ಸೈಬರ್ ಅಪರಾಧ ತಡೆಗೆ ನಟ ಅಮಿತಾಬ್ ಬಚ್ಚನ್ ಸಾಥ್
ಬೆಂಗಳೂರು: ದೇಶದಲ್ಲಿ ಮತ್ತು ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಸೈಬರ್ ಕ್ರೈಮ್ ಪ್ರಕರಣಗಳು ಕಳವಳಕಾರಿ ವಿಷಯವಾಗಿದೆ ಎಂದು ನಟ ಅಮಿತಾಬ್ ಬಚ್ಚನ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು ಗೃಹ ಸಚಿವಾಲಯದ ಭಾರತೀಯ ಸೈಬರ್ ಕ್ರೈಮ್ ಸಮನ್ವಯ ಕೇಂದ್ರವು ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಗೃಹ ಸಚಿವ ಅಮಿತ್ ಶಾ ಅವರ ಆಹ್ವಾನದ ಮೇರೆಗೆ ನಾನು ಈ ಅಭಿಯಾನಕ್ಕೆ ಸೇರಿದ್ದೇನೆ ಮತ್ತು ಎಲ್ಲರೂ ಇದರಲ್ಲಿ ಭಾಗಿಯಾಗಲು ಬಯಸುತ್ತೇನೆ. ಈ ಸಮಸ್ಯೆಯ ವಿರುದ್ಧ ಒಂದಾಗಲು ಸ್ವಲ್ಪ ಎಚ್ಚರಿಕೆ ವಹಿಸಿದರೆ ಸೈಬರ್ ಅಪರಾಧಗಳಿಂದ ನಮ್ಮನ್ನು ರಕ್ಷಿಸಬಹುದು ಎಂದಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ದೃಷ್ಟಿಕೋನವನ್ನು ಬೆಂಬಲಿಸಿರುವ ನಟ ಅಮಿತಾಬ್ ಬಚ್ಚನ್ ಅವರು ಭಾರತವನ್ನು ಸೈಬರ್ ಸುರಕ್ಷಿತವಾಗಿರಿಸುವ I4C ಅಭಿಯಾನದಲ್ಲಿ ಸೇರಿಕೊಂಡಿದ್ದಾರೆ. ನೀವೂ ಸಹ ಈ ಉಪಕ್ರಮದಲ್ಲಿ ಜೊತೆಯಾಗಬಹುದು. #CyberSecureBharat ನಿರ್ಮಿಸಲು ಕೊಡುಗೆ ನೀಡಿ ಎಂದಿದ್ದಾರೆ.