ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಹರಿಯಾಣ: ಅ.೨ಕ್ಕೆ ಚುನಾವಣೆ ನಿಗದಿ

10:08 PM Aug 31, 2024 IST | Samyukta Karnataka

ನವದೆಹಲಿ: ಕೇಂದ್ರೀಯ ಚುನಾವಣಾ ಆಯೋಗವು ಹರಿಯಾಣ ವಿಧಾನಸಭಾ ಚುನಾವಣಾ ದಿನಾಂಕ ಪರಿಷ್ಕರಿಸಿದೆ. ಅಕ್ಟೋಬರ್ ೧ರಂದು ನಡೆಯಬೇಕಿದ್ದ ಹರಿಯಾಣದ ಮತದಾನ ದಿನಾಂಕವನ್ನು ಅಕ್ಟೋಬರ್ ೫ಕ್ಕೆ ಬದಲಿಸಲಾಗಿದೆ. ಇದೇ ವೇಳೆ ಹರಿಯಾಣ ಹಾಗೂ ಜಮ್ಮು-ಕಾಶ್ಮೀರ ಚುನಾವಣೆಯ ಮತ ಎಣಿಕೆಯನ್ನು ಅಕ್ಟೋಬರ್ ೪ರ ಬದಲಿಗೆ ೮ರಂದು ನಡೆಸಲಾಗುತ್ತದೆ ಎಂದು ಆಯೋಗ ಪ್ರಕಟಿಸಿದೆ. ಬಿಷ್ಣೋಯಿ ಸಮುದಾಯದ ಸಂಪ್ರದಾಯ ಹಾಗೂ ಮತದಾನ ಹಕ್ಕು ಗೌರವಿಸಿ ಈ ಪರಿಷ್ಕರಣೆ ಮಾಡಲಾಗಿದೆ ಎಂದೂ ವಿವರಿಸಿದೆ. ಬಿಷ್ಣೋಯಿ ಸಮುದಾಯವು ತಮ್ಮ ಗುರು ಜಂಬೇಶ್ವರರ ಸ್ಮರಣಾರ್ಥ ಅಸೊಜೆ ಅಮಾವಾಸ್ಯೆ ಹಬ್ಬ ಆಚರಿಸುತ್ತಿದೆ. ಈ ವರ್ಷ ಗುರುಜಂಬೇಶ್ವರರ ವಾರ್ಷಿಕ ದಿನ ಅಕ್ಟೋಬರ್ ೨ರಂದು ನಡೆಯಲಿದೆ. ಆದರೆ ಹರಿಯಾಣದ ಸಿರ್ಸಾ, ಫತೇಬಾದ್ ಹಾಗೂ ಹಿಸ್ಸಾರ್ ಭಾಗದ ವೈಷ್ಣೋಯಿ ಸಮುದಾಯ ಈ ಹಬ್ಬಕ್ಕಾಗಿ ಅಕ್ಟೋಬರ್ ೧ರಂದು ರಾಜಸ್ಥಾನಕ್ಕೆ ಪ್ರಯಾಣಿಸಬೇಕಾಗಿರುವುದರಿಂದ ಮತದಾನದ ಹಕ್ಕು ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಈ ಸಮುದಾಯದ ಬೇಡಿಕೆಯಂತೆ ಮತದಾನ ದಿನ ಬದಲಾಯಿಸಲಾಗಿದೆ.

Tags :
election
Next Article