ಹಲಕರ್ಟಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ನ. 19ರಂದು ಅಗ್ನಿ ಪ್ರವೇಶ, ನ. 20ಭವ್ಯ ರಥೋತ್ಸವ
ವಾಡಿ: ಚಿತ್ತಾಪುರ ತಾಲೂಕಿನ ಸುಕ್ಷೇತ್ರ ಹಲಕರ್ಟಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಕಟ್ಟಿಮನಿ ಹಿರೇಮಠದ ಮುನೀಂದ್ರ ಶಿವಾಚಾರ್ಯರ ನೇತೃತ್ವದಲ್ಲಿ ನ.19 ರಂದು ರಾತ್ರಿ ಅಗ್ನಿಪ್ರವೇಶ, ನ 20 ರಂದು ಸಂಜೆ 6 ಗಂಟೆಗೆ ಸಹಸ್ರಾರು ಭಕ್ತರ ಮಧ್ಯೆ ಭವ್ಯ ರಥೋತ್ಸವ ನಡೆಯಲಿದ್ದು. ತನ್ನನಿಮಿತ್ತ ನ 15ರಿಂದ ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ಈ ಕುರಿತು ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಗುರುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ವೀರಭದ್ರೇಶ್ವರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನೀಂದ್ರ ಶಿವಾಚಾರ್ಯ, ಪ್ರತಿ ವರ್ಷದ ಕಾರ್ಯಕ್ರಮದಂತೆ ಅದ್ದೂರಿ ಜಾತ್ರಾ ಉತ್ಸವಕ್ಕೆ ಭರ್ಜರಿ ತಯಾರಿ ನಡೆದಿದೆ ಎಂದರು.
ನ. 15 ರಂದು ರಾತ್ರಿ 10 ಗಂಟೆಗೆ ಚಿಕ್ಕವೀರಪ್ಪ ಅವರ ಮನೆಯಿಂದ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಸಕಲ ವಾಧ್ಯಗಳೊಂದಿಗೆ ಅಂಬಲಿ ಬಂಡಿ ತರಲಾಗುವದು. ನ.16 ರಂದು ಸಂಜೆ 4 ಗಂಟೆಗೆ ಜೋಡು ಪಲ್ಲಕ್ಕಿಯೊಂದಿಗೆ ರುದ್ರಬಸವಣ್ಣಗೆ ಹೋಗುವದು, ಸಂಜೆ 6 ಗಂಟೆಗೆ ಚೌಡಮ್ಮನ ಗಂಗಸ್ಥಾಳಕ್ಕೆ ಹೋಗುವದು.
ನ. 18 ರಂದು ರಾತ್ರಿ 1 ಗಂಟೆಗೆ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿಕಳ್ಳ ಸರಪಳಿ ಹರಿಯುವದು, 19 ರಂದು ಸಂಜೆ ೪ ಗಂಟೆಗೆ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ದೈವದ ಸರಪಳಿ ಹರಿಯುವದು, ವಗ್ಗಯನವರಿಗೆ ಸನ್ಮಾನ ನಡೆಯುವದು. ರಾತ್ರಿ ೧೧ ಗಂಟೆಗೆ ಪುರವಂತರ ಹಾಗೂ ಭಕ್ತರಿಂದ ಅಗ್ನಿಪ್ರವೇಶ, ಪುರವಂತರ ಸೇವೆ ನಡೆಯುವದು.
ನ 20ರಂದು ಸಂಜೆ ೪ ಗಂಟೆಗೆ ಚೌಡೇಶ್ವರ ಆಡುವಿಕೆ, ಹಿರೇಮಠ ಸಂಸ್ಥಾನ ಮಠದಲ್ಲಿ ಉಡಿ ತುಂಬುವದು. ಸಂಜೆ ೬ ಗಂಟೆಗೆ ಶಶಿಧರ ದೇಶಮುಖ ಮನೆಯಿಂದ ಕುಂಭ ತರುವದು. ನಂತರ ಭಕ್ತರ ಜಯಘೋಷದೊಂದಿಗೆ ಭವ್ಯ ರಥೋತ್ಸವ ನಡೆಯುವದು. ಶಂಕರ ಮಹಾದೇವ, ವೀರೇಶ ಮಹಾದೇವ ಹಳಕಟ್ಟಿ ವಿಜಯಪುರ ಅವರಿಂದ ಮದ್ದು ಸುಡುವ ಕಾರ್ಯಕ್ರಮ ನಡೆಯುವದು. ನ.19 ಹಾಗೂ 20ರಂದು ರಂದು ದಿ.ದಾನಮ್ಮ ಪುಟ್ಟಪ್ಪ ಮಲೆಬೆನ್ನೂರ ಸ್ಮರಣಾರ್ಥ ಬೆನಕೂಂಡಿ ಪರಿವಾರದಿಂದ ಮಹಾ ಪ್ರಸಾದ ವಿತರಣೆ ನಡೆಯುವದು.ಹಾಗೂ ನ 19ರಿಂದ 3 ದಿನಗಳ ಕಾಲ ರಾತ್ರಿ 10 30ರಿಂದ ಸುಂದರ ಸಾಮಾಜಿಕ ನಾಟಕ ಪ್ರದರ್ಶನ ನಡೆಯುವದು ಎಂದು ಅವರು ತಿಳಿಸಿದರು.