ಹತ್ತು ವರ್ಷದಲ್ಲಿ ೧೫ ವರ್ಷ ಬೆಳೆದ ಅಭ್ಯರ್ಥಿ!
ಫಿರೋಜಾಬಾದ್ನಿಂದ ನಿಂತಿರೋ ಅಭ್ಯರ್ಥಿ ವಿಶ್ವಜಿತ್ ಸಿಂಗ್ ಕಾಲಕ್ಕಿಂತ ಸ್ಪೀಡು. ಹೇಗೆ ಅಂತೀರಾ? ೨೦೧೪ರಲ್ಲಿ ಇವ್ರು ನೀಡಿದ್ದ ಅಫಿಡವಿಟ್ನಲ್ಲಿ ತಮ್ಗೆ ೬೦ ವರ್ಷ ವಯಸ್ಸಾಗಿ ಅಂತ ಹೇಳ್ಕೊಂಡಿದ್ರು. ಆಗ ಅವ್ರು ಬಿಎಸ್ಪಿಯಿಂದ ಚುನಾವಣೆಗೆ ನಿಂತಿದ್ರು. ಕಾಲಚಕ್ರ ತರ‍್ಗಿದೆ. ಹತ್ತು ವರ್ಷ ಕಳ್ದಿದೆ. ಈ ಬಾರಿ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸ್ಕೊಂಡಿದ್ದಾರೆ. ಆದ್ರೆ ಈ ಬಾರಿ ಅವ್ರು ಸಲ್ಲಿಸಿರೋ ಅಫಿಡವಿಟ್ ಪ್ರಕಾರ ಅವರ ವಯಸ್ಸು ೭೫ ವರ್ಷ. ಅಂದ್ರೆ ಹತ್ತು ಹರ್ಷದಲ್ಲಿ ೧೫ ವರ್ಷ ಬೆಳೆದಿರೋ ಪವಾಡ ಸಾಧ್ಸಿದ್ದಾರೆ. ಏನೇನೋ ಸುಳ್ಳುಗಳನ್ನು ಹೇಳೋ ರಾಜಕಾರಣಿಗಳ್ಗೆ ಇದೇನೂ ದೊಡ್ಡದಲ್ಲ ಬಿಡಿ ಅಂತ ಜನ ಮೂಗು ಮುರಿದಿದ್ದಾರಂತೆ!
ಆದ್ರೆ ಎಸ್ಪಿ ಸುಮ್ನೆ ಬಿಟ್ಟಿಲ್ಲ. ಪ್ರಮಾಣಪತ್ರದಲ್ಲಿ ಸುಳ್ಳು ಮಾಹ್ತಿ ನೀಡಿದ್ದಕ್ಕಾಗಿ ಅವರ ನಾಮಪತ್ರ ರಿಜೆಕ್ಟ್ ಮಾಡಿ ಅಂತ ಆಯೋಗಕ್ಕೆ ಮನವಿ ಸಲ್ಲಿಸಿತ್ತು. ಆದ್ರೆ ಉದ್ದೇಶಪೂರ್ವಕವಾಗಿ ಈ ವಿಷ್ಯಾನ್ನ ವಿವಾದ ಮಡ್ತಾ ಇದ್ದಾರೆ ಅನ್ನೋದು ವಿಶ್ವಜಿತ್ ಸಿಂಗ್ ವಾದ. ಈ ಹಿಂದೆ ನಾಮಪತ್ರದಲ್ಲಿ ಹುಟ್ಟಿದ ದಿನಾಂಕದ ಕಾಲಂ ಇರ್ಲಿಲ್ಲ. ಬರೀ ವಯಸ್ಸೆಷ್ಟು ಅಂತ ಮಾತ್ರ ಬರೀಬೇಕಿತ್ತು. ಆಗ ಏನೋ ಮಿಸ್ಟೇಕ್ ಆಗಿತ್ತು. ಈಗಿನ ನಾಮಪತ್ರದಲ್ಲಿ ವಯಸ್ಸು, ಹುಟ್ಟಿದ ದಿನಾಂಕ ಎರ್ಡೂ ಇದೆ. ಇದೇ ಕರೆಕ್ಟು ಎಂದು ಆಯೋಗದ ಮುಂದೆ ಹೇಳ್ಕೊಂಡಿದ್ದಾರೆ. ಹಳೇ ಪಾಪಕ್ಕೆ ಈಗ ಶಿಕ್ಷೆ ಕೊಡೊಕ್ಕಾಗಲ್ಲ ಅಂತ ಆಯೋಗ ಎಸ್ಪಿ ಮನವೀನ ರಿಜೆಕ್ಟ್ ಮಾಡಿದೆ.