For the best experience, open
https://m.samyuktakarnataka.in
on your mobile browser.

ಸೃಷ್ಟಿ, ಸ್ಥಿತಿ, ಲಯಕ್ಕೂ ಶ್ರೀಮನ್ನಾರಾಯಣನೇ ಆಧಿದೈವ

04:00 AM Oct 09, 2024 IST | Samyukta Karnataka
ಸೃಷ್ಟಿ  ಸ್ಥಿತಿ  ಲಯಕ್ಕೂ ಶ್ರೀಮನ್ನಾರಾಯಣನೇ ಆಧಿದೈವ

ಸರ್ವತಂತ್ರ ಸ್ವತಂತ್ರನಾದ ಮತ್ತು ಸರ್ವವ್ಯಾಪ್ತನಾಗಿರುವ ಭಗವಂತ ಪ್ರತಿ ದೇವತೆಗಳಲ್ಲಿ ಅಂತರ್ಯಾಮಿಯಾಗಿ ನಿಂತು ಆಯಾ ಕೆಲಸಗಳನ್ನು ಮಾಡಿಸುತ್ತಾನೆ. ಹೀಗಾಗಿ ಆಯಾ ದೇವತಾರಾಧನೆಗಳೂ ಸ್ತುತಿಗಳೂ ಕೂಡ ಆ ಕೇಶವನಾದ ಭಗವಂತನಿಗೇ ಸೇರುತ್ತವೆ.
ಸ್ವತಂತ್ರಳಾದ ಮಹಾಲಕ್ಷ್ಮಿಯ ಸ್ತುತಿಯನ್ನು ಮಾಡುವಾಗ ಸುವರ್ಣ ರಜತಶ್ರಜಾಮ' ಸುವರ್ಣದ ಮಾಲೆಯನ್ನು ರಜತದ ಪುಷ್ಪದ ಮಾಲೆಯನ್ನು ಧರಿಸಿದವಳು ಮಹಾಲಕ್ಷ್ಮಿದೇವಿ ಎನ್ನುವುದು ಅರ್ಥ. ಇನ್ನೊಂದು ಅರ್ಥ ಸೃಷ್ಟಿ ಮಾಡುವಂತಹ ದೇವತೆಗಳು, ಭಗವಂತನ ಆಜ್ಞೆ ಮೇರೆಗೆ ಸೃಷ್ಟಿ ಮಾಡುವಂತಹ ಸೃಜನಶೀಲ ದೇವತೆಗಳಾದ ಬ್ರಹ್ಮಾದಿ ದೇವತೆಗಳನ್ನುಸ್ರಕ' ಎಂದು ಕರೆಯುತ್ತಾರೆ. ಹಿರಣ್ಯಗರ್ಭ ಎಂಬ ಹೆಸರಿನಿಂದ ಹಿರಣ್ಯಗರ್ಭನಲ್ಲಿದ್ದು ಸೃಷ್ಟಿಮಾಡುವುದು ಪರಮಾತ್ಮನೇ. ಬ್ರಹ್ಮದೇವರಲ್ಲಿ ಇದ್ದು ಪರಮಾತ್ಮ ಆ ಸೃಷ್ಟಿಯನ್ನು ಮಾಡುತ್ತಾನೆ.
ಸರ್ವ ಶರ್ವ ಶಿವ ಸ್ಥಾಣು: ಶಿವ' ಎಂಬ ಶಬ್ದವು ಸರ್ವೋತ್ತಮನಾದ ನಾರಾಯಣನನ್ನೇ ಕೊಂಡಾಡುವಂತಹ ಶಬ್ದ. ಪರಮ ಮಂಗಳನಾದಂತಹ ಪರಮಾತ್ಮನಿಗೆ ವಿಷ್ಣು ಸಹಸ್ರನಾಮದಲ್ಲಿ ಹೇಳುವಂತೆಶಿವ' ಎಂದು ಕರೆಯುತ್ತಾರೆ. ಅಂತಹ ಶಿವ ಎಂಬ ಹೆಸರಿನ ಪರಮಾತ್ಮನ ಸನ್ನಿಧಾನವಿರುವುದರಿಂದ ರುದ್ರದೇವರು ಸಂಹಾರ ಕಾರ್ಯವನ್ನು ಮಾಡುತ್ತಾರೆ. ಸ್ವಯಂ ನಾರಾಯಣ ತಾನು ಸ್ಥಿತಿಯನ್ನು ಪಾಲನೆಯನ್ನು ಮಾಡುತ್ತಾನೆ. ಹೀಗೆ ಎಲ್ಲವನ್ನು ಮಾಡುವುದು ದೇವರೇ. ಆದರೂ ಬ್ರಹ್ಮದೇವರಲ್ಲಿ ಅಂತರ್ಯಾಮಿಯಾಗಿ ಸೃಷ್ಟಿಕಾರ್ಯಗಳನ್ನು ಮತ್ತು ರುದ್ರದೇವರಲ್ಲಿ ನಿಂತು ಸಂಹಾರ ಮಾಡುತ್ತಾನೆ. ರುದ್ರದೇವರು ಅಹಂಕಾರದ ತತ್ಮಾಭಿಮಾನಿಯಾಗಿ `ವೈಕಾರಿಕ, ತೈಜಸ, ತಾಮಸ' ಎಂಬ ಮೂರು ವಿಧದ ಅಹಂಕಾರಗಳಿಂದ ಗಣಗಳ ಸೃಷ್ಟಿಯನ್ನು ಮಾಡಿದ್ದಾರೆ.
