ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ
ರಾಯಚೂರು: ಹುಲಿಯಂತಿದ್ದ ಸಿಎಂ ಸಿದ್ದರಾಮಯ್ಯ ಈಗ ಕಾಂಗ್ರೆಸ್‌ನಲ್ಲಿ ಇಲಿಯಂತಾಗಿದ್ದಾರೆ. ಅವರ ಸ್ಥಿತಿ ಕಂಡರೆ ಅಯ್ಯೊ ಎನಿಸುತ್ತಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಲೇವಡಿ ಮಾಡಿದರು.
ನಗರದಲ್ಲಿ ಮಾಜಿ ಸಂಸದ ಬಿ.ವಿ.ನಾಯಕರ ಗೃಹಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲ ಸಮುದಾಯಗಳ ಪರ ಕಾಳಜಿ ಹೊಂದಿದ್ದ ಸಿದ್ದರಾಮಯ್ಯನವರು ಈಗ ಒಂದು ಸಮುದಾಯದ ಪರ ನಿಂತಿರುವುದು ವಿಪರ್ಯಾಸ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವ ನಾವು ಒಪ್ಪಿಲ್ಲ. ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ಗೌರವವಿದೆ. ವಿಜಯೇಂದ್ರ ಜ್ಯೂನಿಯರ್ . ಹೈಕಮಾಂಡ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರಬಹುದು. ಅದು ನಮಗೆ ಸಂಬಂಧವಿಲ್ಲ. ನಮ್ಮ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬಂದಿಲ್ಲ. ಹೀಗಾಗಿ 8-10 ನಾಯಕರು ಪಕ್ಷ ಸಂಘಟನೆಗೆ ಮುಂದಾಗಿದ್ದು, ನಾನು ಆರು ಜಿಲ್ಲೆಗಳ ಉಸ್ತುವಾರಿ ತೆಗೆದುಕೊಂಡಿದ್ದೇನೆ. ಯತ್ನಾಳ ಸೇರಿದಂತೆ ಕೆಲ ನಾಯಕರು ಉಳಿದ ಜಿಲ್ಲೆಗಳ ಹೊಣೆ ತೆಗೆದುಕೊಂಡಿದ್ದಾರೆ. ವಿಜಯೇಂದ್ರ ಇದ್ದಲ್ಲಿ ನಾನು ಹೋಗುವುದಿಲ್ಲ ಎಂದು ತಿಳಿಸಿದರು.