For the best experience, open
https://m.samyuktakarnataka.in
on your mobile browser.

ಹುಬ್ಬಳ್ಳಿ-ವಿಜಯಪುರ ನಡುವೆ ಮತ್ತೆ ಎರಡು ಮಲ್ಟಿ ಎಕ್ಸಲ್ ಎಸಿ ಬಸ್ ಸಂಚಾರ

09:00 PM Feb 08, 2024 IST | Samyukta Karnataka
ಹುಬ್ಬಳ್ಳಿ ವಿಜಯಪುರ ನಡುವೆ ಮತ್ತೆ ಎರಡು ಮಲ್ಟಿ ಎಕ್ಸಲ್ ಎಸಿ ಬಸ್ ಸಂಚಾರ

ಹುಬ್ಬಳ್ಳಿ : ಸಾರ್ವಜನಿಕ ಪ್ರಯಾಣಿಕರ ಬೇಡಿಕೆಯ ಮೇರೆಗೆ ಹುಬ್ಬಳ್ಳಿ ಹಾಗೂ ವಿಜಯಪುರ ನಡುವೆ ಮತ್ತೆ ಎರಡು ಮಲ್ಟಿ ಎಕ್ಸಲ್ ಎಸಿ ಬಸ್ಸುಗಳ ಸಂಚಾರವನ್ನು ಆರಂಭಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಹುಬ್ಬಳ್ಳಿ -ಬೆಳಗಾವಿ ನಡುವೆ ನಿಯಮಿತವಾಗಿ ಪ್ರಯಾಣ ಮಾಡುವವರ ಅನುಕೂಲಕ್ಕಾಗಿ ಮಲ್ಟಿ ಎಕ್ಸಲ್ ವೋಲ್ವೊ ಎಸಿ ಬಸ್ಸುಗಳು ಸಂಚರಿಸುತ್ತಿದ್ದು, ಹೆಚ್ಚು ಜನಪ್ರಿಯವಾಗಿವೆ. ಅದೇ ಮಾದರಿಯಲ್ಲಿ ಹುಬ್ಬಳ್ಳಿಯಿಂದ ಪ್ರಮುಖ ನಗರಗಳ ನಡುವೆ ಮಲ್ಟಿ ಎಕ್ಸಲ್ ವೋಲ್ವೊ ಎಸಿ ಬಸ್ಸುಗಳ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರಿಂದ ಬೇಡಿಕೆ ಬಂದಿತ್ತು.

ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಹುಬ್ಬಳ್ಳಿ ಹಾಗೂ ವಿಜಯಪುರ ನಡುವೆ ೬ ಮಲ್ಟಿ ಎಕ್ಸಲ್ ವೋಲ್ವೊ ಎಸಿ ಬಸ್ಸುಗಳ ಸಂಚಾರ ಆರಂಭಿಸಲಾಗಿತ್ತು. ಈ ಬಸ್ಸುಗಳಿಗೆ ಸಾರ್ವಜನಿಕ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮಿತವ್ಯಯಕರ ಪ್ರಯಾಣ ದರದಲ್ಲಿ ಹವಾನಿಯಂತ್ರಣ ಸೌಲಭ್ಯ ದೊರೆಯುತ್ತಿರುವುದರಿಂದ ಪ್ರಯಾಣಿಕರಿಗೆ ಬಹಳಷ್ಟು ಅನುಕೂಲವಾಗಿದೆ. ಆದ್ದರಿಂದ ಮತ್ತಷ್ಟು ಬಸ್ಸುಗಳನ್ನು ಹೆಚ್ಚಿಸುವಂತೆ ಕೋರಿ ಹುಬ್ಬಳ್ಳಿ ಹಾಗೂ ವಿಜಯಪುರ ಭಾಗದ ಸಾರ್ವಜನಿಕರಿಂದ ನಿರಂತರ ಬೇಡಿಕೆ ಬಂದಿರುತ್ತದೆ. ಈಗ ಮತ್ತೆ ಎರಡು ವೋಲ್ವೊ ಬಸ್ ಗಳ ಸಂಚಾರ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿಯಿಂದ ವಿಜಯಪುರಕ್ಕೆ ಹೋಗುವ ಬಸ್ಸುಗಳ ಸಮಯ: ಈ ಬಸ್ಸುಗಳು ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣದಿಂದ ಹೊರಟು ಹೊಸೂರು ಬಸ್ ನಿಲ್ದಾಣದ ಮೂಲಕ ಸಂಚರಿಸುತ್ತವೆ.
ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುವ ಸಮಯ ಬೆಳಿಗ್ಗೆ ೬-೨೦, ೭-೩೦, ೮-೧೫, ೧೦-೩೦, ಮಧ್ಯಾಹ್ನ ೧೨-೦೧, ೧-೩೦ ಸಂಜೆ ೬-೧೫, ಹಾಗೂ ೬-೪೫

ವಿಜಯಪುರದಿಂದ ಹುಬ್ಬಳ್ಳಿಗೆ ಆಗಮಿಸುವ ಬಸ್‌ಗಳ ಸಮಯ: ಈ ಬಸ್ಸುಗಳು ಕೇಂದ್ರ ಬಸ್ ನಿಲ್ದಾಣದಿಂದ ಹೊರಡುತ್ತವೆ. ಬೆಳಿಗ್ಗೆ ೬-೦೦,೧೧-೧೦, ಮಧ್ಯಾಹ್ನ ೧೨-೪೫, ೨-೦೦, ೩-೪೫ ಸಂಜೆ ೫-೦೦, ೭-೧೦ ಹಾಗೂ ರಾತ್ರಿ ೧೧-೧೫

ಮುಂಗಡ ಬುಕಿಂಗ್; ರಿಯಾಯಿತಿ: https://www.ksrtc.in ಅಥವಾ KSRTC Mobile App ಹಾಗೂ ಬಸ್ ನಿಲ್ದಾಣಗಳಲ್ಲಿ ಮುಂಗಡ ಬುಕ್ಕಿಂಗ್ ಮಾಡಬಹುದಾಗಿದೆ.
ಒಂದೇ ಟಿಕೆಟ್ ನಲ್ಲಿ ನಾಲ್ಕು ಅಥವಾ ಹೆಚ್ಚಿನ ಸೀಟುಗಳನ್ನು ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ ಶೇಕಡ ೫ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವಾಗಿನ ಮತ್ತು ಹಿಂದಿರುಗುವ ಪ್ರಯಾಣಕ್ಕೆ ಒಂದೇ ಟಿಕೆಟ್ ಪಡೆದರೆ ಹಿಂದಿರುಗುವ ಪ್ರಯಾಣದರದಲ್ಲಿ ಶೇಕಡಾ ೧೦ರಷ್ಟು ರಿಯಾಯಿತಿ ನೀಡಲಾಗುತ್ತದೆ.