ದೇವತೆಗಳ ಪರಮ ಪವಿತ್ರವಾದ ಎಲ್ಲಾ ಕಡೆ ವ್ಯಾಪಕ ಆಗುವ ಶಕ್ತಿ/ ಅಂತರ್ಧಾನನಾಗುವ ಶಕ್ತಿ ಇರುತ್ತದೆ ಅಂತಹ ದೇಹ ಹೊಂದಿರುತ್ತಾರೆ ಎಂದು ವೇದವ್ಯಾಸ ದೇವರುಗಳು ಹೇಳಿದ್ದಾರೆ.
ನಮಗೆಲ್ಲ ಇರುವ ಮನಸು ಅನಾದಿ: ಆದರೆ ಅನಾದಿಯಾಗಿರುವ ಆ ಮನಸ್ಸಿಗೆ ವಿಶೇಷವಾಗಿರುವ ಉಪಚಯ ಅಥವಾ ಹೆಚ್ಚಿನ ಅಂಶಗಳ ಸೇರ್ಪಡೆ, ಅದು ಈ ವೈಕಾರಿಕ ಅಹಂಕಾರವನ್ನು ರುದ್ರದೇವರು ಸೇರಿಸುತ್ತಾರೆ. ರುದ್ರ ದೇವರಿಂದ ಅಭಿಮನ್ಯವಾದ ತತ್ವದ ಉಪಯೋಗವನ್ನು ಮಾಡಿ ನಮಗೆಲ್ಲ ಮನಸ್ಸಿನ ಉಪಚಯವನ್ನು ಮಾಡುತ್ತಾರೆ ಮನಸ್ಸಿನಲ್ಲಿ ಒಂದು ವಿಶೇಷವಾದ ಪುಷ್ಟಿಯನ್ನು ಕೊಡುತ್ತಾನೆ. ಇದೇ ರೀತಿಯಾಗಿ ತೈಜಸ ಅಹಂಕಾರದಿಂದ ನಮ್ಮ ಇಂದ್ರಿಯಗಳಿಗೆ ವಿಶೇಷವಾದ ಅಹಂಕಾರ ಸಿಗುತ್ತದೆ.
ತಾಮಸ ಅಹಂಕಾರದಿಂದ ಈ ಎಲ್ಲ ಪಂಚ ಮಹಾಭೂತಗಳಾದ ಪೃಥ್ವಿ, ಅಪ, ತೇಜಸ್ಸು ಪ್ರಾಪ್ತಿವಾದ ವಾದ ವಸ್ತುಗಳು ಜಲ, ವಾಯು, ಆಕಾಶ, ಅದಕ್ಕೂ ಅಭಿಮಾನಿಗಳು ರುದ್ರದೇವರು. ಹೀಗೆ ಗರುಡ ಶೇಷ ರುದ್ರ ದೇವರು ಅಹಂಕಾರ ತತ್ವಕ್ಕೆ ಅಭಿಮಾನ ದೇವತೆಗಳಾಗಿ ಆ ಮೂಲಕ ಸೃಷ್ಟಿಯನ್ನು ಮಾಡುತ್ತಾರೆ.
ಪಂಚ ಮಹಾಭೂತಗಳಿಗೆ ಅಭಿಮಾನಿ ದೇವತೆಗಳಾದ ಗಣಪತಿ ಅಗ್ನಿ, ವಾಯು ಹಾಗೂ ವರುಣ ತಾರಾದೇವಿ. ಅಪಂಚಮಹಾಭೂತಗಳಿಗೆ ಕಾರಣವಾದ ಈ ದೇವತೆಗಳ ಕೂಡ ಈ ಎಲ್ಲ ದೇವತೆಗಳಿಗೆ ಒಂದು ವಿಶಿಷ್ಟವಾದ ಸ್ಥಾನವನ್ನು ಕೊಟ್ಟು ಆ ಕಾರ್ಯವನ್ನು ಅವರೆಲ್ಲಿದ್ದು ಮಾಡಿಸಿ, ಭಕ್ತರು ಅವರಿಗಿಂತ ಕೆಳಗಿನ ದೇವತೆಗಳು, ಋಷಿಗಳು ಎಲ್ಲರೂ ಅವರುಗಳಿಗೆ ಪೂಜೆಯನ್ನು ಮಾಡಿ ಆರಾಧಿಸಿ ಅವರ ಅನುಗ್ರಹ ಪಡೆಯುವಂತೆ ಮಾಡುತ್ತಾನೆ ಪರಮಾತ್ಮ. ಲಕ್ಷ್ಮೀ ಬ್ರಹ್ಮಾದಿಗಳ ಆರಂಭವಾಗಿ ಮಾಡಿಕೊಂಡು ಅವರವರ ತಂದೆ ತಾಯಿಗಳವರೆಗೆ, ಯಾರೆಲ್ಲಾ ಸೃಷ್ಟಿಗೆ ಕಾರಣರೂ ಆ ಎಲ್ಲರಿಗೂ ಸೃಷ್ಟಿಗೆ ಕಾರಣವಾಗುವ ಯೋಗ್ಯತೆಯನ್ನು ಕೊಟ್ಟು, ಅದಕ್ಕೆ ಬೇಕಾದ ಅನುಕೂಲತೆಗೆ ಪದಾರ್ಥಗಳನ್ನು ಒದಗಿಸಿ ಇವರಿಗೆ ಸೃಷ್ಟಿಕರ್ತರು ಇವರಿಗೆ ಗೌರವಿಸಬೇಕು ಎಂದೋ ಮಾಡಿಟ್ಟವಳು ಶ್ರೀಲಕ್ಷ್ಮಿ, ಅವಳನ್ನು ಸೇರಿಸಿಕೊಂಡಂತೆ ಎಲ್ಲರಿಗೂ ಅಭಾಗ್ಯವನ್ನು ಕೊಟ್ಟು ಅನಗ್ರಹಿಸಿದವನು ಪರಮಾತ್ಮ.