ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಹುಬ್ಬಳ್ಳಿ EV ಉತ್ಪಾದನಾ ಘಟಕ: 800 ಉದ್ಯೋಗಗಳ ಸೃಷ್ಟಿ

10:49 AM Sep 13, 2024 IST | Samyukta Karnataka

Nidec ಹುಬ್ಬಳ್ಳಿ EV ಉತ್ಪಾದನಾ ಘಟಕದಲ್ಲಿ ಹೆಚ್ಚುವರಿ ₹150 ಕೋಟಿ (ಒಟ್ಟಾರೆ ₹600 ಕೋಟಿ) ಹೂಡಿಕೆ: 800 ಉದ್ಯೋಗಗಳ ಸೃಷ್ಟಿ!

ಬೆಂಗಳೂರು: ಕೈಗಾರಿಕಾ ಶಕ್ತಿ ಕೇಂದ್ರವಾಗಿ ಕರ್ನಾಟಕವು ತನ್ನ ಸ್ಥಾನವನ್ನು ಗಟ್ಟಿಗೊಳಿಸುವುದನ್ನು ಮುಂದುವರೆಸುತ್ತಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ನಮ್ಮ ಇತ್ತೀಚಿನ ಜಪಾನ್ ಪ್ರವಾಸದ ವೇಳೆ #Nidec ಸಂಸ್ಥೆಯು ರಾಜ್ಯದಲ್ಲಿ ರೂ. 450 ಕೋಟಿ ಹೂಡಿಕೆ ಮಾಡಿ, ಹುಬ್ಬಳ್ಳಿಯಲ್ಲಿ 2,3, ಹಾಗೂ 4 ಚಕ್ರಗಳ ವಿದ್ಯುತ್ ವಾಹನ ತಯಾರಿಕಾ ಘಟಕ ಆರಂಭಿಸಲು ಒಪ್ಪಿಗೆ ಸೂಚಿಸಿತ್ತು. ಮುಂದುವರಿದಂತೆ ಹೆಚ್ಚುವರಿ ₹150 ಕೋಟಿ ಹೂಡಿಕೆಯೊಂದಿಗೆ ಇ.ವಿ. ಜೊತೆಗೆ ಡಾಟ ಸೆಂಟರ್, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ತನ್ನ ಉದ್ಯಮ ವಿಸ್ತರಣೆ ಮಾಡಲಿದೆ. ಈ ಸಂಬಂಧ #Nidec ಸಂಸ್ಥೆಯ ಮೋಶನ್ ಮತ್ತು ಎನರ್ಜಿ ವಿಭಾಗದ ಅಧ್ಯಕ್ಷರಾದ ಶ್ರೀ #MichaelBriggs ಹಾಗೂ ಅವರ ತಂಡದ ಸದಸ್ಯರು ಈ ದಿನ ನನ್ನನ್ನು ಭೇಟಿಮಾಡಿ ಮಹತ್ವದ ಮಾತುಕತೆ ನಡೆಸಿದರು. ಇದೇ ವೇಳೆ ವಿದ್ಯುತ್ ಸಂಗ್ರಹಣೆಗಾಗಿ #Nidec ಹೈಟೆಕ್ ಎನರ್ಜಿ ಶೇಖರಣಾ ಪರಿಹಾರಗಳ ಕುರಿತು ಚರ್ಚೆ ನಡೆಸಿದೆ. ಕರ್ನಾಟಕದ ಇಂಧನ ಅಗತ್ಯಗಳನ್ನು ಪೂರೈಸಲು, ರಾಜ್ಯ ಇಂಧನ ಇಲಾಖೆಯೊಂದಿಗೆ ಮತ್ತಷ್ಟು ಅಭಿವೃದ್ಧಿ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುವುದು. #Nidec ತಂಡವನ್ನು ಮುಂಬರುವ #GIM2025ಗೆ ಆತ್ಮೀಯವಾಗಿ ಆಹ್ವಾನಿಸಿದೆ ಎಂದಿದ್ದಾರೆ.

Tags :
#hubli#ಉದ್ಯೋಗ#ಕೈಗಾರಿಕೆ#ಹುಬ್ಬಳ್ಳಿ
Next Article