ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಹಾವೇರಿಗೆ ವಂದೇ ಭಾರತ ರೈಲು ನಿಲುಗಡೆಗೆ ಕ್ರಮ ವಹಿಸಲು ಸೂಚನೆ

04:52 PM Sep 27, 2024 IST | Samyukta Karnataka

ಹುಬ್ಬಳ್ಳಿ: ಹಾವೇರಿ - ಗದಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರೈಲ್ವೇ ಕಾಮಗಾರಿಗಳ ನಿರ್ಮಾಣ ಹಾಗೂ ಪ್ರಗತಿ ಪರಿಶೀಲನಾ ಸಭೆಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ - ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿರವರು ನಡೆಸಿ ಹಾವೇರಿಯಲ್ಲಿ ವಂದೇ ಭಾರತ ರೈಲು ನಿಲುಗಡೆಗೆ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇಂದು ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ರೈಲ್ ಸೌಧದಲ್ಲಿ ನಡೆದ ಸಭೆಯಲ್ಲಿ ಗದಗ ಹಾವೇರಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಚಾಲನೆಯಲ್ಲಿರುವ ರೈಲ್ವೆ ಯೋಜನೆಗಳ ಪ್ರಗತಿ ಹಾಗೂ ನೂತನ ರೈಲು ಮಾರ್ಗ ಆರಂಭಿಸಲು ತ್ವರಿತಗತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.
ಗದಗ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಗದಗ - ಹೊಂಬಳ ರಸ್ತೆಯಲ್ಲಿರುವ ರೇಲ್ವೆ ಸೇತುವೆ, ಗದಗ – ಯಲವಿಗಿ ನೂತನ ರೇಲ್ವೆ ಮಾರ್ಗ, ಮುಂಡರಗಿ ತಾಲೂಕ ಹಳ್ಳಿಕೇರಿ ಹತ್ತಿರ ಕೆಳ ಸೇತುವೆ ನಿರ್ಮಾಣ, ಗದಗ – ಗಜೇಂದ್ರಗಡ – ವಾಡಿ ಮಾರ್ಗ ಕಾಮಗಾರಿ, ಗದಗ- ಬೆಟಗೇರಿ ಮಧ್ಯ ಬಳ್ಳಾರಿ ಗೇಟ್ ಕೆಳಭಾಗದ ಸೇತುವೆ ದುರಸ್ಥಿ, ಗದಗ - ನವಲಗುಂದ - ನರಗುಂದ ರೇಲ್ವೆ ಕಾಮಗಾರಿಗೆ ನಕ್ಷೆ ತಯಾರಿಸಿ ಅನುಮೋದಿಸುವುದು, ಕಣವಿ ಗ್ರಾಮದ ಹುಲಕೋಟಿ – ಯಲವಿಗಿ ಹೊಸ ರೈಲುಗಳ ಸರ್ವೇ ಮಾಡಿದ್ದು ಈ ಸ್ಥಳ ಬದಲಾವಣೆ ಕುರಿತು ಸಾರ್ವಜನಿಕರಿಂದ ಮನವಿ ಬಂದಿದ್ದು ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಗದಗ ಪಟ್ಟಣದ ಗಂಗಾಪುರ ಪೇಟೆಯ ಗೇಟ್ ನಂ 2ಎ ಗೆ ಮೇಲು ಸೇತುವೆ ಕಾಮಗಾರಿ ಪೂರ್ಣಗೊಳಿಸುವುದು, ಗದಗ - ಶಿರಹಟ್ಟಿ – ಯಲವಿಗಿ ರೇಲ್ವೆ ಮಾರ್ಗ ಕಾಮಗಾರಿ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸುವುದು, ಗದಗ - ಹರಪನಹಳ್ಳಿ ನೂತನ ರೈಲು ಮಾರ್ಗ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇನ್ನು ಹಾವೇರಿ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ರೈಲು ಮಾರ್ಗಗಳಲ್ಲಿ ಯಲವಿಗಿ - ಹಾವೇರಿ - ಬ್ಯಾಡಗಿ – ರಾಣೆಬೆನ್ನೂರ – ಚಳಗೇರಿ ರೇಲ್ವೆ ಸ್ಟೇಷನ್ ನವೀಕರಣ, ಲಕ್ದ್ಮೇಶ್ವರ - ಸವಣೂರ ಮಧ್ಯ ಯಲವಿಗಿ ಹತ್ತಿರದ ರೇಲ್ವೆ ಸೇತುವೆ, ರಾಣೆಬೆನ್ನೂರ - ಶಿಕಾರಿಪುರ ನೂತನ ರೇಲ್ವೆ ಮಾರ್ಗ ಭೂ ಸ್ವಾಧೀನ ಮಾಡುವುದು, ರಾಣೆಬೆನ್ನೂರ ತಾಲೂಕ ಕೋನಬೇವು - ಶಿಡಗನಾಳ ಮಧ್ಯ ರೇಲ್ವೆ ಸೇತುವೆ ನಿರ್ಮಾಣ, ಸವಣೂರ ತಾಲೂಕ ಯಲವಿಗಿ ಗ್ರಾಮದ ಹತ್ತಿರ ಸಧ್ಯದ ಕೆಳ ಸೇತುವೆ ಬದಲಾಗಿ ಮೇಲ್ ಸೇತುವೆ ನಿರ್ಮಾಣ ಮಾಡಲು ಸೂಚಿಸಿದರು.
ಇನ್ನು ಜನ ಶತಾಬ್ದಿ, ಕಿತ್ತೂರ ರಾಣಿ ಚನ್ನಮ್ಮ,ಯಶವಂತಪುರ - ವಾಸ್ಕೋ ಎಕ್ಸಪ್ರೆಸ್, ಮಂಗಳೂರ – ವಿಜಯಪುರ ಎಕ್ಸಪ್ರೆಸ್ ರೈಲನ್ನು ಯಲವಿಗಿ ಸ್ಟೇಷನ್ ನಲ್ಲಿ ನಿಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದರು.
ಈ ಸಂಧರ್ಭದಲ್ಲಿ ನೈರುತ್ಯ ರೇಲ್ವೆ ಇಲಾಖೆಯ ಜನರಲ್ ಮ್ಯಾನೇಜರ್ ಅರವಿಂದ ವಾಸ್ತವ್ ಸೇರಿದಂತೆ ಇಲಾಖೆಯ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Next Article