ್ಯಕ್ಕೆ ಜಯ ಸಿಗುವಂತೆ ಆಗಬೇಕು, ಈ ಮೂಲಕ ನ್ಯಾಯವ್ಯವಸ್ಥೆಯ ಮೇಲೆ ಜನರ ವಿಶ್ವಾಸ ಹೆಚ್ಚಾಗಬೇಕಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ಸುಪ್ರೀಂಕೋರ್ಟ್‌ನ 75ನೇ ವಾರ್ಷಿಕೋತ್ಸವದ ಅಂಗವಾಗಿ ದೆಹಲಿಯಲ್ಲಿಂದು ಸುಪ್ರೀಂ ಕೋರ್ಟ್‌ನ ಧ್ವಜ ಮತ್ತು ಲಾಂಛನ ಅನಾವರಣಗೊಳಿಸಿ ಅವರು ಮಾತನಾಡಿದರು.