ಸ್ವಾಭಿಮಾನ ವಿಚಾರದಲ್ಲಿ ಯಾರೊಂದಿಗೂ ರಾಜಿ ಇಲ್ಲ
"ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್'ಕ್ಲೇವ್ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಪ್ರೇರಣೆ ನೀಡಲಿ"
ಮೈಸೂರ: ತ್ರಿವಿಧ ದಾಸೋಹದ ಫಲಾನುಭವಿಗಳಾಗಿರುವ ನಾವು ಬೆವರು ಸುರಿಸಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್'ಕ್ಲೇವ್ ಸಮಾವೇಶದಲ್ಲಿ ಭಾಗವಹಿಸಿ ಉದ್ಘಾಟಿಸಿ ಮಾತನಾಡಿ ಸ್ವಾಭಿಮಾನದ ವಿಚಾರದಲ್ಲಿ ಯಾರೊಂದಿಗೂ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎನ್ನುವುದನ್ನು ಸಂದರ್ಭ ಬಂದಾಗಲೆಲ್ಲವೂ ಈ ಸಮಾಜದ ತೋರಿಸಿಕೊಟ್ಟಿದೆ. ಎಷ್ಟೇ ಕಷ್ಟ-ನಷ್ಟಗಳಾದರೂ ದುಡಿದು ತಿನ್ನುತ್ತೇವೆ, ಅದೇ ಶರಣತತ್ವ, ಅದೇ ಕಾಯಕ ತತ್ವ ಎಂದು ನಂಬಿ ಬದುಕುತ್ತಿರುವ ಸಮಾಜ ಇಂದು ಕರುನಾಡು ಕಟ್ಟುವ ಮೂಲಕ ದೇಶದ ಏಳಿಗೆಗಾಗಿ ಬಹು ದೊಡ್ಡ ಕೊಡುಗೆಯನ್ನು ಕೊಟ್ಟಿದೆ. ತ್ರಿವಿಧ ದಾಸೋಹದ ಫಲಾನುಭವಿಗಳಾಗಿರುವ ನಾವು ಬೆವರು ಸುರಿಸಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು. ಬೇಡುವ ಸಮಾಜವಲ್ಲ, ನೀಡುವ ಸಮಾಜ ಎಂದು ಹೆಮ್ಮೆಯಿಂದ ಎಲ್ಲರೂ ಗೌರವಿಸುವ ಸಮಾಜದ ಬಂಧುಗಳು ವಿಕಸಿತ ಭಾರತಕ್ಕಾಗಿ ಮಹತ್ವದ ಕೊಡುಗೆ ನೀಡಲು ಸಜ್ಜಾಗಬೇಕೆಂಬ ಕರೆ ನೀಡಿದರು.