ಸ್ವಾವಲಂಬಿ ಸಾರಥಿ ಯೋಜನೆಯ ನಕಲಿ ಜಾಹೀರಾತ ಬಗ್ಗೆ ಎಚ್ಚರ…
ಸಾಮಾಜಿಕ ಜಾಲತಾಣ ಹಾಗೂ What's App Groupಗಳಲ್ಲಿ ನಕಲಿ ಜಾಹೀರಾತು ನೀಡುತ್ತಿರುವುದು ನಿಗಮದ ಗಮನಕ್ಕೆ ಬಂದಿರುತ್ತದೆ.
ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ವಿಭಾಗದ ಯಾವುದೇ ನಿಗಮಗಳಿಂದ ಸ್ವಾವಲಂಬಿ ಸಾರಥಿ ಯೋಜನೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿರುವುದಿಲ್ಲ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯು ಅನಧಿಕೃತವಾಗಿರುತ್ತದೆ.
ಹೆಚ್ಚಿನ ಸಹಾಯಕ್ಕಾಗಿ ಸಹಾಯವಾಣಿ 9482300400 ಸಂಖ್ಯೆಯನ್ನು ಸಂಪರ್ಕಿಸಿ ಎಂದು ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಸ್ಪಷ್ಟನೆ ನೀಡಿದೆ, ಈ ಕುರಿತಂತೆ ಪ್ರಕಟಣೆ ಹೊರಡಿಸಿದ್ದು ಸಂಬಂಧಪಟ್ಟವರಿಗೆ 2024-25ನೇ ಸಾಲಿನಲ್ಲಿ ಸಮಾಜ ಕಲ್ಯಾಣ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಗಮಗಳು ಅನುಷ್ಟಾನಗೊಳಿಸುತ್ತಿರುವ ಸ್ವಾವಲಂಬಿ ಸಾರಥಿ ಯೋಜನೆಯಡಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, 29 ನೇ ನವೆಂಬರ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವೆಂದು ಸಾಮಾಜಿಕ ಜಾಲತಾಣ ಹಾಗೂ What's App Groupಗಳಲ್ಲಿ ನಕಲಿ ಜಾಹೀರಾತು ನೀಡುತ್ತಿರುವುದು ನಿಗಮದ ಗಮನಕ್ಕೆ ಬಂದಿರುತ್ತದೆ. ಎಲ್ಲಾ ಸದರಿ ಜಾಹೀರಾತು ಅನಧಿಕೃತವಾಗಿದ್ದು ಸಮಾಜ ಕಲ್ಯಾಣ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಗಮಗಳಿಂದ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳಿಗೆ ಸಂಬಂಧಿಸಿದಂತೆ 2024-25 ನೇ ಸಾಲಿಗೆ ಅರ್ಜಿಗಳನ್ನು ಆಹ್ವಾನಿಸಲು ಕ್ರಮ ವಹಿಸಲಾಗಿದ್ದು ಅರ್ಜಿಗಳನ್ನು ಆಹ್ವಾನಿಸುವ ಸಂದರ್ಭದಲ್ಲಿ ಅಧಿಕೃತವಾಗಿ ಪ್ರಮುಖ ದಿನಪತ್ರಿಕೆಗಳಲ್ಲಿ ಜಾಹೀರಾತನ್ನು ನೀಡಲಾಗುವುದು ಎಂದಿದ್ದಾರೆ.